14 ಎಕರೆ ಭೂಮಿ ಒತ್ತುವರಿ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲನೆ: ಎ.ಎಸ್.ಪೊನ್ನಣ್ಣ

Published : Jan 30, 2025, 07:06 PM IST
14 ಎಕರೆ ಭೂಮಿ ಒತ್ತುವರಿ ಪ್ರಕರಣದಲ್ಲಿ ನ್ಯಾಯಾಲಯದ ಆದೇಶ ಪಾಲನೆ: ಎ.ಎಸ್.ಪೊನ್ನಣ್ಣ

ಸಾರಾಂಶ

ರಾಮನಗರದ ವ್ಯಾಪ್ತಿಯಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಮತ್ತು ಅವರ ಸಂಬಂಧಿಕರಿಂದ 14 ಎಕರೆ ಭೂ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ್ದು ಕೂಡಲೇ ನ್ಯಾಯಾಲಯದ ಆದೇಶವನ್ನು ಸರ್ಕಾರವಾಗಿ ಪಾಲಿಸುತ್ತೇವೆ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.30): ರಾಮನಗರದ ವ್ಯಾಪ್ತಿಯಲ್ಲಿ ಕೇಂದ್ರ ಸಚಿವ ಹೆಚ್ ಡಿಕೆ ಮತ್ತು ಅವರ ಸಂಬಂಧಿಕರಿಂದ 14 ಎಕರೆ ಭೂ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ್ದು ಕೂಡಲೇ ನ್ಯಾಯಾಲಯದ ಆದೇಶವನ್ನು ಸರ್ಕಾರವಾಗಿ ಪಾಲಿಸುತ್ತೇವೆ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ಪ್ರಭಾವಿಗಳು 14 ಎಕರೆ ಭೂಮಿಯನ್ನು ಒತ್ತುವರಿ ಮಾಡಿದ್ದಾರೆಂದು ಲೋಕಾಯುಕ್ತ ಪೊಲೀಸ್ ಕೋರ್ಟಿಗೆ ವರದಿಯನ್ನು ಕೊಟ್ಟಿದೆ. ಆ ವರದಿಯ ಮೇಲೆ ಹಿಂದಿನ ಎಲ್ಲಾ ಸರ್ಕಾರಗಳು ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಈ ಕುರಿತು ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 

ಇದಕ್ಕೆ ನ್ಯಾಯಾಲಯ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದೆಲ್ಲವೂ ಕಾನೂನು ಸಚಿವರ ಗಮನಕ್ಕೆ ಬಂದಿರುತ್ತದೆ. ಸರ್ಕಾರವಾಗಿ ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹೇಳಿದರು. ಎಲ್ಲಾ ವಿಷಯಗಳಿಗೂ ಸರ್ಕಾರ ಎಸ್ಐಟಿ ರಚಿಸುತ್ತಿದೆ ಎಂದಿರುವುದಕ್ಕೆ ಜಾಸ್ತಿ ಸಂಖ್ಯೆಯಲ್ಲಿ ಎಸ್ಐಟಿಗಳನ್ನು ರಚಿಸಿದ್ದೇವೆ. ಬಿಟ್ ಕಾಯಿನ್ ಕೇಸ್ ಸೇರಿದಂತೆ ಸೂಕ್ಷ್ಮವಾದ ಹಲವು ಹಗರಣಗಳು ನಡೆದಿವೆ. ಕಳೆದ ಸರ್ಕಾರದ ಹಗರಣಗಳನ್ನು ಎಸ್ಐಟಿ ಮೂಲಕ ತನಿಖೆ ಮಾಡುವುದು ತಪ್ಪೇನಿದೆ. ಈ ಹಗರಣಗಳ ತನಿಖೆ ಮಾಡುವುದಾಗಿ ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದೆವು. ಆದ್ದರಿಂದ ಎಸ್ಐಟಿ ಮಾಡಿ ತನಿಖೆ ನಡೆಸುತ್ತಿದ್ದೇವೆ. 

