
ಬೆಂಗಳೂರು(ಜು.29): ಕೊರೋನಾ ರ‍್ಯಾಪಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂದು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತನ ಮೊಬೈಲ್‌ಗೆ ನೆಗೆಟಿವ್ ಎಂದು ಸಂದೇಶ ಕಳುಹಿಸಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಜು.24ರಂದು ನಡೆಸಿದ್ದ ರಾರಯಪಿಡ್ ಟೆಸ್ಟ್‌ನಲ್ಲಿ ಯುವಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದಿದ್ದರು. ಅಂದೇ ಆತನನ್ನು ಬೆಂಗಳೂರಿನ ಜ್ಞಾನ ಭಾರತಿ ಕ್ಯಾಂಪಸ್ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕ್ವಾರಂಟೈನ್ ಮಾಡಿದ್ದರು.
ಕೊರೋನಾ ರಣಕೇಕೆ: ಆಸ್ಪತ್ರೆಯಲ್ಲಿ ಬೆಡ್ ಇಲ್ಲ... ಮನೆಯಲ್ಲಿ ಇರಿ ಅಂತಿದೆ ಧಾರವಾಡ ಜಿಲ್ಲಾಡಳಿತ..!
ಆದರೆ ಮರುದಿನ ಜು.25 ರಂದು ಆತನ ಮೊಬೈಲ್‌ಗೆ ಕೊರೋನಾ ನೆಗೆಟಿವ್ ಬಂದಿದೆ ಎಂದು ಸಂದೇಶ ಬಂದಿದೆ. ಇದರಿಂದ ಯುವಕ ಆತಂಕಕ್ಕೆ ಒಳಗಾಗಿ ಸಹಾಯಕ್ಕಾಗಿ ಯಾಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆಹಾರದಲ್ಲಿ ಜಿರಳೆ: ಸಿಬ್ಬಂದಿಯಲ್ಲಿ ಆತಂಕ
ಅಧಿಕ ಬೆಡ್‌ಗಳ ವ್ಯವಸ್ಥೆ ಇರುವ ಬಿಐಇಸಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣದ ದಿನದಿಂದ ಈವರೆಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಪೂರೈಸುವ ಆಹಾರದಲ್ಲಿ ಜಿರಳೆ ಕಂಡು ಬಂದಿರುವುದಾಗಿ ಕೇಳಿಬಂದಿದೆ.
ಈ ಕೇರ್ ಸೆಂಟರ್ ಅನ್ನು ಮಂಗಳವಾರದಿಂದ ಚಿಕಿತ್ಸೆಗೆ ಮುಕ್ತಗೊಳಿಸಲು ಸಿದ್ಧಗೊಳಿಸಲಾಗಿತ್ತು. ಆದರೆ, ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವ ಮೊದಲೇ ಹಾವೊಂದು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಈಗ ಸಿಬ್ಬಂದಿಗೆ ಪೂರೈಕೆ ಮಾಡುವ ಅಹಾರದಲ್ಲಿ ಜಿರಳೆ ಕಂಡುಬಂದಿದ್ದು ಆತಂಕ ಎದುರಾಗಿದೆ.
ಹುಬ್ಬಳ್ಳಿ: ನಾಲ್ಕು ತಿಂಗಳ ಬಳಿಕ ಎಸಿ ಬಸ್ ಸಂಚಾರ ಪುನರಾರಂಭ
ಜಯನಗರದ ವೈಟ್ ಪೆಟಲ್ ಹೋಟೆಲ್‌ನಿಂದ ಬಿಐಇಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೆಲಸ ಮಾಡುವ 500 ಸಿಬ್ಬಂದಿಗೆ ಆಹಾರ ಪೂರೈಸಲಾಗುತ್ತಿದೆ. ಆಹಾರದಲ್ಲಿ ಜಿರಳೆ ಕಂಡುಬಂದಿದ್ದರಿಂದ ಸಿಬ್ಬಂದಿ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.