ಬೆಂಗಳೂರಿಗರಿಗೆ ಗುಡ್ ನ್ಯೂಸ್ : ಕಾಲ್ಕೀಳುತ್ತಿದೆ ಕೋವಿಡ್ - ಈಗಿರುವ ಸಂಖ್ಯೆ..?

By Kannadaprabha NewsFirst Published Nov 3, 2020, 7:19 AM IST
Highlights

ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಳಿದಿದೆ. ಕೊರೋನಾ ಸೋಂಕು ನಿಧಾನವಾಗಿ ತನ್ನ ಜಾಗ ಕಾಲಿ ಮಾಡುತ್ತಿದೆ. 

ಬೆಂಗಳೂರು (ನ.03):  ಕೊರೋನಾ ಸೋಂಕಿನ ಪ್ರಮಾಣ ರಾಜಧಾನಿ ಬೆಂಗಳೂರಿನಲ್ಲಿ ಇಳಿಮುಖದತ್ತ ಸಾಗಿದ್ದು, ಸುಮಾರು ಎರಡೂವರೆ ತಿಂಗಳ ನಂತರ ಸೋಮವಾರ 1,439 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಕಳೆದ ಆಗಸ್ಟ್‌ 10ರಂದು 1243 ಪ್ರಕರಣ ಪತ್ತೆಯಾಗಿತ್ತು.

ಇದೇ ದಿನ 5,925 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸದಾಗಿ ಪತ್ತೆಯಾದ ಪ್ರಕರಣಗಳೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 3,40,075 ಏರಿಕೆಯಾಗಿದೆ.

ಮೂಡಿತು ಭರವಸೆ; ಡಿಸಂಬರ್ ಅಂತ್ಯಕ್ಕೆ ಕೈ ಸೇರಲಿದೆ ಕೋವಿಡ್ ಲಸಿಕೆ?

ಗುಣಮುಖರ ಸಂಖ್ಯೆ 3,10,088 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,098ಕ್ಕೆ ಇಳಿಕೆಯಾಗಿದ್ದು, 458 ಜನರು ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ನಗರದಲ್ಲಿ 14 ಜನರು ಮೃತಪಟ್ಟಿದ್ದು, ಈವರೆಗೆ 3,888 ಜನರು ಸಾವನ್ನಪ್ಪಿದ್ದಾರೆ.

click me!