ಬೆಂಗಳೂರಲ್ಲಿ ಬದಲಾಯ್ತು ಮಾಸ್ಕ್ ನಿಯಮ : ಒಬ್ಬರಿಗೆ ಬೇಕಿಲ್ಲ

By Kannadaprabha NewsFirst Published Nov 3, 2020, 7:12 AM IST
Highlights

ಬೆಂಗಳೂರಿನಲ್ಲಿ ಬಿಬಿಎಂಪಿ ಮಾಸ್ಕ್ ನಿಯಮವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಏನದು ಬದಲಾವಣೆ

ಬೆಂಗಳೂರು (ನ.03): ಕಾರಿನಲ್ಲಿ ಒಬ್ಬರೇ ಪ್ರಮಾಣಿಸುವಾಗ ಕಿಟಕಿ ಗಾಜು ಮುಚ್ಚಿದ್ದರೆ ಮಾಸ್ಕ್‌ ಧರಿಸುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಆದರೆ ಬೈಕ್‌ನಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸಬೇಕು ಎಂಬ ಆದೇಶವನ್ನು ಮುಂದುವರೆಸಲಾಗಿದೆ.

ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್‌ ಧರಿಸಬೇಕು ಎಂಬ ಬಿಬಿಎಂಪಿ ನಿಯಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾನುವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕೊರೋನಾ ನಿಯಂತ್ರಣ ತಜ್ಞರ ಸಮಿತಿ ಸಭೆಯಲ್ಲಿ ಕಾರಿನಲ್ಲಿ ಒಬ್ಬರೇ ಪ್ರಮಾಣಿಸುವಾಗ ಕಿಟಕಿ ಗಾಜು ಮುಚ್ಚಿಕೊಂಡಿದ್ದರೆ ಮಾಸ್ಕ್‌ ಧರಿಸುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮಾಸ್ಕ್ ಇಲ್ಲ ಅಂದ್ರೆ ದಂಡ, ರಸ್ತೆ ಗುಂಡಿಗೆ ಬಿದ್ದರೆ ಯಾರಿಗೆ ದಂಡ ಹಾಕ್ಬೇಕು?

ಈ ಹಿನ್ನೆಲೆಯಲ್ಲಿ ಆಯುಕ್ತರು ಈ ಹಿಂದೆ ಹೊರಡಿಸಿದ ಆದೇಶ ಹಿಂಪಡೆದು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

click me!