ಟ್ರಬಲ್ ಶೂಟರ್‌ಗೆ ಬಂಪರ್ ಆಫರ್ : ಸಿಎಂಗೆ ಥ್ಯಾಂಕ್ಸ್ ಎಂದ ಮುಖಂಡ

By Kannadaprabha News  |  First Published Dec 2, 2020, 12:35 PM IST

ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದ್ದು ಹಲವು ಮುಖಂಡರಿಂದ  ಸಚಿವ ಸ್ಥಾನಕ್ಕೆ ಬೇಡಿ ಹೆಚ್ಚಾಗಿದೆ. ಇದೇ ವೇಳೆ ಓರ್ವ ಮುಖಂಡಗೆ ಬಂಪರ್ ಆಫರ್ ನೀಡಿದ್ದಾರೆ ಸಿಎಂ


ರಾಮನಗರ (ಡಿ.02): ನನ್ನ ಮೇಲೆ ವಿಶ್ವಾಸ ವಿರಿಸಿ ಸಚಿವ ಸ್ಥಾನ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ನಾನು ಋುಣಿಯಾಗಿರುತ್ತೇನೆ ಎಂದು ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಪ್ರತಿಕ್ರಿಯಿಸಿದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸರ್ಕಾರ ರಚನೆಯಾಗುವ ಮೊದಲೇ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡು​ವು​ದಾಗಿ ಭರವಸೆ ನೀಡಿದ್ದರು. ಕಾರಣಾಂತರಗಳಿಂದ ವಿಳಂಬವಾಗಿತ್ತು. ಇದೀಗ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.

Tap to resize

Latest Videos

ಸಂಪುಟ ಸರ್ಕಸ್‌ಗೂ ಮುನ್ನ ಸಿ ಪಿ ಯೋಗೇಶ್ವರ್‌ಗೆ ಬಂಪರ್‌ ಆಫರ್ ಕೊಟ್ಟ ಸಿಎಂ..!

ರಮೇಶ್‌ ಜಾರಕಿಹೋಳಿ ನನ್ನ ಆತ್ಮೀಯ ಸ್ನೇಹಿತರು. ಸರ್ಕಾರ ರಚನೆಯಾದಾಗಿನಿಂದ ನನಗೆ ಸಚಿವ ಸ್ಥಾನ ಸಿಗಬೇಕು ಎಂದು ಬಯಸುತ್ತಿದ್ದರು. ಆದರೆ, ಅವರೊಬ್ಬರ ಒತ್ತಡಕ್ಕೆ ಮಣಿದು ಪಕ್ಷ ಅಧಿಕಾರ ನೀಡಿಲ್ಲ. ಬಿಜೆಪಿ ಒಂದು ರಾಷ್ಟೀಯ ಪಕ್ಷವಾಗಿದ್ದು, ಯಾರದೇ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದು ಕೊಳ್ಳುವುದಿಲ್ಲ, ಎಲ್ಲವನ್ನೂ ಪರಿಗಣಿಸಿ ನಿರ್ಧಾರ ತೆಗೆದು ಕೊಳ್ಳುತ್ತದೆ ಎಂದು ತಿಳಿಸಿದರು.

ರೇಣುಕಾಚಾರ್ಯ ಅವರು ವಿರೋಧಿಸುತ್ತಿರುವುದು ಅವರ ಮಟ್ಟಿಗೆ ಸರಿ ಇರಬಹುದು. ಆದರೆ, ಅವರ ಭಾವನೆಯನ್ನೂ ಮೀರಿ ನನ್ನನ್ನು ಮಂತ್ರಿ ಮಾಡ ಬೇಕು ಎಂದು ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಗಳು ನಿರ್ಧಾರ ತೆಗೆದು ಕೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿಗಳೇ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಪಕ್ಷ ವಹಿಸುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಯೋಗೇ​ಶ್ವರ್‌ ಸ್ಪಷ್ಟಪಡಿಸಿದರು.

click me!