ಕೆಜಿಎಫ್ (ಮೇ.19): ಕಳೆದ 23 ವರ್ಷಗಳಿಂದ ಮುಚ್ಚಿದ್ದ ಕಾಲದ ಬಿ.ಜಿ.ಎಂ.ಎಲ್ ಆಸ್ಪತ್ರೆಯನ್ನು ಮಂಗಳವಾರ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದ್ದು ಮಂಗಳವಾರದಂದು ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದ್ದಾರೆ.
ಆಸ್ಪತ್ರೆಯಲ್ಲಿನ ಬೆಡ್ ವ್ಯವಸ್ಥೆ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಅವರು ಮಾತನಾಡಿದ ಅವರು ಆಸ್ಪತ್ರೆಯಲ್ಲಿ ಪ್ರಾರಂಭಿಕವಾಗಿ 250 ಹಾಸಿಗೆಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡಿ, ಆಕ್ಸಿಜನ್ ಪ್ಲಾಂಟ್‌ನ್ನು ಸಹ ನಿರ್ಮಿಸಲಾಗುತ್ತದೆ. ಸರ್ಕಾರ ಮತ್ತು ಸ್ವಯಂಸೇವಕ ಡಾಕ್ಟರ್‌ಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದು ಸರ್ಕಾರ ಅವರಿಗೆ ಗೌರವಧನವನ್ನು ನೀಡಲಿದೆ ಎಂದರು. ಕೆಜಿಎಫ್‌ನ ಗಣಿ ಕಾರ್ಮಿಕರ ಚಿಕಿತ್ಸೆ ಸಲುವಾಗಿ ಬ್ರಿಟಿಷ್ ಕಾಲದಲ್ಲಿ ಕಟ್ಟಲ್ಪಟ್ಟಈ ಆಸ್ಪತ್ರೆಗೆ 140 ವರ್ಷಗಳ ಇತಿಹಾಸವಿದೆ.
undefined
ಹೆಚ್ಚಿದ ಕೊರೋನಾ: ಪಾಳುಬಿದ್ದಿದ್ದ ಬ್ರಿಟಿಷ್ ಕಾಲದ BGML ಆಸ್ಪತ್ರೆಗೆ ಮರುಜೀವ
ಕಾಲಕ್ರಮೇಣ ಆಸ್ಪತ್ರೆಗೆ ಆದಾಯ ಕಡಿಮೆಯಾಗಿ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ 2001ರಲ್ಲಿ ಅನಿವಾರ್ಯವಾಗಿ ಬೀಗ ಹಾಕಲಾಗಿತ್ತು. ಇದೀಗ ಪಾಳು ಬಿದ್ದಿದ್ದ ಆಸ್ಪತ್ರೆಯನ್ನು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ಮುತುವರ್ಜಿ ವಹಿಸಿ ಶುಚಿಗೊಳಿಸಿಕೊಟ್ಟಿದ್ದು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.