Union Budget ಪ್ರತಿಪಕ್ಷಕ್ಕೂ ಟೀಕಿಸದಂಥ ಸ್ಥಿತಿ: ಸಂಸದ ಕರಡಿ

By Kannadaprabha News  |  First Published Feb 17, 2022, 12:18 PM IST

*   ಆತ್ಮನಿರ್ಭರ ಭಾರತಕ್ಕಾಗಿ ಅದ್ಭುತ ಬಜೆಟ್‌ ಮಂಡನೆ
*   ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆ ಜಾರಿ
*   ನ್ಯಾಯಾಲಯದ ಆದೇಶ ಗೌರವಿಸಿ


ಕೊಪ್ಪಳ(ಫೆ.17):  ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ಅನ್ನು(Union Budget) ಪ್ರತಿಪಕ್ಷದವರು ಟೀಕೆ ಮಾಡುವುದಕ್ಕೂ ಆಗದಂತಿದೆ ಎಂದು ಸಂಸದ ಸಂಗಣ್ಣ(Sanganna Karadi) ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 39.45 ಲಕ್ಷ ಕೋಟಿ ಬೃಹತ್‌ ಗಾತ್ರದ ಬಜೆಟ್‌ ಮಂಡನೆ ಮಾಡಲಾಗಿದೆ. ಇದು ದೇಶದ ಹಿಂದಿನ ಎಲ್ಲ ಬಜೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದೆ. ಆತ್ಮನಿರ್ಭರ ಕಲ್ಪನೆಯ ಮೂಲಕ ದೇಶಿಯತೆಗೆ ಒತ್ತು ನೀಡಲಾಗಿದೆ ಎಂದರು.

2 ವರ್ಷದ ಕೋವಿಡ್‌(Covid-19) ಸವಾಲುಗಳನ್ನು ಎದುರಿಸಿಯೂ ಇಷ್ಟೊಂದು ಬೃಹತ್‌ ಗಾತ್ರದ ಬಜೆಟ್‌ ಮಂಡನೆ ಮಾಡಲಾಗಿದೆ. ಚುನಾವಣೆಯನ್ನು(Election) ಗುರಿಯಾಗಿ ಇಟ್ಟುಕೊಳ್ಳದೆ ಭವಿಷ್ಯದ ದೃಷ್ಟಿಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. 60 ಲಕ್ಷ ಉದ್ಯೋಗ(Job) ಸೃಷ್ಟಿಮಾಡಲಾಗುತ್ತದೆ. 400 ವಂದೇ ಭಾರತ ಹೊಸರೈಲು ಘೋಷಣೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿಗೆ ಒತ್ತು ನೀಡಿ 25 ಸಾವಿರ ಕೋಟಿ ನೀಡಲಾಗಿದೆ ಎಂದರು.

Tap to resize

Latest Videos

Anjaneya Birth Place Dispute: ಹನುಮಂತ ಎರಡೆರಡು ಬಾರಿ ಜನಿಸಿದನೇ?: ಸಂಸದ ಕರಡಿ

ಕೊಪ್ಪಳ(Koppal) ಜಿಲ್ಲೆಯ ರೈಲ್ವೆ ಯೋಜನೆಗಳಿಗೂ(Railway Projects) ಅಪಾರ ಪ್ರಮಾಣದ ಅನುದಾನ ನೀಡಲಾಗಿದೆ. ಮುನಿರಾಬಾದ್‌ ಮೆಹಬೂಬ ನಗರ ರೈಲ್ವೆ ಯೋಜನೆಗೆ 210 ಕೋಟಿ, ಗದಗ- ವಾಡಿ ರೈಲ್ವೆ ಯೋಜನೆ 187 ಕೋಟಿ ಹಾಗೂ ವಿವಿಧ ಸೇತುವೆ ನಿರ್ಮಾಣಕ್ಕೆ ಅಗತ್ಯ ಅನುದಾನ(Grants) ಸೇರಿದಂತೆ ಬರೋಬ್ಬರಿ 415 ಕೋಟಿ ಅನುದಾನ ನೀಡಲಾಗಿದೆ ಎಂದರು.

