ಬೆಂಗಳೂರು: ಕೋವ್ಯಾಕ್ಸಿನ್ 2ನೇ ಡೋಸ್​ಗೆ ಕಾಯ್ತಿದ್ದೀರಾ..? ಈ 27 ಕೇಂದ್ರಗಳಲ್ಲಿ ಲಭ್ಯ

By Suvarna News  |  First Published May 30, 2021, 9:00 PM IST

* ಕೋವ್ಯಾಕ್ಸಿನ್‌ 2ನೇ ಡೋಸ್‌ಗಾಗಿ ಕಾಯುತ್ತಿರುವ ಬಿಬಿಎಂಪಿ ವ್ಯಾಪ್ತಿಯ ಜನರಿಗೆ 27 ವ್ಯಾಕ್ಸಿನೇಷನ್​ ಸೆಂಟರ್
*ಸೆಂಟರ್‌ಗಳ ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ 
*  ಈ ಕೇಂದ್ರಗಳಿಗೆ ವಾಕ್​ಇನ್ ಮೂಲಕ ತೆರಳಿ 2ನೇ ಡೋಸ್ ವ್ಯಾಕ್ಸಿನ್ ಪಡೆಯಬಹುದು


ಬೆಂಗಳೂರು, (ಮೇ.30): ಮೊದಲ ಸುತ್ತಿನಲ್ಲಿ ಕೋವ್ಯಾಕ್ಸಿನ್ ಪಡೆದವರು ಇದೀಗ 2ನೇ ಡೋಸ್‌ಗಾಗಿ ಪರದಾಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನರು ಪ್ರತಿನಿತ್ಯ ಆಸ್ಪತ್ರೆಗಳಲ್ಲಿ ಸರದಿ ಸಾಲಿನಲ್ಲಿ ನಿಂತರೂ ಲಸಿಕೆ ಸಿಗದೇ ಮನೆಗೆ ವಾಪಸ್ ಆಗುತ್ತಿದ್ದು, ಇದು ಬಿಬಿಎಂಪಿ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಎರಡನೇ ಡೋಸ್​ಗಾಗಿ ಕಾಯುತ್ತಿರುವ ಬಿಬಿಎಂಪಿ ವ್ಯಾಪ್ತಿಯ ಜನರಿಗೆ 27 ವ್ಯಾಕ್ಸಿನೇಷನ್​ ಸೆಂಟರ್​ಗಳ ವ್ಯವಸ್ಥೆ ಮಾಡಿದೆ. 

Latest Videos

undefined

ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್: ಯಾವ ಲಸಿಕೆ ಉತ್ತಮ?

ಈ ಕೆಳಗಿನಂತೆ ತಿಳಿಸಿರುವ  27 ವ್ಯಾಕ್ಸಿನೇಷನ್​ ಸೆಂಟರ್​ಗಳಿಗೆ ಹೋಗಿ ಕೋವ್ಯಾಕ್ಸಿನ್ ಎರಡನೇ ಡೋಸ್ ಹಾಕಿಸಿಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ. 

ರಾಜ್ಯದಲ್ಲಿ ಮೊದಲ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೊದಲ ಸುತ್ತಿನಲ್ಲಿ ಹಿರಿಯರಿಗೆ ಹಾಗೂ ಕೊರೋನಾ ವಾರಿಯರ್ಸ್ ಪಟ್ಟಿಯಲ್ಲಿದ್ದ ಪೊಲೀಸರು ನರ್ಸ್, ವೈದ್ಯರು, ಆಸ್ಪತ್ರೆ ಸಿಬ್ಬಂದಿಗೆ ಕೊಡಲಾಗಿದೆ. 

ಇದೀಗ ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಬಳಕೆಗೆ ಅವಕಾಶ ನೀಡಲಾಗಿದೆ. ಕೋವ್ಯಾಕ್ಸಿನ್ ಅಗತ್ಯಕ್ಕೆ ತಕ್ಕಂತೆ ಪೂರಕೆಯಾಗುತ್ತಿಲ್ಲ. ಇದರಿಂದ ಮೊದಲು ಕೋವ್ಯಾಕ್ಸಿನ್‌ ಪಡೆದವರು ಎರಡನೇ ಡೋಸ್‌ಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಇನ್ನು ಕೋವಿಶಿಲ್ಡ್‌ ಬಗ್ಗೆ ಗೊಂದಲಗಳು ಬೇಡ. ಎಲ್ಲಾ ಕಡೆಗಳಲ್ಲೂ ಲಭ್ಯವಿದೆ.

ಯಾವೆಲ್ಲಾ ಸೆಂಟರ್​​ಗಳಲ್ಲಿ ಕೊವ್ಯಾಕ್ಸಿನ್ ಲಭ್ಯವಿರಲಿದೆ..?

 

2nd dose is available at the following 27 select hospitals/PHCs. Walk-in only for those who are due for 2nd dose.
ಕೊವಾಕ್ಸಿನ್ 2ನೇ ಡೋಸ್ ಈ ಕೆಳಗಿನ 27 ಆಸ್ಪತ್ರೆ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 2ನೇ ಡೋಸಿಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು. pic.twitter.com/0LQi1zSSmz

— Gaurav Gupta,IAS (@BBMPCOMM)
click me!