ಹೊಸ ಜಿಲ್ಲೆ ರಚನೆ ಹೆರಿಗೆ ಮಾಡಿಸಿದಂತೆ : ಸಿ.ಟಿ.ರವಿ

By Kannadaprabha News  |  First Published Oct 2, 2019, 12:04 PM IST

ನೂತನ ಜಿಲ್ಲೆಯ ರಚನೆ ಸುಲಭದ ಮಾತಲ್ಲ. ಅದನ್ನು ಅತ್ಯಂತ ಜತನದಿಂದ ನೋಡಿಕೊಳ್ಳಬೇಕಾಗುತ್ತದೆ ಎಂದು ಸಚಿವ ಸಿ ಟಿ ರವಿ ಹೇಳಿದರು. 


ದಾವಣಗೆರೆ [ಅ.02]:  ಹೊಸ ಜಿಲ್ಲೆಗಳ ರಚನೆ ಮಾಡುವುದು ಹೆರಿಗೆ ಮಾಡಿಸಿದಂತೆ, ತಾಯಿ-ಕೂಸು ಇಬ್ಬರೂ ಸುರಕ್ಷಿತವಾಗಿರುವಂತೆ ನೋಡಿಕೊಳ್ಳ ಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದರು.

ಹೆರಿಗೆಯಲ್ಲಿ ತಾಯಿ, ಮಗುವು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ನೂತನ ಜಿಲ್ಲೆಗಳ ರಚನೆ ಸಂದರ್ಭದಲ್ಲೂ ಗಮನ ಹರಿಸಬೇಕಾಗುತ್ತದೆ ಎಂದು ಅವರು ನೂತನ ಜಿಲ್ಲೆಗಳ ರಚನೆಯ ವಿಚಾರವನ್ನು ಅವರು ಸಮರ್ಥಿಸಿಕೊಂಡರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗಳ ಜನರು, ಜನ ಪ್ರತಿನಿಧಿಗಳು ಹೀಗೆ ಎಲ್ಲರೊಂದಿಗೆ ಸಮಾಲೋಚನೆ ಮಾಡಿ, ಎಲ್ಲರ ಸಹಮತವನ್ನು ಪಡೆದುಕೊಂಡೇ ನೂತನ ಜಿಲ್ಲೆಗಳ ರಚನೆ ಮಾಡಲಾಗುವುದು ಎಂದರು.

Tap to resize

Latest Videos

ಕಂಪ್ಲಿ ಹಾಗೂ ವಿಜಯನಗರ ಶಾಸಕರೂ ಸೇರಿ ಅನೇಕರು ನೂತನ ಜಿಲ್ಲೆ ರಚಿಸುವಂತೆ ಮನವಿ ಸಲ್ಲಿಸಿದ್ದರು.ಹೊಸ ಜಿಲ್ಲೆಗಳು ರಚನೆಯಾದರೂ, ಅವು ಎಲ್ಲಿಯೇ ಇದ್ದರೂ ಕರ್ನಾಟಕದೊಳಗೆಯೇ ಇರುತ್ತವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯಲ್ಲಿ ಯಾವುದೇ ಅಸಮಾಧಾನವೂ ಇಲ್ಲ. 75 ವರ್ಷದವರಿಗೆ ಮುಖ್ಯಮಂತ್ರಿಯಾಗಿ ಅವಕಾಶವನ್ನು ತಮ್ಮ ಪಕ್ಷ ನೀಡಿದೆ. ಹಾಗೇ ನೋಡಿದರೆ 75 ವರ್ಷ ಆದವರನ್ನು ಪರಿಗಣನೆ ಮಾಡುತ್ತಿರಲಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದಿದ್ದರೆ ಬಿ.ಎಸ್‌,ಯಡಿಯೂರಪ್ಪನವರನ್ನು ಸೈಡ್‌ಲೈನ್‌ ಮಾಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿ 75 ವರ್ಷ ಆಗಿರುವ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಸಿಎಂ ಆಗುವುದಕ್ಕೆ ಯಾವುದೇ ಪೈಪೋಟಿಯಾಗಲೀ, ವಿರೋಧವಾಗಲೀ ಇರಲಿಲ್ಲ. ಪೈಪೋಟಿ ಇದ್ದಿದ್ದರೆ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಇದೆಯೆಂದಾದರೂ ಹೇಳಬಹುದಿತ್ತು. ಯಡಿಯೂರಪ್ಪ ಸರ್ವಾನುಮತದಿಂದಲೇ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.

click me!