ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದೆ. ಎಲ್ಲೆಡೆ ಆಕ್ಸಿಜನ್ ಎಮರ್ಜೆನ್ಸಿ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಬಾಗಲಕೋಟೆಯಲ್ಲಿ ಸ್ವತಃ ಅಧಿಕಾರಿಗಳು ಶಾಸಕರು ಫಿಲ್ಡಿಗಿಳಿದು ಆಕ್ಸಿಜನ್ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
ಬಾಗಲಕೋಟೆ (ಮೇ.04): ಕೊರೋನಾ ಅಟ್ಟಹಾಸ ರಾಜ್ಯದಲ್ಲಿ ಹೆಚ್ಚಾಗಿದ್ದು, ಇದರಿಂದ ಆಕ್ಸಿಜನ್ ಎಮರ್ಜೆನ್ಸಿ ಉಂಟಾದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾಡಳಿತ ಆಕ್ಸಿಜನ್ ಸ್ಟೋರೇಜ್ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸುತ್ತಿದೆ.
ರಾಜ್ಯದಲ್ಲಿ ಆಕ್ಸಿಜನ್ ಎಮರ್ಜೆನ್ಸಿ ಕೇಸ್ ಗಳ ಬೆನ್ನಲ್ಲೆ ಹೆಚ್ಚುವರಿ ಆಕ್ಸಿಜನ್ ಹೊಂದಿರುವ ಆಕ್ಸಿಜನ್ ಪ್ಲಾಂಟ್ಗೆ ಬಾಗಲಕೋಟೆ ಡೀಸಿ ರಾಜೇಂದ್ರ, ಎಸ್.ಪಿ ಲೋಕೇಶ್ ಜಗಲಾಸರ್ ಮತ್ತು ಶಾಸಕ ವೀರಣ್ಣ ಚರಂತಿಮಠ ನೇತೃತ್ವದ ತಂಡ ಇಂದು ದಿಢೀರ್ ಭೇಟಿ ನೀಡಿದೆ.
ಆಕ್ಸಿಜನ್ ಸರಬರಾಜು : ಮಹತ್ವದ ನಿರ್ಧಾರ ಕೈಗೊಂಡ ಸಿಎಂ ಬಿಎಸ್‌ವೈ
ಇಲ್ಲಿನ ಆಕ್ಸಿಜನ್ ಪ್ಲಾಂಟ್ ಮುಖ್ಯಸ್ಥ ಹಷಾ೯ ಕಂಠಿ ಅವರ ಮನವೊಲಿಸಿ 3 ಟನ್ ಆಕ್ಸಿಜನ್ ಪಡೆದಿದ್ದು, ಖಾಸಗಿ ಪ್ಲಾಂಟ್ ನಿಂದ ಪಡೆದ 3 ಟನ್ ಆಕ್ಸಿಜನ್ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದೆ.
ಈಗಾಗಲೇ ಜಿಲ್ಲಾಸ್ಪತ್ರೆಯ 40 ಐಸಿಯು ಬೆಡ್ ಗಳು ಭತಿ೯ ಹಿನ್ನೆಲೆ ಆಕ್ಸಿಜನ್ ಪಡೆಯಲು ಸ್ವತಃ ಅಧಿಕಾರಿಗಳು ಹಾಗೂ ಶಾಸಕರು ಫಿಲ್ಡ್‌ಗಿಳಿದು ಸಂಗ್ರಹಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಸದ್ಯ ದಾಖಲಾಗುವ ರೋಗಿಗಳಿಗೆ ಆಕ್ಸಿಜನ್ ಅಗತ್ಯವಾಗಿ ಬೇಕಿದ್ದ ಹಿನ್ನೆಲೆಯಲ್ಲಿ ಖಾಸಗಿ ಪ್ಲಾಂಟ್ ನಿಂದ ಆಕ್ಸಿಜನ್ ಪಡೆದು ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ರವಾನೆ ಮಾಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona