ಬೆಂಗಳೂರು (ಜು.30): ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳ ಏರಿಳಿತ ಮುಂದುವರಿದಿದ್ದು ಗುರುವಾರ 506 ಹೊಸ ಪ್ರಕರಣ ಪತ್ತೆಯಾಗಿವೆ.
ಕಳೆದ ನಾಲ್ಕು ದಿನಗಳಂದ ನಗರದಲ್ಲಿ ಐನೂರಕ್ಕಿಂತಲೂ ಕಡಿಮೆ ಪ್ರಕರಣ ವರದಿಯಾಗಿದ್ದವು. ಜು.24ರಂದು 551 ಪ್ರಕರಣ ದಾಖಲಾಗಿತ್ತು. ಅದಾದ ಬಳಿಕ ಐನೂರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 12,26,463ಕ್ಕೆ ಏರಿಕೆಯಾಗಿದೆ.
undefined
ಕೋವ್ಯಾಕ್ಸಿನ್‌ಗೆ ತಪ್ಪದ ಪರದಾಟ..!
ಅಂತೆಯೇ ಸೋಂಕಿಗೆ 9 ಮಂದಿ ಬಲಿಯಾಗಿದ್ದು ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 15 852ಕ್ಕೆ ಏರಿಕೆಯಾಗಿದೆ. 257 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರ ಸಂಖ್ಯೆ 12 02 194ಕ್ಕೆ ಏರಿಕೆಯಾಗಿದೆ. ಮಗರದಲ್ಲಿ ಇನ್ನೂ 8416 ಸಕ್ರಿಯ ಪ್ರಕರಣಗಳಿವೆ. ಇನ್ನು ಕಂಟೈನ್‌ಮೆಂಟ್ ಜೋನ್‌ಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.