Covid Vaccination fraud :JDS ಶಾಸಕರ ವಿರುದ್ದ ದೂರು

By Kannadaprabha News  |  First Published Nov 26, 2021, 8:26 AM IST
  • ತುಮಕೂರು ಗ್ರಾಮಾಂತರ ಶಾಸಕ ತಮ್ಮ ಬಳಗೆರೆ ಗ್ರಾಮದ ನಿವಾಸದಲ್ಲಿ ನಡೆಸಿದ ಬೃಹತ್‌ ಕೊರೋನಾ ಲಸಿಕಾ ಅಭಿಯಾನ
  • ಕೊರೋನಾ ಲಸಿಕಾ ಅಭಿಯಾನದ ಮೇಲೆ ಅನುಮಾನ 

 ತುಮಕೂರು (ನ.26):  ಕಳೆದ ಜನವರಿ 8 ರಂದು ತುಮಕೂರು (Tumakuru) ಗ್ರಾಮಾಂತರ ಶಾಸಕ (Rural MLA) ತಮ್ಮ ಬಳಗೆರೆ ಗ್ರಾಮದ ನಿವಾಸದಲ್ಲಿ ನಡೆಸಿದ ಬೃಹತ್‌ ಕೊರೋನಾ ಲಸಿಕಾ ಅಭಿಯಾನದ (Corona Vaccination Campaign )  ಮೇಲೆ ಅನುಮಾನ ವ್ಯಕ್ತಪಡಿಸಿ ಆರ್‌ಟಿಐ (RTI) ಕಾರ್ಯಕರ್ತ ಗಿರೀಶ್‌ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ಈ ಸಂಬಂಧ ತುಮಕೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್‌ (Gourishankar) ಅವರು, ಖರೀದಿಸಿರುವ ಲಸಿಕೆ ಸಂಬಂಧ ನಮೂದಿಸಲಾಗಿರುವ ಬ್ಯಾಚ್‌ ಸಂಖ್ಯೆಯನ್ನು ಪರಿಶೀಲಿಸಲಾಗಿ, ಈ ಬ್ಯಾಚ್‌ ಸಂಖ್ಯೆಗೆ ಸಂಬಂಧಿಸಿದ ಲಸಿಕೆ(vaccination) ತುಮಕೂರು ಜಿಲ್ಲೆಗೆ ಸರಬರಾಜಾಗಿಲ್ಲ ಎಂದರು.

Tap to resize

Latest Videos

undefined

ತುಮಕೂರು ಗ್ರಾಮಾಂತರ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿರುವ ಮಾಹಿತಿಯನ್ನು ಆರ್‌ಟಿಐ ಮೂಲಕ ಪಡೆದಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗ್ರಾಮಾಂತರ ಶಾಸಕರು ಜಿಲ್ಲೆಯ ತುಮಕೂರು ಗ್ರಾಮಾಂತರ ಸಾರ್ವಜನಿಕರಿಗೆ (Publics) ನೀಡಿರುವ ಮಾಹಿತಿಯನ್ನು ಸಲ್ಲಿಸಿದ್ದು, ಇವರು ನೀಡಿರುವ ಲಸಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದಿದ್ದಾರೆ.

ಇನ್ನು ಸರ್ಕಾರದ ಅಧಿಕೃತ ಆಪ್‌ ಕೋವಿನಲ್ಲಿ (covin App) ಈ ಬ್ಯಾಚ್‌ ಸಂಖ್ಯೆಯನ್ನು ಪರಿಶೀಲಿಸಿದಾಗ, ತುಮಕೂರು ಗ್ರಾಮಾಂತರ ಶಾಸಕರು ಇಲಾಖೆಗೆ ಸಲ್ಲಿಸಿರುವ ಬ್ಯಾಚ್‌ ಸಂಖ್ಯೆಯ ಲಸಿಕೆಯು ಬೆಳಗಾವಿಯ (Belagavi) ಪ್ರಭಾಕರ್‌ ಕೋರೆ ಆಸ್ಪತ್ರೆ (hospital), ಮಂಗಳೂರಿನ (Mangaluru) ಮುಲ್ಲರ್ಸ್‌ ಆಸ್ಪತ್ರೆ ಹಾಗೂ ಎಂವಿಜೆ (MVJ) ಆಸ್ಪತ್ರೆಯಾಗಿದೆ ಎಂದು ತಿಳಿಸಿದರು.

ಹಾಗಾದರೆ ಶಾಸಕ ಗೌರಿಶಂಕರ್‌ ನೀಡಿರುವ ಬ್ಯಾಚ್‌ ಸಂಖ್ಯೆಯ ಲಸಿಕೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ ಎಂದು ಗಿರೀಶ್‌ ಮಾಹಿತಿ ನೀಡಿದರು.

