ರೈತರ ಪಶುಭಾಗ್ಯಕ್ಕೆ ಕೊರೋನಾ ಕೊಳ್ಳಿ!

By Suvarna News  |  First Published Jul 12, 2021, 3:43 PM IST
  • ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಶುಭಾಗ್ಯ ಯೋಜನೆಗೆ ಕೊರೋನಾ ಕೊಳ್ಳಿ
  • ಕೊರೋನಾ ನೆಪವೊಡ್ಡಿ ಸರ್ಕಾರ ಅನುದಾನ ಬಿಡುಗಡೆ ಮಾಡದ ಸರ್ಕಾರ
  •  ಪಶುಭಾಗ್ಯ ಪಡೆಯುವ ರೈತರು ಕನಸು ಭಗ್ನ

ವರದಿ :ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಜು.12) :  ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಶುಭಾಗ್ಯ ಯೋಜನೆಗೆ ಕೊರೋನಾ ನೆಪವೊಡ್ಡಿ ಸರ್ಕಾರ ಅನುದಾನ ಬಿಡುಗಡೆ ಮಾಡದ ಪರಿಣಾಮ ಕಳೆದ ಎರಡು ವರ್ಷದಿಂದ ಯೋಜನೆಯೆ ಸ್ಥಗಿತಗೊಂಡ ಪಶುಭಾಗ್ಯ ಪಡೆಯುವ ರೈತರು ಕನಸು ಭಗ್ನಗೊಂಡಿದೆ.

Tap to resize

Latest Videos

 ಸ್ವಾವಲಂಬಿ ಬದುಕಿಗೆ ಆಸರೆಯಾಗಿ ರಾಜ್ಯದಲ್ಲಿ ಸಹಸ್ರಾರು ರೈತರನ್ನು ಹೈನುಗಾರಿಕೆಯಲ್ಲಿ ತೊಡಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪಶುಭಾಗ್ಯ ಕಾರ್ಯಕ್ರಮ ಅನುಷ್ಟಾನಕ್ಕೆ ಅನುದಾನದ ಕೊರತೆಯಿಂದ ಕಳೆದ ವರ್ಷದಿಂದಲೇ ಯೋಜನೆಗೆ ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆಯನ್ನು  ಪಶು ಸಂಗೋಪನಾ ಇಲಾಖೆ ಕೈ ಬಿಟ್ಟಿರುವುದು ಬೆಳಕಿಗೆ ಬಂದಿದೆ.

ಕಷ್ಟದಲ್ಲಿರೋರಿಗೆ ಸರ್ಕಾರದಿಂದ ಹಸುವಿನ ಕರು ವಿತರಣೆ

ರಾಜ್ಯದ ಪಶು ವೈದ್ಯಕೀಯ ಹಾಗೂ ಪಶು ಪಾಲನಾ ಇಲಾಖೆ ಮೂಲಕ ಸರ್ಕಾರ ಪ್ರತಿ ವರ್ಷವೂ ಕೂಡ ಪಶುಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನಿಸಿ ಆಸಕ್ತ ರೈತರಿಗೆ ಸಬ್ಸಿಡಿ ಮೂಲಕ ಪ್ರತಿ ಘಟಕ್ಕೆ 55 ಸಾವಿರ ರು, ಅನುದಾನ ಬಿಡುಗಡೆ ಮಾಡುವ ಮೂಲಕ ಬಡ ರೈತರಿಗೆ ಪಶು ಭಾಗ್ಯ ಕಲ್ಪಿಸುತ್ತಿತ್ತು. ಆದರೆ ಕೊರೋನಾ ಸಂಕಷ್ಟದ ನೆಪವೊಡ್ಡಿ ಅನುದಾನದ ಕೊರತೆಯಿಂದಾಗಿ ಕಳೆದ ವರ್ಷದಿಂದ ಪಶುಭಾಗ್ಯ ಯೋಜನೆಯನ್ನೆ ಸರ್ಕಾರ ಮರೆತಿದ್ದು ಪಶುಭಾಗ್ಯದ ಕನಸು ಕಾಣುತ್ತಿರುವ ರೈತರಿಗೆ ತೀವ್ರ ನಿರಾಶೆ ಮೂಡಿಸಿದೆ. ಪ್ರತಿ ವರ್ಷ ಮೇ, ಜೂನ್ ತಿಂಗಳಲ್ಲಿ ಪಶುಭಾಗ್ಯಕ್ಕೆ ಅರ್ಜಿ ಆಹ್ವಾನಿಸಿ ಆಯಾ ಸ್ಥಳೀಯ ಪಶು ಆಸ್ಪತ್ರೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ  ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ ಕಳೆದ 2019-20 ರಲ್ಲಿ ಕೂಡ ಪಶು ಭಾಗ್ಯವನ್ನು ಅನುದಾನದ ಕೊರತೆಯಿಂದ ಕೈ ಬಿಟ್ಟ ಪಶು ಸಂಗೋಪನಾ ಇಲಾಖೆ 2020-21ನೇ ಸಾಲಿನಲ್ಲಿ  ಜುಲೈ ತಿಂಗಳಿಗೆ ಪ್ರವೇಶಿಸಿದರೂ ಪಶುಭಾಗ್ಯಕ್ಕೆ ಅನುದಾನದ ಕೊರತೆಯಿಂದ ಅರ್ಜಿ ಆಹ್ವಾನಿಸಿಲ್ಲ. 

