ಪಕ್ಷಾತೀತವಾಗಿ ಎಲ್ಲ ರೀತಿಯ ಸಹಕಾರಕ್ಕೂ ಸಿದ್ಧ| ಕೊವೀಡ್ ಚೈನ್ ಲಿಂಕ್ ತುಂಡರಿಸಲು ಕಠಿಣ ಲಾಕ್‌ಡೌನ್ ಜಾರಿಗೊಳಿಸಿ| ಸಮುದಾಯದ ಸಹಭಾಗಿತ್ವದಿಂದ ಮಾತ್ರ ಹಿಮ್ಮೆಟ್ಟಿಸಲು ಸಾಧ್ಯ| ಜನರೂ ಕೂಡ ಸಹಕಾರ ಮಾಡ್ತಾರೆ, ಜನರಲ್ಲೂ ವಿನಂತಿ ಮಾಡುವೆ ಎಂದು ಮನವಿ ಮಾಡಿದ ಶಾಸಕ|
ವಿಜಯನಗರ(ಮೇ.07): ರಾಜ್ಯದಲ್ಲಿ ಹೆಣಗಳ ರಾಶಿ ಉರುಳುವುದನ್ನ ತಪ್ಪಿಸಲು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಬರೆದುಕೊಂಡಿರುವ ಭೀಮಾನಾಯ್ಕ್, ಕೋವಿಡ್ ಚೈನ್ ಲಿಂಕ್ ತುಂಡರಿಸಲು ಕಠಿಣ ಲಾಕ್ ಡೌನ್ ಜಾರಿಗೊಳಿಸಿ. ಈ ಕುರಿತು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ. ರಾಜ್ಯದಲ್ಲಿ ಹೆಣಗಳ ರಾಶಿ ಉರುವುದನ್ನು ತಪ್ಪಿಸಲು ಕಠಿಣ ಲಾಕ್ ಡೌನ್ ಮಾತ್ರವೇ ಸೂಕ್ತ ಪರಿಹಾರ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
undefined
ಮಾನ್ಯ ಮುಖ್ಯಮಂತ್ರಿಗಳೇ,
ನಮಸ್ತೆ 🙏
ಕೋವಿಡ್ ಚೈನ್ ಲಿಂಕ್ ತುಂಡರಿಸಲು ಕಠಿಣ ಲಾಕ್ ಡೌನ್ ಜಾರಿಗೊಳಿಸಿ. ಈ ಕುರಿತು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ. ರಾಜ್ಯದಲ್ಲಿ ಹೆಣಗಳ ರಾಶಿ ಉರುವುದನ್ನು ತಪ್ಪಿಸಲು ಕಠಿಣ ಲಾಕ್ ಡೌನ್ ಮಾತ್ರವೇ ಸೂಕ್ತ ಪರಿಹಾರ ಕ್ರಮವಾಗಿದೆ.
ಬೆಳ್ಳಂಬೆಳಿಗ್ಗೆ ಅಣ್ಣಮ್ಮ ದೇವಿ ದರ್ಶನ ಪಡೆದ ಸಿಎಂ: ಲಾಕ್‌ಡೌನ್ ಸುಳಿವು ಕೊಟ್ಟ ಬಿಎಸ್‌ವೈ
ಪಕ್ಷಾತೀತವಾಗಿ ಈ ವೇಳೆ ಎಲ್ಲ ರೀತಿಯ ಸಹಕಾರಕ್ಕೂ ಸಿದ್ಧರಿದ್ದೇವೆ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಕೊರೋನಾ ಹಿಮ್ಮೆಟ್ಟಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಬದುಕಿ ಉಳಿಯಲು, ಕುಟುಂಬದ ಸುರಕ್ಷತೆಗಾಗಿ ನಿಯಮಾವಳಿಗೆ ಸ್ಪಂದಿಸಬೇಕು ಎಂದು ವಿನಂತಿಸುವೆ ಎಂದು ಬರೆದುಕೊಂಡಿದ್ದಾರೆ.
ಪಕ್ಷಾತೀತವಾಗಿ ಈ ವೇಳೆ ಎಲ್ಲ ರೀತಿಯ ಸಹಕಾರಕ್ಕೂ ಸಿದ್ಧರಿದ್ದೇವೆ. ಸಮುದಾಯದ ಸಹಭಾಗಿತ್ವದಿಂದ ಮಾತ್ರ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಬದುಕಿ ಉಳಿಯಲು, ಕುಟುಂಬದ ಸುರಕ್ಷತೆಗಾಗಿ ನಿಯಮಾವಳಿಗೆ ಸ್ಪಂದಿಸಬೇಕು ಎಂದು ವಿನಂತಿಸುವೆ.
ಜನರ ಸಹಕಾರ !! ಬಹಳ!! ಬಹಳ !! ಮುಖ್ಯ. !!@BSYBJP
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona