* ಗೋವುಗಳಿಂದ ಮನುಕುಲಕ್ಕೆ ನೂರಾರು ರೀತಿಯಲ್ಲಿ ಪ್ರಯೋಜನ
* ಗೋವುಗಳ ಉಸಿರಿನಿಂದ ಆರಂಭಗೊಂಡು ಹಾಲು, ಗಂಜಲಿನ ವರೆಗೂ ಔಷಧೀಯ ಗುಣ
* ಗೋವು ರೈತನ ಬೆನ್ನೆಲುಬು
ಬ್ಯಾಡಗಿ(ನ.08): ಗೋಹತ್ಯೆ(Cow Slaughter) ವಿಚಾರದಲ್ಲಿ ಧಾರ್ಮಿಕವಾಗಿ ವೈರುಧ್ಯ ನಿಲುವು ಸೃಷ್ಟಿಯಾಗಿದ್ದು, ಗೋಹತ್ಯೆ ವಿಚಾರ ರಾಜಕೀಯ(Politics) ಅಸ್ತ್ರವಾಗುವುದು ಬೇಡ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ(Virupakshappa Ballary) ಹೇಳಿದರು.
ತಾಲೂಕಿನ ಮೋಟೆಬೆನ್ನೂರಿನ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಗೋಪೂಜೆ(Gopooja) ನೆರವೇರಿಸಿ ಮಾತನಾಡಿದರು. ಗೋವುಗಳಿಂದ(Cow) ಮನುಕುಲಕ್ಕೆ ನೂರಾರು ರೀತಿಯಲ್ಲಿ ಪ್ರಯೋಜನವಿದೆ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಅವುಗಳ ಉಸಿರಿನಿಂದ ಆರಂಭಗೊಂಡು ಹಾಲು, ಗಂಜಲಿನ ವರೆಗೂ ಔಷಧೀಯ ಗುಣ ಹೊಂದಿವೆ ಎಂದರು.
undefined
ಗೋವುಗಳ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ
ಗೋಹತ್ಯೆ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಅಸ್ತ್ರವಾಗಿದೆ. ದೇವರಿಗೆ(God) ಸಮಾನವೆಂಬ ಪೂಜ್ಯನೀಯ ಭಾವನೆ ಹೊಂದಿರುವ ಭಾರತದಲ್ಲೇ(India) ಅವುಗಳನ್ನು ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದೆ. ಗೋಹತ್ಯೆ ನಿಷೇಧಕ್ಕೆ(Cow Slaughter Act) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿವೆ. ಆದಾಗ್ಯೂ, ಒಂದು ವರ್ಗದ ಮತಗಳನ್ನು ಪಡೆಯುವ ದೃಷ್ಟಿಯಿಂದ ವಿಪಕ್ಷಗಳು ಆಹಾರ ಪದ್ಧತಿ ನೆಪದಲ್ಲಿ ಗೋಮಾಂಸ(Beef) ಭೋಜನಕ್ಕೆ ಬೆಂಬಲ ಸೂಚಿಸುತ್ತಿವೆ. ಆದರೆ, ಗೋಮಾಂಸ ತಿನ್ನಲು ಯೋಗ್ಯ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ರಾಜಕೀಯ ಅಸ್ತ್ರವಾಗಿ ಎಂದಿಗೂ ಗೋಹತ್ಯೆ ನಡೆಯದಿರಲಿ ಎಂದು ಹೇಳಿದರು.
ನಶಿಸುವ ಹಂತದಲ್ಲಿ ಜವಾರಿ ತಳಿ:
ಗೋವುಗಳ ಸಂರಕ್ಷಣೆ ಜೊತೆಗೆ ಸ್ಥಳೀಯವಾಗಿ ಲಭ್ಯವಿರುವ ಜವಾರಿ ತಳಿ ಮಾಯವಾಗುತ್ತಿದೆ. ಇದರಿಂದ ಒಂದು ತರಹದ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅವುಗಳನ್ನು ಕಳೆದುಕೊಂಡ ನಾವು ಮುಂದೊಂದು ದಿನ ಆರೋಗ್ಯಕರ ವಾತಾವರಣಕ್ಕಾಗಿ ಅಲೆಯಬೇಕಾಗುತ್ತದೆ. ಗೋವುಗಳ ರಕ್ಷಣೆಯಲ್ಲಿ ಎಲ್ಲರೂ ಸಾರ್ವತ್ರಿಕ ಹೊಣೆಗಾರಿಕೆ ತೋರುವ ಅಗತ್ಯವಿದೆ ಎಂದರು.
