ಕೋವಿಡ್‌ ಅನುಮಾನ : ಸಾರಿಗೆ ನೌಕರ ಆತ್ಮಹತ್ಯೆ

Published : May 23, 2021, 08:28 AM ISTUpdated : May 23, 2021, 08:37 AM IST
ಕೋವಿಡ್‌ ಅನುಮಾನ : ಸಾರಿಗೆ ನೌಕರ ಆತ್ಮಹತ್ಯೆ

ಸಾರಾಂಶ

ಕೊರೋನಾ ಸೋಂಕು ಬಂದಿರಬಹುದೆಂಬ ಅನುಮಾನ ಕೆಎಸ್‌ಆರ್‌ಟಿಸಿ ನೌಕರನೊಬ್ಬ ನೇಣು ಬಿಗಿದು ಆತ್ಮಹತ್ಯೆ  ವಿಜಯಪುರ ಮೂಲದ ವ್ಯಕ್ತಿ ಮೈಸೂರಿನಲ್ಲಿ ಆತ್ಮಹತ್ಯೆ

ಮೈಸೂರು(ಮೇ.23): ತನಗೆ ಕೊರೋನಾ ಸೋಂಕು ಬಂದಿರಬಹುದೆಂಬ ಅನುಮಾನದಿಂದ ಕೆಎಸ್‌ಆರ್‌ಟಿಸಿ ನೌಕರನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 

ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸಾಸನೂರ್‌ ಗ್ರಾಮದ ರಾಮಣ್ಣಗೌಡ(31) ಆತ್ಮಹತ್ಯೆ ಮಾಡಿಕೊಂಡವರು. ರಾಮಣ್ಣ ಮೈಸೂರಿನ ಸಾತಗಳ್ಳಿ ಡಿಪೋದಲ್ಲಿ ಮೆಕಾನಿಕ್‌ ಆಗಿದ್ದು, ಇಲ್ಲಿನ ಮೇದರ್‌ ಬ್ಲಾಕ್‌ನಲ್ಲಿ ರೂಮ್‌ ಮಾಡಿಕೊಂಡು ಒಬ್ಬರೇ ವಾಸವಾಗಿದ್ದರು.

ಮೈಸೂರಿನಲ್ಲಿ ಸೋಂಕಿತರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಓಪನ್, 70 ಐಸಿಯು ಬೆಡ್‌ಗಳು ಲಭ್ಯ

 ಅನಾರೋಗ್ಯ ಕಾರಣ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು. ತನಗೆ ಕೋವಿಡ್‌ ಇರಬಹುದು ಎಂಬ ಭೀತಿಯಿಂದ ಶುಕ್ರವಾರ ಸಂಜೆ ರೂಮಿನ ಕಿಟಕಿಯ ಸರಳಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಂಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

Bengaluru; ತಿಂಗಳಿಗೆ 2 ಲಕ್ಷ ಸಂಪಾದನೆ, ಆದರೂ ಸಿಗದ 2BHK ಮನೆ; ಬೆಂಗಳೂರಿನಲ್ಲಿ ಹಳೆಯ ಮನೆಗಳತ್ತ ಜನರ ಒಲವು!
ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್