ನ.1ರಂದೇ ಕಲಬುರಗಿ ನಿಲ್ದಾಣದಿಂದ ವಿಮಾನ ಹಾರುತ್ತಾ?

By Web Desk  |  First Published Oct 2, 2019, 12:05 PM IST

ಸಿಎಂ ಯಡಿಯೂರಪ್ಪ, ಸಂಸದ ಡಾ.ಉಮೇಶ ಜಾಧವ್‌ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ನ.1ರಂದೇ ಕಲಬುರಗಿ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಹೇಳಿದ್ದರು| ಆದರೆ ಮಂದಗತಿಯಲ್ಲಿ ಸಾಗಿದ ಕಾಮಗಾರಿಗಳು| ನ.1ರಂದು ಹಾರಾಟ ನಡೆಯಬೇಕಾದರೆ ಕೆಲಸಗಳು ಇನ್ನೂ ತ್ವರಿತಗತಿಯಲ್ಲಿ ಸಾಗಬೇಕು ಎಂದು ಅಭಿಪ್ರಾಯ ಪಡುತ್ತಿದ್ದಾರೆ ಸಾರ್ವಜನಿಕರು|  


ಕಲಬುರಗಿ(ಅ.): ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ದಿನದಂದೆ ಲೋಹದ ಹಕ್ಕಿ ಹಾರುವುದೆ? ಎಂಬ ಪ್ರಶ್ನೆ ಇದೀಗ ಕುತೂಹಲ ಕೆರಳಿಸಿದೆ. ಏಕೆಂದರೆ ಸಿಎಂ ಯಡಿಯೂರಪ್ಪ, ಸಂಸದ ಡಾ.ಉಮೇಶ ಜಾಧವ್‌ ಮೊದಲ್ಗೊಂಡು ಬಿಜೆಪಿ ನಾಯಕರೆಲ್ಲರೂ ನ.1ರಂದೇ ಕಲಬುರಗಿ ನಿಲ್ದಾಣದಿಂದ ವಿಮಾನ ಹಾರಾಟ ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆದರೆ, ವಿಮಾನ ನಿಲ್ದಾಣದಲ್ಲಿನ ಕೆಲಸಗಳು, ಪರವಾನಿಗೆ ಇತ್ಯಾದಿ ಸಂಗತಿಗಳನ್ನು ನೋಡಿದವರು ನ.1ರಂದು ಹಾರಾಟ ನಡೆಯಬೇಕಾದರೆ ಕೆಲಸಗಳು ಇನ್ನೂ ತ್ವರಿತಗತಿಯಲ್ಲಿ ಸಾಗಬೇಕು ಎಂದು ಅಭಿಪ್ರಾಯಪಡುತ್ತಿದ್ದಾರೆ. ಸಾರ್ವಜನಿಕವಾಗಿ ತೀವ್ರ ಕೂತೂಹಲ ಕೆರಳಿಸುವ ಈ ವಿಚಾರವಾಗಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಕಾಮಗಾರಿಯನ್ನು ಬೇಗನೆ ಪೂರ್ಣ ಮಾಡಲಾಗುತ್ತಿದೆ. 175 ಕೋಟಿ ಯೋಜನೆಯಲ್ಲಿ ಎಲ್ಲವೂ ಪೂರ್ಣವಾಗಿದೆ. ಎಎಐನವರು ಸೂಚಿಸಿದಂತೆ 6 ಕೋಟಿ ಹೆಚ್ಚುವರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು 20 ದಿನದಲ್ಲಿ ಮಾಡಿ ಮುಗಿಸುತ್ತೇವೆ ಎಂದು ಪಿಡಬ್ಲೂಡಿ ಎಂಜಿನಿಯರ್ ಮುಕ್ರಾದೋದ್ದೀನ್‌ ಸಭೆಗೆ ಹೇಳಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಆಗ ಚರ್ಚೆ ಶುರುವಾಯ್ತು, ಶಾಸಕ ಪ್ರಿಯಾಂಕ್‌ ಖರ್ಗೆ ಕಾಮಗಾರಿ ಬಾಕಿ ಇರುವಾಗ ನ.1 ರೊಳಗೇ ಹಾರಾಟ ಸಾಧ್ಯವೆ ಎಂದರು. ಇನ್ನೂ ಅನೇಕರು ಇದೇ ಶಂಕೆಯಲ್ಲಿ ಮಾತಿಗಿಳಿದಾಗ ಮಧ್ಯ ಪ್ರವೇಶ ಮಾಡಿದ ಡಿಸಿ ಶರತ್‌ ವಾಣಿಜ್ಯ ಸೇವೆ ಪರವಾನಿಗೆಗಾಗಿ ವಿಮಾನಯಾನ ಪ್ರಾಧಿಕಾರದವರು 2 ದಿನದ ಹಿಂದಷ್ಟೆ ನಾಗರಿಕ ವಿಮಾನಯಾನ ಸೇವೆಗಳ ಪ್ರಧಾನ ನಿರ್ದೇಶಕರಿಗೆ ಪರವಾನಿಗೆ ಕೇಳಿ ಪತ್ರ ಬರೆದಿದೆ ಎಂದು ಹೇಳಿದರು.

ಅವರು ಪರವಾನಿಗೆ ಕೇಳುವಲ್ಲಿ ವಿಳಂಬವಾಗಿದೆ ಎಂದು ನೇರವಾಗಿ ಹೇಳದೆ ಹೋದರೂ ಪರವಾನಿಗೆ ಪಡೆಯುವಲ್ಲಿ ತುಸು ವಿಳಂಬವಾದರೂ ಆಗಬಹುದು ಎಂಬ ಧ್ವನಿಯಲ್ಲೇ ಮಾಹಿತಿ ನೀಡಿದರು. ವಿಮಾನ ನಿಲ್ದಾಣದ ಸಂಪೂರ್ಣ ಭೂಮಿ ಎಎಐಗೆ ಹಸ್ತಾಂತರವಾದ ನಂತರವಷ್ಟೇ ಅವರು ಸದರಿ ಯೋಜನೆ ಬಗ್ಗೆ ಎಲಸ ಆರಂಭಿಸಿದ್ದಾರೆ. ಹೀಗಾಗಿ ಇದೀಗ ಪರವಾನಿಗೆಗಾಗಿ ಪ್ರಸ್ತಾವನೆ ಇಟ್ಟಿದ್ದಾರೆಂದು ಶರತ್‌ ಸಭೆಗೆ ತಿಳಿಸಿದರು.
 

click me!