ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಡಿಕೇರಿಯಲ್ಲಿ ಕೊಡಗಿನ ಕಾಫಿ ರುಚಿ ಸವಿದಿದ್ದಾರೆ. ಮಡಿಕೇರಿಯಲ್ಲಿ ನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದ ಅವರು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಸಂದರ್ಭ ಕೊಡಗಿನ ಕಾಫಿಯನ್ನು ಕೆಳಿ ಕುಡಿದಿದ್ದಾರೆ.
ಮಡಿಕೇರಿ(ಅ.02): ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೊಡಗಿನ ಕಾಫಿಯನ್ನು ಕೇಳಿ ಪಡೆದು ಕುಡಿದು ಆಸ್ವಾದಿಸಿದ್ದಾರೆ. ಮಡಿಕೇರಿಯಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದ ರವಿಚಂದ್ರನ್ ಅವರು ಕೊಡಗಿನ ಕಾಫಿಯನ್ನು ಕೇಳಿ ಪಡೆದಿದ್ದಾರೆ.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರುಗುಂದದಲ್ಲಿನ ಕುಮಾರೀಸ್ ಕಿಚನ್ ಹೋಂ ಸ್ಟೇಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲಾ ಮಕ್ಕಳಿಗೆ, ತಲಕಾವೇರಿಗೆ ತೆರಳುವ ಪ್ರವಾಸಿಗರಿಗೆ, ಸ್ಥಳೀಯರಿಗೆ ಉಚಿತ ಕಾಫಿ ನೀಡಿ ಕಾಫಿಯ ಮಹತ್ವ ತಿಳಿಸಲಾಯಿತು. ಸಂಜೆಯವರೆಗೂ ಸಂಸ್ಥೆ ವತಿಯಿಂದ ಸ್ವಾದಿಷ್ಟ ಮತ್ತು ಬಿಸಿ ಕಾಫಿ ವಿತರಿಸಲಾಯಿತು.
ಕಾಫಿನಾಡಿನ ಕ್ರೀಡಾಪಟು ರಕ್ಷಿತಾಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕೊಹ್ಲಿ!
ಪ್ರವಾಸಿಗರಿಗೆ ಉಚಿತ ಕಾಫಿ
ಈ ಸಂದರ್ಭ ಮಾತನಾಡಿದ ಸಂಸ್ಥೆ ಅಧ್ಯಕ್ಷೆ ಚಿತ್ರ ಸುಬ್ಬಯ್ಯ, ಮೂರು ವರ್ಷಗಳಿಂದ ಪ್ರವಾಸಿಗರಿಗೆ ಉಚಿತ ಕಾಫಿಯನ್ನು ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಸಂದರ್ಭ ನೀಡುವ ಮೂಲಕ ಕಾಫಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಾಫಿ ಬೆಳೆಯಲು ತಾಂತ್ರಿಕ ಸಹಾಯ, ಪೂರಕ ವೈಜ್ಞಾನಿಕ ಸೇವೆಯ ಬಗ್ಗೆ ಕಾರ್ಯಾಗಾರಗಳನ್ನು ಸಂಸ್ಥೆ ವತಿಯಿಂದ ಆಯೋಜಿಸಲಾಗುತ್ತಿದೆ. ಮಹಿಳಾ ಬೆಳೆಗಾರರಿಗೆ ಕೃಷಿಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಾಫಿ ಸೇವನೆ ಉತ್ತೇಜನ ಅಗತ್ಯವಿದೆ:
ನಾನಾ ಕಾರಣಗಳಿಂದ ಕಾಫಿ ಉದ್ಯಮ ಸಂಕಷ್ಟದಲ್ಲಿದ್ದು, ಕಾಫಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಇಂಥ ಸ್ಥಿತಿಯಲ್ಲಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವನೆ ಉತ್ತೇಜಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಭಾರತದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಕಾಫಿ ಬಳಕೆಯಾದಲ್ಲಿ ಜಾಗತಿಕ ಮಾರುಕಟ್ಟೆಯನ್ನು ಅವಲಂಬಿಸುವ ಸ್ಥಿತಿ ಬೆಳೆಗಾರರಿಗೆ, ಉದ್ಯಮಿಗಳಿಗೆ ಬರಲಾರದು. ಹೀಗಾಗಿಯೇ ಅಂತಾರಾಷ್ಟ್ರೀಯ ಕಾಫಿ ದಿನದಂದು ಕಾಫಿಯ ಮಹತ್ವ ಸಾರಲಾಗುತ್ತಿದೆ ಎಂದು ತಿಳಿಸಿದರು.
ದಸರಾ: ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ದಿನವೇ ಕುರ್ಚಿಗಳೆಲ್ಲ ಖಾಲಿ
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ, ಜಂಟಿ ಕಾರ್ಯದರ್ಶಿ ಮುಕ್ಕಾಟೀರ ಜ್ಯೋತಿಕಾ ಬೋಪಣ್ಣ, ಪ್ರಮುಖರಾದ ಕಾಯಪಂಡ ಸುಮಾ ತಿಮ್ಮಯ್ಯ, ಕುಟ್ಟೇಟಿರ ಕುಮಾರಿ ಕುಂಞಪ್ಪ, ಕುಟ್ಟೇಟಿರ ಗ್ರೇಸಿ ಉದಯ್ ಹಾಜರಿದ್ದರು. ಸಿಪಿಎ ಅಧ್ಯಕ್ಷ, ಬೆಳ್ಯಪ್ಪ ಮಣಿ ಕುಂಜ್ಞಪ್ಪ ಹಾಜರಿದ್ದರು.
ಕೊಡಗಿನ ಸ್ವಾದಿಷ್ಟಕಾಫಿ ಸವಿದ ಕ್ರೇಜಿಸ್ಟಾರ್!
ಕಾಫಿ ಜಾಗೃತಿ ಅಭಿಯಾನದ ಸಂದರ್ಭ ಕುಮಾರೀಸ್ ಹೋಂಸ್ಟೇ ಪಕ್ಕದಲ್ಲಿಯೇ ರವಿಬೋಪಣ್ಣ ಎಂಬ ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಮಹಿಳೆಯರಿದ್ದಲ್ಲಿಗೆ ಬಂದು ಕೊಡಗಿನ ಕಾಫಿಯೇ ಎಂದು ಕೇಳಿ ಕಾಫಿ ಸವಿದು ಸಂಭ್ರಮಿಸಿದರು.
ಲೂಸ್ ಮಾದ ಮಗಳ ನಾಮಕರಣದಲ್ಲಿ ಡಿ ಬಾಸ್!