ಝೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಜ್ಞಾನೇಂದ್ರ

Published : Aug 09, 2021, 07:13 PM IST
ಝೀರೋ ಟ್ರಾಫಿಕ್ ಬೇಡವೆಂದ ಗೃಹ ಸಚಿವ ಜ್ಞಾನೇಂದ್ರ

ಸಾರಾಂಶ

* ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದ ಗೃಹ ಸಚಿವ * ಪೊಲೀಸ್  ಇಲಾಖೆಗೆ ಮೌಖಿಕ ಸೂಚನೆ ನೀಡಿದ ಸಚಿವ * ಸರಳ ವ್ಯಸಸ್ಥೆ ಬಳಕೆಗೆ ಮುಂದಾದ ಸಚಿವ * ತೀರ್ಥಹಳ್ಳಿ ಶಾಸಕ ಕರ್ನಾಟಕದ ಗೃಹ ಸಚಿವ

ಬೆಂಗಳೂರು(ಆ.  09)  'ಜೀರೋ ಟ್ರಾಫಿಕ್ ಬೇಡ, ಸಿಗ್ನಲ್ ಫ್ರೀ ವ್ಯವಸ್ಥೆ ನನಗೆ ಬೇಡ'  ಹೌದು  ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ಸರಳತೆಗೆ ನಾಂದಿ ಹಾಡಿದ್ದಾರೆ. ವಿಶೇಷ ಸವಲತ್ತು ಬೇಡ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ ಸೌಲಭ್ಯ ಬಳಸಿಕೊಳ್ತೀನಿ. ವಿಶೇಷ ಸವಲತ್ತು ಬೇಡ ಎಂದಿರುವ ಸಚಿವರು ಪೋಲೀಸ್ ಇಲಾಖೆಗೆ ಮೌಖಿಕ ಸೂಚನೆ ನೀಡಿದ್ದಾರೆ.

ಇದು ನರೇಂದ್ರ ಮೋದಿಯವರ ಜಮಾನ ಎಂದ ಗೃಹ ಸಚಿವ

ಆಯಕಟ್ಟಿನ ಸ್ಥಾನದಲ್ಲಿ ಇರುವವರು ಇಂಥ ಸೌಲಭ್ಯ ಬಳಸಿಕೊಳ್ಳುವುದು ಹಲವು ಸಾರಿ ಟೀಕೆಗೆ ಗುರಿಯಾಗುತ್ತಿತ್ತು. ಹಿಂದೆ ಡಾ. ಜಿ. ಪರಮೇಶ್ವರ ಗೃಹ ಸಚಿವರಾಗಿದ್ದಾಗ ಝೀರೋ ಟ್ರಾಫಿಕ್ ವ್ಯವಸ್ಥೆ ಬಳಸಿಕೊಂಡು ಟೀಕೆಗೆ ಗುರಿಯಾಗಿದ್ದರು. 

 ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಸವರಾಜ ಬೊಮ್ಮಾಯಿ ಅಧಿಕಾರಕ್ಕೆ ಏರಿದರು. ಇದಾದ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಒಲಿದು ಬಂದಿತ್ತು.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!