ದೇಶದಲ್ಲೇ ಕೊರೋನಾಗೆ ಫಸ್ಟ್ ಬಲಿಯಾಗಿದ್ದ ಕಲಬುರಗಿಯಲ್ಲಿ ಮುಂದುವರಿದ ಮರಣ ಮೃದಂಗ

Published : Jul 28, 2020, 10:42 PM IST
ದೇಶದಲ್ಲೇ ಕೊರೋನಾಗೆ ಫಸ್ಟ್ ಬಲಿಯಾಗಿದ್ದ ಕಲಬುರಗಿಯಲ್ಲಿ ಮುಂದುವರಿದ ಮರಣ ಮೃದಂಗ

ಸಾರಾಂಶ

ದೇಶದಲ್ಲೇ ಮೊದಲ ಕೊರೋನಾಗೆ ಬಲಿಯಾಗಿದ್ದ ಕಲಬುರಗಿ ಜಿಲ್ಲೆಯಲ್ಲಿ ಮರಣ ಮೃದಂಗ ಮುಂದುವರಿದಿದ್ದು, ಮಂಗಳವಾರ ಒಂದೇ ದಿನ ಮತ್ತೆ 6 ಜನ ಸಾವನ್ನಪ್ಪಿದ್ದಾರೆ

ಕಲಬುರಗಿ, (ಜುಲೈ.28): ಕೊರೋನಾ‌ ಸೋಂಕಿನಿಂದ ಕಲಬುರಗಿ ಜಿಲ್ಲೆಯ 5 ಜನ ಮತ್ತು ವಿಜಯಪುರ ಜಿಲ್ಲೆಯ ಓರ್ವರು ಸೇರಿದಂತೆ ಒಟ್ಟು 6 ಜನ ನಿಧನ ಹೊಂದಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ

ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯ 89 ವರ್ಷದ ವೃದ್ಧ (P-15458) ಜೂ.28 ರಂದು ಆಸ್ಪತ್ರೆಗೆ ದಾಖಲಾಗಿ ಜು.10 ರಂದು ನಿಧನ ಹೊಂದಿದ್ದಾರೆ.

ಆಗಸ್ಟ್‌ನಲ್ಲಿ ಏರಿಕೆಯಾಗಲಿದೆ ಕೋವಿಡ್ ಸೋಂಕಿತರ ಸಂಖ್ಯೆ: ಟಾಸ್ಕ್ ಫೋರ್ಸ್‌

ತೀವ್ರ ಉಸಿರಾಟ ತೊಂದರೆ,  ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮೆಕ್ಕಾ ಕಾಲೋನಿಯ 56 ವರ್ಷದ ಪುರುಷ (P-42296) ಜು.12 ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ಮೃತಪಟ್ಟಿದ್ದಾರೆ.

 ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ತಾಜ್ ನಗರದ 65 ವರ್ಷದ ವೃದ್ಧ (P-58391) ಜು.14 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ಸಾವನ್ನಪ್ಪಿದ್ದಾರೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡ ಹಾಗೂ ಬಳಲುತ್ತಿದ್ದ ಕಲಬುರಗಿ ನಗರದ ಹೀರಾಪುರ ಕ್ರಾಸ್ ನಿವಾಸಿ 68 ವರ್ಷದ ವೃದ್ಧ (P-64904) ಜು.18 ರಂದು ಆಸ್ಪತ್ರೆಗೆ ದಾಖಲಾಗಿ ಜು. 20 ರಂದು ನಿಧನ.

 ನ್ಯೂಮೋನಿಯಾದಿಂದ ಬಳಲುತ್ತಿದ್ದ ಕಲಬುರಗಿಯ ವಿದ್ಯಾ ನಗರದ 43 ವರ್ಷದ ಪುರುಷ (P-69465) ಜು.20 ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ಸಾವು.

ಕ ರಕ್ತದೊತ್ತಡ ಹಾಗೂ ಹೃದ್ರೋಗದಿಂದ ಬಳಲುತ್ತಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಂಡಗಿಯ 60 ವರ್ಷದ ವೃದ್ಧೆ (P-77561) ಜು.19ರಂದು ಆಸ್ಪತ್ರೆಗೆ ದಾಖಲಾಗಿ ಜು.27 ರಂದು ನಿಧನ ಹೊಂದಿದ್ದಾರೆ.

PREV
click me!

Recommended Stories

'ನನ್ನ ಬ್ರೈನ್ ಕ್ರ್ಯಾಶ್ ಆಗಿ ರೀಸ್ಟಾರ್ಟ್ ಆಯ್ತು' ಪುಣೆಯ 3BHK ಫ್ಲಾಟ್‌ನ ಬಾಡಿಗೆ ರೇಟ್ ಕೇಳಿ ಬೆಂಗಳೂರು ಟೆಕ್ಕಿ ಸೈಕ್
ಭಾರತದ ಟೆಕ್ ಸ್ಟಾರ್ಟ್‌ಅಪ್ ಫಂಡಿಂಗ್ 2026: ದೇಶದ ಎಲ್ಲಾ ಪ್ರತಿಸ್ಪರ್ಧಿ ನಗರ ಹಿಂದಿಕ್ಕಿ ಬೆಂಗಳೂರಿಗೆ ಅಗ್ರಸ್ಥಾನ!