ಕೊರೋನಾ ಹಾವಳಿಗೆ ಕಮರಿದ ಕಂಬಳ!

By Kannadaprabha NewsFirst Published Nov 3, 2020, 8:23 AM IST
Highlights

ಕೊರೋನಾದ ಕಾರ್ಮೋಡ ದಕ್ಷಿಣ ಕನ್ನಡದ ಪ್ರಸಿದ್ಧ ಕ್ರೀಡೆ ಕಂಬಳದ ಮೇಲೂ ಬಿದ್ದಿದೆ. ಕಂಬಳ ಆಯೋಜನೆ ಮಾಡುವಲ್ಲಿಯೂ ಭಯ ಭೀತರಾಗುವಂತೆ ಮಾಡಿದೆ. 

ವರದಿ :  ಸಂದೀಪ್‌ ವಾಗ್ಲೆ

 ಮಂಗಳೂರು (ನ.03):  ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೂ ಕೊರೋನಾ ಬಿಸಿ ತಟ್ಟಿದ್ದು, ಈ ವರ್ಷ ಅಂತ್ಯದವರೆಗೆ ಕಂಬಳ ನಡೆಯುವ ಲಕ್ಷಣ ಕಾಣಿಸುತ್ತಿಲ್ಲ. ಕೊರೋನಾ ಔಷಧಿ ಬಾರದೆ ಕಂಬಳ ಆರಂಭಿಸುವುದು ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ಬಹುತೇಕ ಕಂಬಳ ಕೋಣಗಳ ಮಾಲಿಕರು ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ನವೆಂಬರ್‌ ಕೊನೆ ವಾರದಲ್ಲಿ ಆರಂಭವಾಗುವ ಕಂಬಳದ ಕೂಟಗಳು ಮಾಚ್‌ರ್‍ ಅಂತ್ಯದವರೆಗೆ ನಡೆಯುತ್ತವೆ. ಅಷ್ಟರೊಳಗೆ ಔಷಧ ಬಾರದಿದ್ದರೆ ಈ ಋುತುಮಾನವಿಡೀ ಕಂಬಳ ನಡೆಯುವುದೇ ಅನುಮಾನವಾಗಿದೆ. ಈ ನಡುವೆ ಸರ್ಕಾರದ ಮಾರ್ಗಸೂಚಿ ಕಂಬಳಕ್ಕೆ ಪೂರಕವಾಗಿ ಬಂದರೆ ಕೆಲವು ಕಂಬಳಗಳಾದರೂ ನಡೆಯಬಹುದು ಎನ್ನುವ ಆಶಾವಾದವೂ ಕಂಬಳ ಪ್ರೇಮಿಗಳಲ್ಲಿ ಇದೆ.

ಒತ್ತಡಕ್ಕೆ ಮಣಿದು ಕಂಬಳ ವೀರನಿಗೆ ಟ್ರಯಲ್ಸ್‌ಗೆ ಆಹ್ವಾನ! ..

ಅಭ್ಯಾಸವೇ ನಡೆದಿಲ್ಲ:  ಕಂಬಳ ಸೀಸನ್‌ ಆರಂಭಕ್ಕೆ ಮೊದಲು ಕಂಬಳದ ಒಟ್ಟು 6 ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಪ್ರತ್ಯೇಕವಾಗಿ ಕನಿಷ್ಠ 5 ವಾರಗಳ ಅಭ್ಯಾಸ ಮಾಡಬೇಕಾಗುತ್ತದೆ. ಆದರೆ ಈ ಬಾರಿ ಕಂಬಳ ನಡೆಯುವ ಅನಿಶ್ಚಿತತೆ ಇರುವುದರಿಂದ ಒಂದು ವಿಭಾಗವನ್ನು ಹೊರತುಪಡಿಸಿ ಉಳಿದ ಯಾವ ಪ್ರಮುಖ ವಿಭಾಗದಲ್ಲೂ ಇನ್ನೂ ಅಭ್ಯಾಸವೇ ಆರಂಭವಾಗಿಲ್ಲ.

click me!