'ಫ್ಲಿಪ್‌ಕಾರ್ಟ್, ಅಮೆಜಾನ್‌ ಶಾಪಿಂಗ್‌ಗೆ ಅವಕಾಶ : ಇದು ಸಣ್ಣವರ ಅನ್ನಕ್ಕೆ ಕಲ್ಲು'

By Suvarna NewsFirst Published May 4, 2021, 2:04 PM IST
Highlights

ಕೊರೋನಾ ಅಟ್ಟಹಾಸ ಹಿನ್ನೆಲೆ ಜನತಾ ಕರ್ಫ್ಯೂ ವಿಧಿಸಿದ್ದು ಎಲ್ಲಾ ವ್ಯಾಪಾರ ವ್ಯವಹಾರಗಳು ಬಂದ್ ಆಗಿದೆ. ಆದರೆ ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್‌ ಹಾಗೂ ಅಮೆಜಾನ್‌ಗಳಿಗೆ ಅವಕಾಶ ಕೊಟ್ಟಿದ್ದು ಈ ಸಂಬಂಧ ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. 

ಮಂಗಳೂರು (ಮೇ.04): ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಹಿನ್ನೆಲೆ ಜನತಾ ಕರ್ಫ್ಯೂ ವಿಧಿಸಿದ್ದು ಎಲ್ಲಾ ವ್ಯಾಪಾರ ವ್ಯವಹಾರಗಳು ಬಂದ್ ಆಗಿದೆ. ಆದರೆ ಆನ್ ಲೈನ್ ಶಾಪಿಂಗ್ ಸಂಸ್ಥೆಗಳಿಗೆ ಅವಕಾಶ ಕೊಟ್ಟಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್ ಜನತಾ ಕರ್ಪ್ಯೂ ಹೆಸರಲ್ಲಿ ಮೊಬೈಲ್, ಬಟ್ಟೆ, ಇಲೆಕ್ಟ್ರಾನಿಕ್ ಸೇರಿ ಎಲ್ಲಾ ಬಂದ್ ಮಾಡಲಾಗಿದೆ.  ಇವುಗಳು ಅಗತ್ಯ ಸೇವೆ ಅಲ್ಲವೆಂದು  ಕ್ಲೋಸ್ ಮಾಡಿಸಿದ್ದಾರೆ. ಆದ್ರೆ ಈ ವೇಳೆ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗೆ ಯಾಕೆ ಅವಕಾಶ ಕೊಟ್ಟಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಕೈ ನಾಯಕರ ನೆರವು : 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ ಯು.ಟಿ. ಖಾದರ್

ಇವತ್ತು ಸಣ್ಣ ಪುಟ್ಟ ಬಟ್ಟೆ ಅಂಗಡಿ, ಮೊಬೈಲ್, ಫರ್ನಿಚರ್ ಶಾಪ್ ನವರು ವ್ಯಾಪಾರ ಇಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಆದರೆ ಅವರ  ಗ್ರಾಹಕರು ಅಮೇಜಾನ್ ಸೇರಿ ಆನ್ ಲೈನ್ ಶಾಪಿಂಗ್ ಮಾಡುತ್ತಿದ್ದಾರೆ ಎಂದು ಯು.ಟಿ ಖಾದರ್ ಹೇಳಿದರು. 

ಅಲ್ಲದೇ ಹೀಗೆಯೇ ಮುಂದುವರಿದಲ್ಲಿ ನಾಳೆ ಇವರು ಅಂಗಡಿ ತೆರೆಯುವಾಗ ಗ್ರಾಹಕರು ಇರ್ತಾರಾ. ಎಲ್ಲರೂ ಆನ್‌ಲೈನ್ ಮಾರುಕಟ್ಟೆಗಳಿಗೆ ಶಿಫ್ಟ್ ಆಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ತಕ್ಷಣ ಸರ್ಕಾರ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಬಂದ್ ಮಾಡಬೇಕು ಎಂದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!