ದೇಶದ ಮೊದಲ ಪಶು ಸಹಾಯವಾಣಿ ಆರಂಭ

   ರಾಜ್ಯದಲ್ಲಿ ಬರಪೀಡಿತ  ಅದರಲ್ಲೂ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಒಂದು ರೀತಿ ಹೈನುಗಾರಿಕಾಭಿವೃದ್ದಿಗೆ ಪಶುಭಾಗ್ಯ ಸಾಕಷ್ಟು ವರದಾನವಾಗಿತ್ತು. ಹಿಂದೆ ಸರ್ಕಾರದ ಪಶು ಭಾಗ್ಯ ಪಡೆದ ಎಷ್ಟೋ ಕುಟುಂಬಗಳು  ಇಂದು ಸ್ವಂತ ಶಕ್ತಿ ಮೇಲೆ ಕುಟುಂಬ ನಿರ್ವಹಣೆಯಲ್ಲಿ ತೊಡಗಿವೆ. ಆದರೆ ಸರ್ಕಾರ ಇತಂಹ ರೈತ ಸ್ನೇಹಿ ಕಾರ್ಯಕ್ರಮವನ್ನು ಕೊರೋನಾ ನೆಪವೊಡ್ಡಿ ಅನುದಾನ ಬಿಡುಗಡೆಗೊಳಿಸದ ಪರಿಣಾಮ ಮಹತ್ವಕಾಂಕ್ಷಿ ಯೋಜನೆ ರಾಜ್ಯದಲ್ಲಿ ಎರಡು ವರ್ಷದಿಂದ ಹಳ್ಳ ಹಿಡಿಯುವಂತೆ ಮಾಡಿದ್ದು ಪಶು ಸಂಗೋಪನಾ ಸಚಿವರು ಎಚ್ಚೆತ್ತಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಿ ಪಶುಭಾಗ್ಯ ಯೋಜನೆಯನ್ನು ಮುಂದವರೆಸಬೇಕೆಂಬ ಕೂಗು ರೈತರಿಂದ ಕೇಳಿ ಬರುತ್ತಿದೆ.

2 ವರ್ಷದಿಂದ ಪಶುಭಾಗ್ಯಕ್ಕೆ ಅನುದಾನವಿಲ್ಲ

ಅನುದಾನದ ಕೊರತೆಯಿಂದ ಕಳೆದ ಎರಡು ವರ್ಷದಿಂದ ಪಶು ಭಾಗ್ಯ ಯೋಜನೆ ಅನುಷ್ಟಾನಗೊಳ್ಳುತ್ತಿಲ್ಲ. ಪ್ರತಿ ವರ್ಷ 300 ರಿಂದ 400 ಅರ್ಜಿಗಳು ಪಶುಭಾಗ್ಯಕ್ಕೆ ಫಲಾನುಭವಿಗಳಾಗಲು ಜಿಲ್ಲೆಯ ರೈತರು ಅರ್ಜಿ ಹಾಕುತ್ತಿದ್ದರು. ಆದರೆ ಕಳೆದ ವರ್ಷದಂತೆ ಈ ವರ್ಷ ಕೂಡ ಯೋಜನೆಗೆ ಅನುದಾನ ಇಲ್ಲದೇ ಪಶುಭಾಗ್ಯ ಕಾರ್ಯಕ್ರಮ ಸದ್ಯಕ್ಕೆ ಅನುಷ್ಟಾನ ಮಾಡುತ್ತಿಲ್ಲ. ಸರ್ಕಾರ ಅನುದಾನ ಕೊಟ್ಟರೆ ಅರ್ಜಿ ಆಹ್ವಾನಿಸಲಾಗುವುದು.

ಡಾ.ಟಿ.ವಿ.ಜನಾರ್ಧನ್, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಚಿಕ್ಕಬಳ್ಳಾಪುರ,

click me!