ಶಿವಮೊಗ್ಗ : ಬಾಂಬ್‌ ಸ್ಫೋಟ-9 ಮಂದಿಗೆ ಗಾಯ

Kannadaprabha News   | Asianet News
Published : Nov 03, 2020, 07:53 AM IST
ಶಿವಮೊಗ್ಗ :  ಬಾಂಬ್‌ ಸ್ಫೋಟ-9 ಮಂದಿಗೆ ಗಾಯ

ಸಾರಾಂಶ

ಶಿವಮೊಗ್ಗ ಸಮೀಪದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಒಂದರಲ್ಲಿ 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 

ಶಿವಮೊಗ್ಗ (ನ.03): ಹಂದಿ ಹೊಡೆಯಲು ಸಂಗ್ರಹಿಸಿದ್ದ ಕಚ್ಚಾ ಬಾಂಬ್‌ ಸ್ಫೋಟಗೊಂಡು 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಮೀಪದ ಕುಂಚೇನಹಳ್ಳಿಯಲ್ಲಿ  ನಡೆದಿದೆ.

 ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಇಲ್ಲಿನ ತಮಿಳ್‌ ಕುಮಾರ್‌ ಎಂಬುವರ ಮನೆಯಲ್ಲೇ ಘಟನೆ ನಡೆದಿದೆ.

 ಕಾಡುಹಂದಿ ಬೇಟೆಯಾಡಲು ನಾಡಬಾಂಬ್‌ ಅನ್ನು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ. ಅದನ್ನು ಬಿಸಲಿಗೆ ಒಣಗಿಸಲು ಹಾಕಿದ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಕೊಟ್ಟೂರು: ಸಿಲಿಂಡರ್ ಸ್ಫೋಟ, ಐವರಿಗೆ ಗಾಯ ...

ಈ ರೀತಿಯ ಘಟನೆಗಳು ವಿವಿಧೆಡೆ ಸಂಭವಿಸುತ್ತಲೇ ಇದ್ದು ಪ್ರಾಣಿಗಳು ಇದರಿಂದ ಪ್ರಾಣ ಕಳೆದುಕೊಂಡಿರುವ ಘಟನೆಗಳು ನಡೆದಿವೆ. 

PREV
click me!

Recommended Stories

ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ
ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