ಹೆಚ್ಚಿದ ಸೋಂಕು : ಮಂಡ್ಯ ಲಾಕ್ ಡೌನ್ ಬಗ್ಗೆ ಶೀಘ್ರ ಅಧಿಕೃತ ಆದೇಶ

By Kannadaprabha NewsFirst Published May 7, 2021, 12:02 PM IST
Highlights

ಮಂಡ್ಯ ಜಿಲ್ಲೆಯಲ್ಲಿಯೂ ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಪ್ರಕರಣ ಏರಿಕೆಯಾಗುತ್ತಲೇ ಇದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವ ಸಲುವಾಗಿ ಇಂದು ಜಿಲ್ಲೆಯ ಶಾಸಕರೊಂದಿಗೆ ಸಚಿವ ನಾರಾಯಣಗೌಡ ಸಭೆ ನಡೆಸಲಿದ್ದಾರೆ. 

ಮಂಡ್ಯ  (ಮೇ.07):  ರಾಜ್ಯದಲ್ಲಿ ಕೊರೋನಾ ಮಹಾಮಾರಿ ಆತಂಕ ಹೆಚ್ಚಾಗಿದೆ. ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಇತ್ತ ಮಂಡ್ಯ ಜಿಲ್ಲೆಯೂ ಕೋವಿಡ್ ಹಾಟ್‌ಸ್ಪಾಟ್ ಆಗುತ್ತಿದ್ದು ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ ಲಾಕ್‌ಡೌನ್ ಮಾಡುವುದು ಬಹುತೇಕ ಖಚಿತವಾಗಿದೆ. 

 ನಿರ್ಮಲಾನಂದ ನಾಥ ಸ್ವಾಮೀಜಿ ನೇತೃತ್ವದಲ್ಲಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಲಾಕ್ ಡೌನ್ ಜಾರಿ ಬಗ್ಗೆ ಇಂದು ಸಂಜೆ 4 ಗಂಟೆಗೆ  ಜನಪ್ರತಿನಿಧಿಗಳ ಸಭೆ ನಡೆಯಲಿದ್ದು, ಈ ವೇಳೆ ಅಧಿಕೃತ ಆದೇಶ ನೀಡಲಾಗುತ್ತದೆ. 

ಕೊರೋನಾ ಮಹಾಮಾರಿ ನಿಯಂತ್ರಣ ಕುರಿತು JDS ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅಲ್ಲದೇ ಸಭೆಯ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. 

ಸ್ವಂತ ದುಡ್ಡಿನಲ್ಲಿ ಪ್ರತಿದಿನ ಆಕ್ಸಿಜನ್.. ಮಂಡ್ಯ ಸಂಸದೆ ಮಾದರಿ ಹೆಜ್ಜೆ

ಸಭೆಯಲ್ಲಿ ಲಾಕ್ ಡೌನ್ ಜಾರಿಗೊಳಿಸಲು ಒತ್ತಾಯ ಕೇಳಿ ಬಂದಲ್ಲಿ ಇಂದೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಸಭೆಯಲ್ಲಿ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಭಾಗಿಯಾಗಲಿದ್ದಾರೆ.

ತಮ್ಮ ನಿರ್ಧಾರಗಳಿಗೆ ಜೆಡಿಎಸ್ ಶಾಸಕರು ವಿರೋಧಿಸುವ ಸಾಧ್ಯತೆ ಹಿನ್ನೆಲೆ  ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಾರಾಯಣಗೌಡ ನಿರ್ಮಲಾನಂದನಾಥ ಸ್ವಾಮೀಜಿ ಮೊರೆಹೋಗಿದ್ದಾರೆ.ಈ ನಿಟ್ಟಿನಲ್ಲಿಯೇ ಆದಿಚುಂಚನಗಿರಿಯಲ್ಲಿ ಸಭೆ ಆಯೋಜಿಸಿದ್ದಾರೆ. ಈ ಹಿಂದೆಯೂ ಭಿನ್ನಾಭಿಪ್ರಾಯ ಸೃಷ್ಟಿಯಾಗಿದ್ದಾಗಲೂ ಸ್ವಾಮೀಜಿ ನೇತೃತ್ವದಲ್ಲಿಯೇ ಸಚಿವ ನಾರಾಯಣಗೌಡ ಸಭೆ ನಡೆಸಿದ್ದರು.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!