
ಶಿವಮೊಗ್ಗ (ಏ.8): ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ ಘಟನೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಸಾಮಾನ್ಯವಾಗಿ ಕರುಗಳು ಜನಿಸಿದಾಗ ನಾಲ್ಕು ಕಾಲುಗಳನ್ನ ಹೊಂದಿರುತ್ತಾರೆ ಆದರೆ ಹನುಮಂತಪ್ಪ ಅವರ ಮನೆಯ ಹಸುವಿಗೆ ಜನಿಸಿರುವ ಕರುವಿಗೆ ನಾಲ್ಕು ಕಾಲುಗಳ ಬದಲಿಗೆ ಆರು ಕಾಲುಗಳಿದೆ. ಇದನ್ನು ಕಂಡು ಹನುಮಂತಪ್ಪ ಮೊದಲಿಗೆ ಆಶ್ಚರ್ಯಪಟ್ಟಿದ್ದಾನೆ. ಹಿಮದೆ ಯಾವತ್ತೂ ಈ ರೀತಿ ಜನಿಸಿದ ಬಗ್ಗೆ ಕೇಳಿರಲಿಲ್ಲ, ನೋಡಿರಲಿಲ್ಲ. ಈ ಕರು ಸದ್ಯ ಆರೋಗ್ಯವಾಗಿದ್ದು, ಹಿಂಬದಿ ಹೆಚ್ಚುವರಿ ಕಾಲುಗಳಿರುವುದರಿಂದ ನಿಲ್ಲಲು ಕಷ್ಟಪಡುತ್ತಿದೆ. ಈ ರೀತಿಯ ಘಟನೆಗಳು ಸಾಮಾನ್ಯವಾಗಿ ಅನುವಂಶೀಯ ವ್ಯತ್ಯಾಸಗಳಿಂದ ಸಂಭವಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ವಿಚಿತ್ರ ಜನನ ಸಾಮಾನ್ಯವಾಗುತ್ತಿದೆ. ಇ ರಾಜ್ಯದ ವಿವಿಧ ಭಾಗಗಳಲ್ಲಿ ಹಸುಗಳು ಎರಡು ಕಾಲು, ಎರಡು ತಲೆ ಅಥವಾ ಒಂದೇ ಬಾರಿ ಮೂರು-ನಾಲ್ಕು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸುದ್ದಿಗಳು ವರದಿಯಾಗಿವೆ ಎಂದು ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.