ನಿಯಮ ಮೀರಿ ಚಿಕಿತ್ಸೆ ನೀಡಿದರೆ ಮುಲಾಜಿಲ್ಲದೆ ಕ್ಲೋಸ್ : ಮಾಧುಸ್ವಾಮಿ ಎಚ್ಚರಿಕೆ

By Suvarna News  |  First Published May 30, 2021, 4:01 PM IST
  • ನಿಯಮಾವಳಿಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುವ ಖಾಸಗಿ ಕ್ಲಿನಿಕ್ ವಿರುದ್ಧ ಕ್ರಮ
  •  ತುಮಕೂರಿನ ಮೆಡಿಕಲ್ ಶಾಪ್‌ಗಳಿಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ 
  • ಚಿಕ್ಕನಾಯಕನಹಳ್ಳಿಯಲ್ಲಿಂದು ನಡೆದ ಸಭೆಯಲ್ಲಿ ವಾರ್ನಿಂಗ್

ತುಮಕೂರು (ಮೇ.30):  ನಿಯಮಾವಳಿಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುವ ಖಾಸಗಿ ಕ್ಲಿನಿಕ್  ಹಾಗೂ ವೈದ್ಯರ ಸಲಹೆಯಿಲ್ಲದೆ ಕೊರೋನಾ ರೋಗಿಗಳಿಗೆ ಮಾತ್ರೆ ಔಷಧಿಗಳನ್ನು ನೀಡುವ ತುಮಕೂರಿನ ಮೆಡಿಕಲ್ ಶಾಪ್‌ಗಳಿಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ. 

ತುಮಕೂರಿನ  ಚಿಕ್ಕನಾಯಕನಹಳ್ಳಿಯಲ್ಲಿಂದು ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಕೊರೋನಾ ನಿಯಾಮಾವಳಿ ಪಾಲಿಸದ ಕ್ಲಿನಿಕ್-ಮೆಡಿಕಲ್ ಸ್ಟೋರ್ ಮುಲಾಜಿಲ್ಲದೆ ಮುಚ್ಚಿಸುವೆ ಎಂದು ಹೇಳಿದರು. 

Latest Videos

undefined

ಸಹೋದರ ಕೊರೋನಾಗೆ ಬಲಿ- ಸಹೋದರಿ ಆತ್ಮಹತ್ಯೆ

ತಾಲೂಕು ಮಟ್ಟದ ವೈದ್ಯರು, ಮೆಡಿಕಲ್ ಸ್ಟೋರ್ ಮಾಲೀಕರು, ಟೆಸ್ಟಿಂಗ್ ಲ್ಯಾಬ್ ಮಾಲೀಕರೊಂದಿಗೆ ಸಭೆ ನಡೆಸಿದ ಸಚಿವರು ಯಾವುದೇ ಮೆಡಿಕಲ್ ಹಾಗೂ ಕ್ಲಿನಿಕ್‌ಗಳಲ್ಲಿ ಈ ರೀತಿ ಚಿಕಿತ್ಸೆ ನೀಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನಿಡಿದರು. 

ಇನ್ನು ಈ ಸಭೆಯಲಲ್ಲಿ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ತೇಜಸ್ವಿನಿ, ಡಿಎಚ್ಒ ನಾಗೇಂದ್ರಪ್ಪ, ಸೇರಿ ಹಲವು  ಅಧಿಕಾರಿಗಳು ಭಾಗಿಯಾಗಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!