ಪುರಾಣದಲ್ಲಿ ಗೋವುಗಳ ಉಲ್ಲೇಖ:
ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ಮಹಾಭಾರತದ(Mahabharat) ಕಾಲಘಟ್ಟದಲ್ಲಿ ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಶ್ರೀಕೃಷ್ಣ ಗೋವರ್ಧನಗಿರಿ ಎತ್ತಿ ಹಿಡಿದು ಗೋಪಾಲಕರಿಗೆ ರಕ್ಷಣೆ ನೀಡಿದ ಎಂಬ ಪ್ರತೀತಿಯಿದೆ. ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತಿತ್ತು. ಈ ಸವಿ ನೆನಪಿಗಾಗಿ ಬಲಿಪಾಡ್ಯ ದಿನ ಗೋಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ಸಕಲವನ್ನು ನೀಡುವ ಗೋಮಾತೆಯನ್ನು ಪೂಜಿಸೋಣ; ಸಂರಕ್ಷಿಸೋಣ ಎಂದರು.
ಕಾರ್ಯಕ್ರಮದಲ್ಲಿ ಪಿಡಿಒ ಸತೀಶ ಮೂಡೇರ ಸೇರಿದಂತೆ ಗ್ರಾಮದ ಮುಖಂಡರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
Gopooja| ರಾಜ್ಯದ ದೇಗುಲಗಳಲ್ಲಿ ದೀಪಾವಳಿ ಗೋಪೂಜೆ
ಗೋವು ರೈತನ ಬೆನ್ನೆಲುಬು: ರೇವಣಸಿದ್ದೇಶ್ವರ ಸ್ವಾಮೀಜಿ
ಶಿಗ್ಗಾಂವಿ: ರೈತ(Farmers) ಈ ದೇಶದ ಬೆನ್ನೆಲುಬಾದರೆ, ಗೋವು ರೈತನ ಬೆನ್ನೆಲುಬಾಗಿದೆ ಎಂದು ಬಂಕಾಪುರ ಅರಳೆಲೆಹಿರೇಮಠದ್ರ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳು(Revanasiddeshwara Swamiji) ಹೇಳಿದರು.
ತಾಲೂಕಿನ ಬಂಕಾಪುರದಲ್ಲಿ ದೀಪಾವಳಿ ಹಬ್ಬದಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ(Renukadevi Yellamma Temple) ಆವರಣದಲ್ಲಿ ನೂತನ ಪರಶುರಾಮ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಹಾಗೂ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ಗೋವು ಮನುಷ್ಯನ ಆರೋಗ್ಯಯುತ ಬೆಳವಣಿಗೆಗೆ ಅಮೃತ ಸಮಾನವಾದ ಹಾಲನ್ನು ನೀಡಿ ತಾಯಿ ಸ್ಥಾನ ಪಡೆದಿದೆ. ಗೋಮಾತೆಯನ್ನು ಅನಾದಿಕಾಲದಿಂದಲೂ ಇಂದಿನ ವರೆಗೂ ಪೂಜಿಸಲಾಗುತ್ತಿದೆ ಎಂದು ಹೇಳಿದರು.
ಗೋವಿನ ಸಗಣಿಯೂ ರೈತನ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಗೋಮಾತೆಯನ್ನು ದೀಪಾವಳಿಯಂದು ರಾಜ್ಯಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ಪೂಜಿಸಲು ಸರ್ಕಾರ ನಿರ್ದೇಶನ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ರೇಣುಕಾ ಯಲ್ಲಮ್ಮ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪ್ಪಿನ, ಹಿರಿಯರಾದ ಗದಿಗೆಪ್ಪ ಕೂಲಿ, ನರಸಿಂಗ ಪುಕಾಳೆ, ರಮೇಶ ಮಾಳಗಿಮನಿ, ಪಿ.ಡಿ.ಕೋರಿ, ನೀಲಕಂಠಪ್ಪ ನರೇಗಲ್, ಬಸವರಾಜ ಕುರಗೋಡಿ, ಗಂಗಾಧರ ಬಡ್ಡಿ, ಮೌನೇಶ ಕುರಗೋಡಿ, ದೇವಣ್ಣ ಹಳವಳ್ಳಿ, ನಿಂಗಪ್ಪ ಕೋರಿ, ಮಹೇಶ ಪುಕಾಳೆ, ಗಂಗಾಧರ ಪೂಜಾರ, ರಾಮಣ್ಣ ಕುರಗೋಡಿ, ಚಂದ್ರಶೇಖರ ಕೋರಿ ಇತರರಿದ್ದರು.