ಸಿಎಂಗೆ ಮನವಿ:

ರಾಜ್ಯ ಸರ್ಕಾರದ(Government of Karnataka) ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೀರಾವರಿ ಯೋಜನೆಗೆ(Irrigation Project) ಆದ್ಯತೆ ಮತ್ತು ಹೆಚ್ಚಿನ ಅನುದಾನ ನೀಡುವಂತೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸುನೀಲ್‌ ಹೆಸರೂರು, ಗಿರೀಶಾನಂದ ಹಾಗೂ ಗಣೇಶ ಹೊರತಟ್ನಾಳ ಉಪಸ್ಥಿತರಿದ್ದರು.

ನ್ಯಾಯಾಲಯದ ಆದೇಶ ಗೌರವಿಸಿ

ಪ್ರತಿಯೊಬ್ಬರೂ ನ್ಯಾಯಾಲಯದ(Court) ಆದೇಶವನ್ನು ಗೌರವಿಸಬೇಕು. ಸಮವಸ್ತ್ರ(Uniform) ಧರಿಸುವುದು ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಹೀಗಾಗಿ ನ್ಯಾಯಾಲಯದ ತೀರ್ಪು ಏನು ಬರುತ್ತದೆ ಎನ್ನುವುದನ್ನು ಕಾದು ನೋಡುವುದು ಸೂಕ್ತ ಎಂದರು. ಈ ವಿಷಯದಲ್ಲಿ ಕಾಂಗ್ರೆಸ್‌ನವರ(Congress) ನಿಲುವು ಏನು ಎನ್ನುವುದು ಗೊತ್ತಾಗುತ್ತಿಲ್ಲ. ಸದನದಲ್ಲಿಯೂ ಈ ಕುರಿತು ಪ್ರಸ್ತಾಪ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಬಂದರೆ ಬರಲಿ:

ಜನಾರ್ದನ ರೆಡ್ಡಿ ಅವರು ಗಂಗಾವತಿ ಕ್ಷೇತ್ರಕ್ಕೆ ಬರುತ್ತಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಂದರೆ ಏನು ತಪ್ಪಿದೆ? ಎಂದು ಕೇಳಿದರು. ಅವರು ಬರುವುದರಿಂದ ಅನುಕೂಲವಾದರೆ ಆಗಲಿ. ಆದರೆ, ಈಗಲೇ ಏನು ಹೇಳಲು ಆಗದು ಎಂದರು.

ರಾಜಕೀಯಕ್ಕೆ ಮಾತ್ರ ಕಾಂಗ್ರೆಸ್‌ನಿಂದ ಗಾಂಧಿ ಹೆಸರು ಬಳಕೆ: ಸಂಸದ ಕರಡಿ

ಚುನಾವಣೆ ಬರುವ ವೇಳೆ ಉಸ್ತುವಾರಿಯನ್ನು ಬದಲಾಯಿಸಿದ್ದು ಸರಿಯಲ್ಲ. ಇದನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದೇನೆ. ಆದರೆ ಹೈಕಮಾಂಡ್‌ ಯಾವ ಕಾರಣಕ್ಕಾಗಿ ಈ ತೀರ್ಮಾನ ತೆಗೆದುಕೊಂಡಿದೆ ಎನ್ನುವುದು ಗೊತ್ತಿಲ್ಲ ಎಂದರು.
ನಾನೀಗ ಸಂಸದನಿದ್ದೇನೆ...ನಾನು ಈಗ ಸಂಸದನಿದ್ದೇನೆ. ವಿಧಾನಸಭಾ ಚುನಾವಣೆಯ(Assembly Elections) ಟಿಕೆಟ್‌ ಕುರಿತು ಹೇಗೆ ಮಾತನಾಡಲಿ? ಎಂದು ಸಂಸದ ಸಂಗಣ್ಣ ಕರಡಿ ಅವರು ಪ್ರಶ್ನಿಸಿದರು.

ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುತ್ತಿರಾ? ಎನ್ನುವ ಪ್ರಶ್ನೆಗೆ ಅವರು ಮೇಲಿನಂತೆ ಕೇಳಿದರು.

ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿರಬಹುದು. ಅದು ಅವರ ಹಕ್ಕು. ನಾನು ಪ್ರಶ್ನೆ ಮಾಡುವುದಿಲ್ಲ. ಆದರೆ, ನಾನಂತೂ ಈಗ ಸಂಸದನಿದ್ದೇನೆ ಎಂದಷ್ಟೇ ಹೇಳಿದರೆ ಹೊರತು ನೇರವಾಗಿ ಉತ್ತರಿಸಲಿಲ್ಲ.
 

click me!