ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್‌ : ಹಲವೆಡೆ ಸೀಲ್‌ ಡೌನ್

Kannadaprabha News   | Asianet News
Published : Aug 10, 2021, 10:21 AM IST
ಬೆಂಗಳೂರಿನಲ್ಲಿ  ಹೆಚ್ಚಿದ ಕೊರೋನಾ ಕೇಸ್‌ : ಹಲವೆಡೆ ಸೀಲ್‌ ಡೌನ್

ಸಾರಾಂಶ

 ಪಾಲಿಕೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಳ ಹಲವು ಮನೆಗಳು ಅಪಾರ್ಟ್‌ಮೆಂಟ್‌ಗಳು ಸಿಲ್‌ಡೌನ್

ಬೆಂಗಳೂರು (ಆ.10): ಪಾಲಿಕೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಳವಾಗಿದ್ದು ಮೈಕ್ರೋ ಕಂಟೈನ್‌ಮೆಂಟ್ ಗಳ ಸಂಖ್ಯೆ 160 ಏರಿಕೆಯಾಗಿದೆ. ಈ ಪೈಕಿ 79 ಅಪಾರ್ಟ್‌ಮೆಂಟ್‌ಗಳನ್ನು ಮೈಕ್ರೋ ಕಂಟೇನ್ಮೆಂಟ್‌ಗಳಾಗಿ  ಬಿಬಿಎಂಪಿ ಸೀಲ್‌ಡೌನ್‌ ಮಾಡಿದೆ. 

ಬಾನಸವಾಡಿ ಗ್ರಿನ್ ಇಂಡಿಯಾ ಮಾರುತಿ ಸೇವಾ ನಗರದ ಇಜಿಪಿಐ ಅರ್ಕೇಡಿಯಾ, ಹೂಡಿಯ ಶುಭೋದಯ ಲೇರೂಸ್‌, ಹಗದೂರಿನ ಡಿಎಸ್‌ ಆರ್‌ ಗ್ರೀನ್‌ ಫಿಲ್ಡ್‌ ಸೇರಿದಂತೆ 79 ಅಪಾರ್ಟ್‌ಮೆಂಟ್‌ಗಳು 70 ಮನೆಗಳು, 8 ಹಾಸ್ಟೆಲ್‌ಗಲು, 1 ಶಾಲೆ ಮತ್ತು 2 ಸಾರ್ವಜನಿಕ ಸ್ಥಳಗಳು ಸೆರಿ 160 ಮೈಕ್ರೋ ಕಂಟೇನ್ಮೆಂಟ್‌ ವಲಯಗಳೆಂದು ಗುರುತಿಸಲಾಗಿದೆ. 

ಕೋವಿಡ್‌ ಗುಣಮುಖರಲ್ಲಿ ಕ್ಷಯ ಪತ್ತೆಗೆ ಅಭಿಯಾನ

ಬೊಮ್ಮನಹಳ್ಳಿಯಲ್ಲಿ 113 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು,  24  ಮೈಕ್ರೋ ಕಂಟೈನ್‌ಮೆಂಟ್‌ಗಳಲ್ಲಿ 16 ಅಪಾರ್ಟ್‌ಮೆಂಟ್‌ಗಳನ್ನು  ಗುರುತಿಸಲಾಗಿದೆ. ದಾಸರಹಳ್ಳಿಯಲ್ಲಿ 13 ಸಕ್ರೀಯ ಪ್ರಕರಣಗಳಿದ್ದು, 3 ಮೈಕ್ರೊ ಕಂಟೈನ್‌ಮೆಂಟ್ ಗಳ ಪೈಕಿ ಒಂದು ಪಾರ್ಟ್‌ಮೆಂಟ್‌ ಇದೆ. 

ಪಶ್ಚಿಮ ವಲಯದಲ್ಲಿ 121 ಸೋಂಕಿತ ಪ್ರಕರಣಗಳು ಪತ್ತೆ ಮಾಡಲಾಗಿದೆ. 35  ಮೈಕ್ರೋ ಕಂಟೈನ್‌ಮೆಂಟ್‌ ವಲಯಗಳಲ್ಲಿ 17 ಅಪಾರ್ಟ್‌ಮೆಂಟ್‌ಗಳು ಇವೆ. 

ಮಹದೇವಪುರ ವಲಯಗಳಲ್ಲಿ ಸಕ್ರಿಯ 186 ಸೋಂಕಿತ ಪ್ರಕರಣಗಳು  ಇವೆ. 42 ಮೈಕ್ರೋ ಕಂಟೈನ್‌ಮೆಂಟ್  ವಲಯಗಳಲ್ಲಿ  26 ಅಪಾರ್ಟ್‌ಮೆಂಟ್‌ಗಳು ಸೇರಿವೆ. ರಾಜರಾಜೇಶ್ವರಿ ನಗರದಲ್ಲಿ 39 ಸೋಂಕಿತ ಪ್ರಕರಣಗಳು ಇದ್ದು 10 ಮೈಕ್ರೋ ಕಂಟೈನ್‌ಮೆಂಟ್‌ಗಳು 4 ಅಪಾರ್ಟ್‌ಮೆಂಟ್‌ಗಳಿವೆ. 

ದಕ್ಷಿಣ ವಲಯದಲ್ಲಿ 20 ಕಂಟೈನ್‌ಮೆಂಟ್  ವಲಯಗಳಲ್ಲಿ 7 ಅಪಾರ್ಟ್‌ಮೆಂಟ್‌ಗಳು ಸೆರಿದಂತೆ ಒಟ್ಟು 74 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಪೂರ್ವ ವಲಯದಲ್ಲಿ 25, 6 ಮೈಕ್ರೋ ಕಂಟೈನ್‌ಮೆಮಟ್, 6 ಅಪಾರ್ಟ್‌ಮೆಂಟ್ , ಯಲಹಂಕದಲ್ಲಿ  77 ಸಕ್ರಿಯ ಪ್ರಕರಣಗಳಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