ತಡರಾತ್ರಿ ತಾವೇ ಖುದ್ದು ಸ್ಥಳಕ್ಕೆ ತೆರಳಿದ ಸಂಸದರು| ಡ್ರಗ್ ಕಂಟ್ರೋಲರ್ ರಾಜೇಶ್, ಮಹೇಶ್ ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ ತಕ್ಷಣ ಆಕ್ಸಿಜನ್ ತರಿಸಿ ಜಿಲ್ಲೆಯಲ್ಲಿ ಆಗಬಹುದಾದ ಸಂಭಾವ್ಯ ಅಪಾಯವನ್ನು ತಪ್ಪಿಸಿದ ಮುನಿಸ್ವಾಮಿ|
ಕೋಲಾರ(ಮೇ.07): ಸಂಸದ ಎಸ್.ಮುನಿಸ್ವಾಮಿ ಅವರ ಸಮಯ ಪ್ರಜ್ಞೆಯಿಂದಾಗಿ ಜಿಲ್ಲೆಯಲ್ಲಿ ಘಟಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.
ಕೋಲಾರ ಜಿಲ್ಲೆಗೆ ಆಕ್ಸಿಜನ್ ಅವಶ್ಯಕತೆಯಿದ್ದು, ಆಕ್ಸಿಜನ್ ಹೊತ್ತು ತರಬೇಕಿದ್ದ ಲಾರಿ 24 ಗಂಟೆಗಳಿಂದಲೂ ಆಕ್ಸಿಜನ್ ಬೆಂಗಳೂರಿನ ಮಹದೇವಪುರದ ಬುರುಕ ಗ್ಯಾಸ್ ಲಿಮಿಟೆಡ್ ಬಳಿ ಕಾಯುತ್ತಿತ್ತು. ಈ ವಿಚಾರವನ್ನು ಜಿಲ್ಲಾಧಿಕಾರಿಗಳಿಂದ ತಿಳಿದ ಸಂಸದರು ಬುಧವಾರ ತಡರಾತ್ರಿ ತಾವೇ ಖುದ್ದು ಸ್ಥಳಕ್ಕೆ ತೆರಳಿದರು. ಅಲ್ಲಿನ ಡ್ರಗ್ ಕಂಟ್ರೋಲರ್ ರಾಜೇಶ್, ಮಹೇಶ್ ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ ತಕ್ಷಣ ಜಿಲ್ಲೆಗೆ ಆಕ್ಸಿಜನ್ ತರಿಸಿ ಜಿಲ್ಲೆಯಲ್ಲಿ ಆಗಬಹುದಾದ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
undefined
ಐದು ಮಂದಿ ಕೊರೋನಾ ಸೋಂಕಿತರು ಒಂದೇ ಬೈಕಲ್ಲಿ ಪ್ರಯಾಣ
ಈ ಕುರಿತು ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ಆಕ್ಸಿಜನ್ ತುಂಬಿಸಿಕೊಳ್ಳುವ ಸಲುವಾಗಿ ಕೋಲಾರ ಜಿಲ್ಲೆಯ ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್‌ಗೆ ಸೇರಿದ ಲಾರಿ ಮಹದೇವಪುರದ ಬುರೂಕ ಗ್ಯಾಸ್ ಲಿಮಿಟೆಡ್ ಬಳಿ 24 ಗಂಟೆಗಳಿಂದಲೂ ಕಾಯುತ್ತಿತ್ತು. ಆದರೆ ವಿವಿಧ ಆಸ್ಪತ್ರೆಗಳಿಂದ ಹೆಚ್ಚಿನ ಒತ್ತಡ ಇದ್ದದ್ದರಿಂದ ಆಕ್ಸಿಜನ್ ತುಂಬಿಸಿಕೊಳ್ಳಲು ಅಲ್ಲಿ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕರೆ ಮಾಡಿ ತಿಳಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona