Ankola: ಬೇಲೆಕೇರಿ ಅದಿರು ನಾಪತ್ತೆ: ಸಚಿವ ಆನಂದ್‌ಸಿಂಗ್‌, ರೆಡ್ಡಿಗೆ ಜಾಮೀನು

By Kannadaprabha News  |  First Published Mar 8, 2022, 4:12 AM IST

*   ಶಾಸಕ ನಾಗೇಂದ್ರ ಸೇರಿ ಒಟ್ಟು ಏಳು ಮಂದಿಗೆ ಜಾಮೀ​ನು
*   ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದ ಆರೋಪಿಗಳು
*   ಅರಣ್ಯ ಇಲಾಖೆ, ಬಂದರು ಇಲಾಖೆ ಹಾಗೂ ಅದಿರು ಕಂಪನಿಗಳ ಮುಖ್ಯಸ್ಥರ ವಿರುದ್ಧ ಪ್ರಕರಣ


ಅಂಕೋಲಾ(ಮಾ.08):  ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಡಿ.ನಾಗೇಂದ್ರ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ(Janardhana Reddy) ಅವರು ಅಂಕೋಲಾದ(Ankola) ಜೆಎಂಎಫ್‌ಸಿ ನ್ಯಾಯಾಲಯಕ್ಕೆ(JMFC Court) ಸೋಮವಾರ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆದಿದ್ದಾರೆ. 

ಈ ಮೂವರ ಜತೆ ಇನ್ನೂ ನಾಲ್ವರಿಗೆ ಜಾಮೀನು(Bail) ಲಭಿಸಿದೆ. 2007ರಲ್ಲಿ ಬೇಲೆಕೇರಿಯ ಬಂದರಿನಲ್ಲಿ ಅರಣ್ಯ ಇಲಾಖೆಯವರು 250 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ವಶಪಡಿಸಿಕೊಂಡಿದ್ದರು. ಈ ಅದಿರು ಸರ್ಕಾರದ ವಶದಲ್ಲಿರುವಾಗಲೇ ಅದಿರು ವಹಿವಾಟು ಕಂಪನಿಗಳು ಅಕ್ರಮವಾಗಿ ಹಡಗಿನ ಮೂಲಕ ವಿದೇಶಕ್ಕೆ ಸಾಗಿಸಿದ್ದವು. ಈ ಬಗ್ಗೆ ಲೋಕಾಯುಕ್ತವು ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ, ಬಂದರು ಇಲಾಖೆ ಹಾಗೂ ಅದಿರು ಕಂಪನಿಗಳ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿತ್ತು.

Latest Videos

undefined

Anand Singh-DKS Meeting: ಡಿಕೆಶಿ ಭೇಟಿ ಮಾಡಿದ್ಯಾಕೆ.? ಆನಂದ್‌ ಸಿಂಗ್ ಸ್ಪಷ್ಟನೆ

ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದರಿಂದ ಸುಪ್ರೀಂ ಕೋರ್ಟ್‌ 2009ರಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐನ ವಿಶೇಷ ತಂಡಕ್ಕೆ ವಹಿಸಿತ್ತು. ತನಿಖೆ ನಡೆಸಿದ ಸಿಬಿಐ ವಿಶೇಷ ತಂಡವು ಪ್ರಕರಣದಲ್ಲಿ 12 ಆರೋಪಿಗಳು ಪಾಲುದಾರರಾಗಿದ್ದಾರೆ ಎಂದು ದೋಷಾರೋಪಣ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ(Supreme Court)ಸಲ್ಲಿಸಿತ್ತು. ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆರೋಪಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. 

ಈ ಕುರಿತು ವಿಚಾ​ರಣೆ ನಡೆ​ಸಿ​ದ ಅಂಕೋಲಾದ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಸೋಮವಾರ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಡಿ. ನಾಗೇಂದ್ರ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಸೇರಿ ಏಳು ಮಂದಿಗೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಜೆ.ರಂಗಸ್ವಾಮಿ ಜಾಮೀನು ಮಂಜೂರು ಮಾಡಿದರು. ಇನ್ನುಳಿದ ಐವರು ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ.

ಡಿಕೆಶಿ ಮನೆಗೆ ಹೋಗಬಾರದಿತ್ತು, ಈಗ ಅರಿವಾಗಿದೆ: ಆನಂದ್‌ ಸಿಂಗ್‌

ಬೆಂಗಳೂರು: ‘ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮನೆಗೆ ಹೋಗಬಾರದಿತ್ತು. ಅದು ಈಗ ಅರಿವಿಗೆ ಬಂದಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದ್ದರು.

