ಮಂಡ್ಯದ ದಲಿತ ಯುವತಿ ನಾಪತ್ತೆ ಮಿಸ್ಟ್ರಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಏನದು ಟ್ವಿಸ್ಟ್..? ಆಕೆ ಕಥೆ ಏನು..?
ಮಂಡ್ಯ (ನ.21): ಮಂಡ್ಯದಲ್ಲಿ ದಲಿತ ಯುವತಿ ನಾಪತ್ತೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಮಂಡ್ಯದ ಯುವಕನೊಂದಿಗೆ ಬೆಂಗಳೂರಿನ ದಲಿತ ಯುವತಿ ವಿವಾಹ ನಡೆದಿದ್ದು ಆಕೆ ಮಂಡ್ಯಕ್ಕೆ ಬಂದ ಬಳಿಕ ನಾಪತ್ತೆಯಾಗಿದ್ದಳು. ಕಳೆದ ಐದು ವರ್ಷದ ಹಿಂದೆ ಆಕೆ ನಾಪತ್ತೆ ಪ್ರಕರಣವನ್ನು ಇದೀಗ ಪೊಲೀಸರು ಬೇಧಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಯುವಕನಿಂದಲೇ ಯುವತಿಯ ಹತ್ಯೆ ನಡೆದಿದೆ. ಐದು ವರ್ಷದ ಹಿಂದಿನ ಮರ್ಡರ್ ಮಿಸ್ಟ್ರಿ ಮಂಡ್ಯ ಪೊಲೀಸರಿಂದ ಬೆಳಕಿಗೆ ಬಂದಿದೆ. ಮೇಘಶ್ರೀಯನ್ನು ಮಂಡ್ಯದ ಸ್ವಾಮಿ ಎಂಬ ಯುವಕ ಪ್ರೀತಿಸಿ ಮದುವೆಯಾಗಿದ್ದ.
ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದರಿಂದ ಒಬ್ಬಳೆ ಇದ್ದಳು : ಈ ವೇಳೆ ಅಪ್ರಾಪ್ತೆ ಮೇಲೆ ನಡೆಯಿತು ಅತ್ಯಾಚಾರ ...
ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಸ್ವಾಮಿ ಮದುವೆಯಾಗಿ ಬಂದ ಸ್ವಲ್ಪ ದಿನಕ್ಕೆ ಐದು ವರ್ಷಗಳ ಹಿಂದೆಯೇ ಮೇಘಶ್ರೀ ಕೊಂದು ನಾಲೆಗೆ ಎಸೆದು ಪ್ರಕರಣ ಮುಚ್ಚಿಹಾಕಿದ್ದ. ಇತ್ತೀಚೆಗೆ ಮೇಘಶ್ರೀ ತಾಯಿ ಮನೆಯಲ್ಲಿ ಸಿಕ್ಕ ಹುಡುಗನ ವೋಟರ್ ಐಡಿ ಹಿಡಿದು ಹುಡುಗನ ಗ್ರಾಮಕ್ಕೆ ಬಂದಿದ್ದಳು. ಅಳಿಯನ ಜೊತೆ ಮಗಳು ಇಲ್ಲದ ಹಿನ್ನೆಲೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಳು.
ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದ ಮೇಘಶ್ರಿ ತಾಯಿ ಮಹದೇವಮ್ಮ ಪ್ರಕರಣ ಬೇಧಿಸಬೇಕೆಂದು ನ್ಯಾಯ ಕೋರಿದ್ದಳು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರ ವಿಚಾರಣೆ ವೇಳೆ ಆರೋಪಿ ಪತಿಯಿಂದ ಸತ್ಯಾಂಶ ಬೆಳಕಿಗೆ ಬಂದಿದೆ.
ಐದು ವರ್ಷದ ಹಿಂದೆಯೇ ಮೇಘಶ್ರೀ ಕೊಲೆ ಮಾಡಿ ಶವವನ್ನು ನಾಲೆಗೆ ಎಸದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.