ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರ ದಂಡು : ಹೊಸ ಮಾರ್ಗಸೂಚಿ

Kannadaprabha News   | Asianet News
Published : Apr 23, 2021, 02:48 PM ISTUpdated : Apr 23, 2021, 03:22 PM IST
ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರ ದಂಡು : ಹೊಸ ಮಾರ್ಗಸೂಚಿ

ಸಾರಾಂಶ

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕಿತರು ಸಾವನ್ನಪ್ಪುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವ ಬೆನ್ನಲ್ಲೇ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಇದೇ ವೇಳೆ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. 

ಚಾಮರಾಜನಗರ (ಏ.23):  ಲಾಕ್‌ಡೌನ್‌ ವೇಳೆ ಹಸಿದವರ ಪಾಲಿನ ಅನ್ನಪೂರ್ಣೆಯಾಗಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಈಗ ಮತ್ತೆ ಗ್ರಾಹಕರ ದಂಡೇ ಹರಿದು ಬರುತ್ತಿದೆ, ಈ ನಿಟ್ಟಿನಲ್ಲಿ ಗುರುವಾರ ಹೊಸ ಮಾರ್ಗಸೂಚಿಯೊಂದು ಪ್ರಕಟವಾಗಿದೆ. 

ಹೋಟೆಲ್‌, ದರ್ಶಿನಿಗಳಲ್ಲಿ ಕೇವಲ ಪಾರ್ಸೆಲ್‌ಗಷ್ಟೇ ಅವಕಾಶ ಕಲ್ಪಿಸಿರುವುದರಿಂದ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು, ಆಟೋ- ಲಾರಿ ಚಾಲಕರು, ಅಂಗಡಿ-ಮಳಿಗೆಗಳಲ್ಲಿ ಕೆಲಸ ಮಾಡುವವರು ತಿಂಡಿ-ಊಟಕ್ಕಾಗಿ ಇಂದಿರಾ ಕ್ಯಾಂಟಿನ್‌ ಆಶ್ರಯಿಸುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಪೌರಾಡಳಿತ ನಿರ್ದೇಶನಾಲಯ ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಸಿಎಂ ಜೊತೆ ಪಿಎಂ ಚರ್ಚೆ: ಆಕ್ಸಿಜನ್, ಲಸಿಕೆಗಾಗಿ ಬಿಎಸ್‌ವೈ ಮನವಿ

ಏನೇನು:  

1. ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಿ, ಸ್ಯಾನಿಟೈಸರ್‌ ನೀಡುವುದು

2. ಕ್ಯಾಂಟೀನ್‌ ನೌಕರರು ಕಡ್ಡಾಯ ಮಾಸ್ಕ್‌, ಗ್ಲೌಸ್‌ ಧರಿಸುವುದು

3. ಕ್ಯಾಂಟಿನ್‌ ಕನಿಷ್ಠ 6 ಬಾರಿ ಸ್ವಚ್ಛಗೊಳಿಸುವುದು

4. ನಿರಂತರ ಸಾರ್ವಜನಿಕ ಸಂಪರ್ಕಕ್ಕೆ ಒಳಪಡುವ ವಸ್ತು(ಕಿಟಕಿ, ನಳ, ಬಾಗಿಲು) ಸ್ವಚ್ಛಗೊಳಿಸುವುದು.

ಬೆಂಗಳೂರು ಲಾಕ್‌ಡೌನ್‌: ಇಂದಿರಾ ಕ್ಯಾಂಟೀನ್‌ ಊಟ, ತಿಂಡಿಗೆ ಹೆಚ್ಚಿನ ಬೇಡಿಕೆ

5. ತರಕಾರಿ, ಸೊಪ್ಪು, ಪಾತ್ರೆ ಬಿಸಿನೀರಿನಲ್ಲಿ ತೊಳೆಯುವುದು

6. ಸಾಧ್ಯವಾದಷ್ಟುಆಹಾರ ಪ್ಯಾಕೆಟ್‌ನಲ್ಲಿ ವಿತರಿಸುವುದು

7. ಸಾಮಾಜಿಕ ಅಂತರ, ಜನಸಂದಣಿ ಸೇರದಂತೆ ಪೊಲೀಸ್‌ ಸಹಕಾರ ಪಡೆಯಬೇಕೆಂದು  ಆದೇಶಿಸಿದ್ದಾರೆ.
 

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್