ಸಾಲ ವಸೂಲಿಗಾಗಿ ಜನರಿಗೆ ಕಿರುಕುಳ ನೀಡಿದ್ರೆ ಸುಮೊಟೋ ಕೇಸ್: ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚನೆ

ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ. ಇದನ್ನು ಸಿಎಂ ಅವರ ಗಮನಕ್ಕೆ ತರುತ್ತೇನೆ ಎಂದು ಶಾಸಕ ಪೊನ್ನಣ್ಣ ಹೇಳಿದರು. ಇನ್ನು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಇರುವ ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಮಹಾಮೃತ್ಯುಂಜಯ ದೇವಾಲಯದ ಅರ್ಚಕ ವಿಘ್ನೇಶ್ ಭಟ್ ಅವರನ್ನು ಸಿಎಂ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಅರ್ಚಕರ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಘಟನೆಯನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದ ಪೊನ್ನಣ್ಣ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. 

ಸರ್ಕಾರ ನಿಮ್ಮ ಪರವಾಗಿದೆ ಎಂದು ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪೊನ್ನಣ್ಣ ಎಲ್ಲವನ್ನು ಒಂದು ಜನಾಂಗದ ಮೇಲೆ ಹೇಳೋದು ಸರಿಯಲ್ಲ. ಹಲ್ಲೆ ಮಾಡಿದಾತನ ವಿರುದ್ಧ ಈಗಾಗಲೇ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಕಟ್ಟೆಮಾಡು ವಿಚಾರವನ್ನ ಬಗೆ ಹರಿಸಲು ನಾವು ಬದ್ಧರಾಗಿದ್ದೇವೆ. ಆದರೆ ಇದೇ ವಿಚಾರವನ್ನ ಇಟ್ಟುಕೊಂಡು ಜನಾಂಗಗಳ ಮಧ್ಯೆ ದ್ವೇಶ ಹಚ್ಚೋದು ಸರಿಯಲ್ಲ. ಹಲ್ಲೆ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದ್ದು ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬಲಿದೆ ಎಂದರು. 

ರಾಮುಲು, ರೆಡ್ಡಿ ನಾಯಕರಾಗಲು ಅರ್ಹರಲ್ಲ, ಬಿಜೆಪಿ, ಜೆಡಿಎಸ್‌ನಲ್ಲಿ ಒಳಜಗಳವಿದೆ: ಸಚಿವ ಬೋಸರಾಜು

ಇದು ಜನಾಂಗಳ ನಡುವೆ ಆಗಿರುವ ಜಗಳ ಅಲ್ಲ, ಯಾರೋ ಕಿಡಿಗೇಡಿ ಮಾಡಿದ್ದಾನೆ ಅಷ್ಟೇ. ಆತ ಕಾಂಗ್ರೆಸ್ ವಲಯ ಅಧ್ಯಕ್ಷನಾಗಿದ್ದ. ಹಲ್ಲೆ ವಿಷಯ ತಿಳಿದ ಕೂಡಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಆತನನ್ನು ಅಮಾನತು ಮಾಡಿದ್ದಾರೆ. ಹಿಂಸೆಯನ್ನು ಎಲ್ಲೂ ಸಹಿಸಲಾಗಲ್ಲ. ಇಂತಹ ಅಪರಾಧ ಮಾಡುವವರಿಗೆ ಯಾವುದೇ ಜಾತಿ ಧರ್ಯವಿಲ್ಲ. ಕೊಡಗಿನಲ್ಲಿ ಇಂದು ಇರುವ ಸ್ಥಿತಿ ಕೊಡಗಿಗೆ ಒಳ್ಳೆಯದಲ್ಲ ಎಂದು ಮಡಿಕೇರಿಯಲ್ಲಿ ಶಾಸಕ ಎ ಎಸ್ ಪೊನ್ನಣ್ಣ ಹೇಳಿದರು.

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?