ಅಲ್ಲದೆ ತುಮಕೂರು ಗ್ರಾಮಾಂತರ (Tumakuru Rural) ಶಾಸಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ತುಮಕೂರು (Tumakuru) ತಾಲೂಕು ಹೆಚ್ಚುವರಿ ಆರೋಗ್ಯಾಧಿಕಾರಿ, ಆರ್‌ಸಿಎಚ್‌ ಸೇರಿದಂತೆ ಲಸಿಕೆ ಸರಬರಾಜು ಮಾಡಿರುವ ಬೆಂಗಳೂರಿನ ಆಸ್ಪತ್ರೆ ವಿರುದ್ದವೂ ತನಿಖೆ ಮಾಡುವಂತೆ ದೂರು ಸಲ್ಲಿಸುವುದಾಗಿಯೂ ತಿಳಿಸಿದರು.

ಇನ್ನು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ ಎರಡರಿಂದ-ಎರಡೂವರೆ ಸಾವಿರ ಮಂದಿಗೆ ಲಸಿಕೆ ನೀಡಲು ಅನುಮತಿ ಪಡೆಯಲಾಗಿತ್ತು. ಆದರೆ ಗ್ರಾಮಾಂತರ ಶಾಸಕರ ಹೇಳಿಕೆಯನ್ನು ಗಮನಿಸಿದಾಗ 10 ಸಾವಿರ ಮಂದಿಗೆ ಲಸಿಕೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.

ಬಿಲ್‌ ಮೊತ್ತದಲ್ಲೂ ವ್ಯತ್ಯಾಸ

ಲಸಿಕೆ ಖರೀದಿಗೆ ನೀಡಿರುವ ಬಿಲ್‌ ಮೊತ್ತದಲ್ಲೂ ಸಾಕಷ್ಟುವ್ಯತ್ಯಾಸ ಕಂಡುಬಂದಿದೆ ಎಂದಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕರು ನೀಡಿರುವುದು ಲಸಿಕೆಯೋ, ನೀರೋ ಅಥವಾ ಡಿಸ್ಟಿಲ್‌ ವಾಟರ್‌ ಅನ್ನುವ ಅನುಮಾನವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆಯಾಗಿ ಸತ್ಯಾಸತ್ಯತೆಯ ವರದಿಯನ್ನು ಮುಂದಿಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ ಎಂದು ಗಿರೀಶ್‌ ತಿಳಿಸಿದರು.

ಬೆಂಗಳೂರಲ್ಲಿ ಮತ್ತೆ ಏರಿಕೆ  :  ನಗರದಲ್ಲಿ ಕೋವಿಡ್‌ (Covid19) ಸೋಂಕಿತ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಗುರುವಾರ 94 ಪುರುಷರು, 77 ಮಹಿಳೆಯರು ಸೇರಿದಂತೆ 171 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,55,611ಕ್ಕೆ ಏರಿಕೆಯಾಗಿದೆ. 81 ಪುರುಷರು, 66 ಮಹಿಳೆಯರು ಸೇರಿದಂತೆ 147 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,34,143ಕ್ಕೆ ಏರಿಕೆಯಾಗಿದೆ. ಈ ವರೆಗೆ ಒಟ್ಟು 16,327 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಸದ್ಯ 5141 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್‌ನಲ್ಲಿ 5, ಬೇಗೂರು ವಾರ್ಡ್‌ನಲ್ಲಿ 4, ಹೊರಮಾವು, ದೊಡ್ಡ ನೆಕ್ಕುಂದಿ, ಹಗದೂರು, ಗರುಡಾಚಾರ್‌ಪಾಳ್ಯ, ಉತ್ತರಹಳ್ಳಿ, ವಿಜ್ಞಾನ ನಗರ, ಹೂಡಿ ವಾರ್ಡ್‌ಗಳಲ್ಲಿ ತಲಾ 3, ಕೋರಮಂಗಲ ವಾರ್ಡ್‌ನಲ್ಲಿ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬನಶಂಕರಿ ದೇವಸ್ಥಾನ, ಹೊಸಕೆರೆಹಳ್ಳಿ, ದೀಪಾಂಜಲಿ ನಗರ, ಆಡುಗೋಡಿ, ಆಜಾದ್‌ನಗರ, ಕೆ.ಆರ್‌.ಮಾರುಕಟ್ಟೆ, ಚಲವಾದಿಪಾಳ್ಯ, ರಾಯಪುರ, ಜಗಜೀವನರಾಂ ನಗರ, ಹಮ್ಮಿಗೆ ನಗರ ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ಸೋಂಕು ಪತ್ತೆಯಾಗಿಲ್ಲ ಎಂದು ಬಿಬಿಎಂಪಿ(BBMP) ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!