ಫೆ.04  ರಂದು ಬಿಜೆಪಿ(BJP) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ನೇಹದ ದೃಷ್ಟಿಯಿಂದ ಹೋಗಿದ್ದೆ. ಆದರೆ, ಅದರ ಬಗ್ಗೆ ಆಗುವ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡಿರಲಿಲ್ಲ. ನಾನು ಹೋಗಿದ್ದ ಸನ್ನಿವೇಶ ಸರಿ ಇರಲಿಲ್ಲ. ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಹೋಗಿದ್ದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಸಹ ಕೇಳಿದ್ದಾರೆ. ಅವರಿಗೆ ವಿವರಣೆ ಕೊಟ್ಟು ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದ್ದರು. 

ಬಿಜೆಪಿ ಮತ್ತು ಯಡಿಯೂರಪ್ಪ ನಮಗೆ ವಿಜಯನಗರ(Viijayanagara) ಜಿಲ್ಲೆ ನೀಡಿದವರು. ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ. ಆ ರೀತಿ ಹೋಗಬೇಕು ಎಂದರೆ, ಬ್ಯಾಕ್‌ ಡೋರ್‌ ಎಂಟ್ರಿ ಬೇರೆ ಇವೆ. ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು. ಮಾಧ್ಯಮಗಳು ನನ್ನನ್ನು ಸಂಶಯ ದೃಷ್ಟಿಯಿಂದ ನೋಡಿದವು ಎಂದು ಹೇಳಲ್ಲ. ನಾನೇ ಅದಕ್ಕೆ ಅವಕಾಶ ಮಾಡಿಕೊಡಬಾರದಿತ್ತು ಎನ್ನಿಸಿದೆ ಎಂದು ಹೇಳಿದ್ದರು. 

District incharge Ministers ವಿಜಯನಗರದಿಂದ ಆನಂದ್‌ ಸಿಂಗ್‌ಗೆ ಕೋಕ್, ಭುಗಿಲೆದ್ದ ಆಕ್ರೋಶ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರವಾಸೋದ್ಯಮ ಖಾತೆಯಲ್ಲಿ ನಾನು ಸಂತೋಷವಾಗಿದ್ದೇನೆ. ಈ ಹಿಂದೆ ಖಾತೆ ಬದಲಾವಣೆ ಮಾಡಿ ಎಂದು ಕೇಳಿದ್ದು ನಿಜ. ಆದರೆ ಈಗ ನೀಡಿರುವ ಖಾತೆಯಲ್ಲಿಯೇ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಇದೇ ಖಾತೆಯಲ್ಲಿಯೇ ಮುಂದುವರಿಯುತ್ತೇನೆ. ಕೊಟ್ಟಿರುವ ಖಾತೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದರು. 

ನಮಗೆ ವಿಜಯನಗರ ಜಿಲ್ಲೆ ನೀಡಿದ್ದು ಬಿಜೆಪಿ

ಬಿಜೆಪಿ ಮತ್ತು ಯಡಿಯೂರಪ್ಪ ನಮಗೆ ವಿಜಯನಗರ ಜಿಲ್ಲೆ ನೀಡಿದವರು. ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ. ಆ ರೀತಿ ಹೋಗಬೇಕು ಎಂದರೆ, ಬ್ಯಾಕ್‌ ಡೋರ್‌ ಎಂಟ್ರಿ ಬೇರೆ ಇವೆ. ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು? ಅಂತ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದರು. 

ಕೊರೋನಾ ಯಾರಿಗೂ ಹೇಳಿ, ಕೇಳಿ ಬರುವುದಿಲ್ಲ: ಆನಂದ್‌ ಸಿಂಗ್‌

ಹೊಸಪೇಟೆ: ಕೊರೋನಾಗೆ(Coronavirus) ಬಿಜೆಪಿ(BJP), ಕಾಂಗ್ರೆಸ್‌(Congress), ಹೆಣ್ಣು, ಗಂಡೆಂಬ ಭೇದ ಇರೊಲ್ಲ. ಯಾರಿಗೂ ನೋಡಿ ಕೊರೋನಾ ಬರೋಲ್ಲ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದರು. 
 

click me!