15 ದಿನದ ಹಿಂದಕ್ಕೆ ಸರಿದ ಕೊರೋನಾ ಸಾವಿನ ಸಂಖ್ಯೆ: ಸೋಂಕಿತರ ಸಂಖ್ಯೆ ಹೆಚ್ಚು

Kannadaprabha News   | Asianet News
Published : Jul 22, 2020, 07:23 AM ISTUpdated : Jul 22, 2020, 08:03 AM IST
15 ದಿನದ ಹಿಂದಕ್ಕೆ ಸರಿದ  ಕೊರೋನಾ ಸಾವಿನ ಸಂಖ್ಯೆ: ಸೋಂಕಿತರ ಸಂಖ್ಯೆ ಹೆಚ್ಚು

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಮೃತಸಂಖ್ಯೆ ಕಳೆದ 15 ದಿನ ಹಿಂದಕ್ಕೆ ಸರಿದಿದೆ. ಆದರೆ, ಹೊಸ ಸೋಂಕಿತ ಸಂಖ್ಯೆ ಮಾತ್ರ ಸೋಮವಾರಕ್ಕಿಂತ ಹೆಚ್ಚಾಗಿದೆ.

ಬೆಂಗಳೂರು(ಜು.22): ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಮೃತಸಂಖ್ಯೆ ಕಳೆದ 15 ದಿನ ಹಿಂದಕ್ಕೆ ಸರಿದಿದೆ. ಆದರೆ, ಹೊಸ ಸೋಂಕಿತ ಸಂಖ್ಯೆ ಮಾತ್ರ ಸೋಮವಾರಕ್ಕಿಂತ ಹೆಚ್ಚಾಗಿದೆ.

ಮಂಗಳವಾರ ನಗರದಲ್ಲಿ ಒಟ್ಟು 22 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ನಗರದಲ್ಲಿ ಮೃತರ ಸಂಖ್ಯೆ 15 ದಿನಗಳ ಹಿಂದಕ್ಕೆ ಎಂದರೆ ಜು.8ರ ವೇಳೆಗೆ ಮೃತಪಡುತ್ತಿದ್ದ ಸಂಖ್ಯೆಗಿಂತ ಕಡಿಮೆಯಾಗಿದೆ. ಜು.8ರಂದು 24 ಮಂದಿ ಮೃತಪಟ್ಟಿದ್ದರು.

ಮೊದಲ ಪುಟದಲ್ಲಿ ಮಾಸ್ಕ್, ಶ್ರೀನಗರ ದಿನ ಪತ್ರಿಕೆಯ ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ!

ತದ ನಂತರ ಮೃತರ ಸಂಖ್ಯೆ 75ರವರೆಗೆ ಏರಿಕೆಯಾಗಿತ್ತು. ಇದೀಗ ಕಳೆದ ಐದು ದಿನದಿಂದ ಇಳಿಕೆಯಾಗುತ್ತಿದ್ದು, ಮಂಗಳವಾರ 22 ಬಂದು ತಲುಪಿದೆ. ಅಂತೆಯೆ ಈವರೆಗೆ ಈ ಸೋಂಕಿನಿಂದ ನಗರದಲ್ಲಿ ಬರೋಬ್ಬರಿ 720 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸೋಂಕಿತರ ಸಂಖ್ಯೆ ಹೆಚ್ಚು

ಮೃತರ ಸಂಖ್ಯೆ ಕಡಿಮೆಯಾದರೂ ಮಂಗಳವಾರ ಬರೋಬ್ಬರಿ 1,714 ಹೊಸ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪ್ರಕರಣಗಳು ಹೆಚ್ಚಳವಾಗಿವೆ. ಈ ಮೂಲಕ ನಗರದಲ್ಲಿ ಈವರೆಗೆ ಒಟ್ಟು 34,943 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 26,746 ಸಕ್ರಿಯ ಸೋಂಕು ಪ್ರಕರಣಗಳಿವೆ. ಇನ್ನು ಮಂಗಳವಾರ 520 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇವರು ಸೇರಿದಂತೆ ಈವರೆಗೆ ಒಟ್ಟು 7,476 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!..

ಈ ನಡುವೆ ಇನ್ನೂ 336 ಮಂದಿ ಕೊರೋನಾ ಸೋಂಕಿತರು ನಗರದ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರನ್ನು ಸಾಮಾನ್ಯವಾಗಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