ನವೋದಯ ಸಂಸ್ಥೆ ನಡೆ ವಿರೋಧಿಸಿ ನಾಳೆ(ಮಾ.07) ರಾಯಚೂರು ಬಂದ್‌ ಕರೆ

By Suvarna News  |  First Published Mar 6, 2022, 7:11 PM IST

* ನಾಳೆ(ಮಾ.07) ರಾಯಚೂರು ಬಂದ್‌ ಕರೆ ಸಂಘಟನೆಗಳೂ
* ನವೋದಯ ಸಂಸ್ಥೆ ನಡೆ ವಿರೋಧಿಸಿ ರಾಯಚೂರು ಬಂದ್‌
*371(ಜೆ) ಮೀಸಲಾತಿ ಗಾಳಿಗೆ ತೂರಿದ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ


ರಾಯಚೂರು, (ಮಾ.06): ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವ 371 ಜೆ ವಿಧಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ರಾಯಚೂರು ಬಂದ್‌ಗೆ  (Raichur Bandh)ಕರೆ ನೀಡಲಾಗಿದೆ.

ನವೋದಯ ಶಿಕ್ಷಣ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ಹಿಂಪಡೆಯಲು ಒತ್ತಾಯಿಸಿ ಫೆಬ್ರವರಿ 07ರಂದು ರಾಯಚೂರು ಬಂದ್‌ ಮಾಡಿ ಹೋರಾಟ ಮಾಡಲಾಗುತ್ತದೆ ಎಂದು ಶಾಸಕ ಡಾ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. 

Latest Videos

undefined

Russia-Ukraine Crisis: ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದವರಿಗೆ ಭಾರತದಲ್ಲಿ ಇಂಟರ್ನ್‌ಶಿಪ್‌

ಇಂದು (ಭಾನುವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಧಾವೆ ಈಗಾಗಲೇ ಹೈಕೋರ್ಟ್‌ ಮೆಟ್ಟಿಲೇರಿದ್ದು, ಸರಕಾರದ ಮಟ್ಟದಲ್ಲಿ ಇದು ಬಗೆಹರಿಯುವುದಿಲ್ಲ ಆಗಾಗಿ ಸರಕಾರದಿಂದ ಏನು ಮಾಡಲಾಗುವುದಿಲ್ಲ ಆಗಾಗಿ ರಸ್ತೆಗಿಳಿದು ಅರ್ಜಿ ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತದೆ ಎಂದರು.

ನವೋದಯ ಮೆಡಿಕಲ್‌ ಕಾಲೇಜು. ಹೈದ್ರಾಬಾದ್ ಕರ್ನಾಟಕ ಭಾಗಕ್ಕೆಂದೇ‌ 371(ಜೆ) ಕಲಂನಡಿ ವಿಶೇಷ ಸ್ಥಾನ ನೀಡಲಾಗಿದೆ. ಹೀಗಿದ್ರೂ, ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮಾತ್ರ 371(ಜೆ) ಮೀಸಲಾತಿಯನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಮೆಡಿಕಲ್ ಸೀಟು ಹಂಚಿಕೆ ಮಾಡ್ತಿರೊ ಆರೋಪ ಕೇಳಿಬಂದಿದೆ. ಮೆಡಿಕಲ್ ಓದ್ಬೇಕು ಅನ್ನೊ ಮಹದಾಸೆ ಹೊಂದಿರೊ ಹೈದರಾಬಾದ್ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಮಹಾನ್ ಅನ್ಯಾಯ ಮಾಡಲಾಗ್ತಿದೆ ಅಂತ ಹೋರಾಟಗಾರರು ಆರೋಪಿಸಿದ್ದಾರೆ. 

ಅಷ್ಟಕ್ಕು ನವೋದಯ ಮೆಡಿಕಲ್ ಕಾಲೇಜು ಪ್ರಾರಂಭವಾಗಿದ್ದು, ಭಾಷಾ ಅಲ್ಪಸಂಖ್ಯಾತರ ಖೋಟಾದಡಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರಡಿಯಲ್ಲಿರೊದು ಇದೊಂದೇ ಮೆಡಿಕಲ್ ಕಾಲೇಜು. ಬಳ್ಳಾರಿ, ರಾಯಚೂರು, ಯಾದಗಿರಿ,ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ತೆಲುಗು ಭಾಷಿಕರಿದ್ದಾರೆ. ನವೋದಯ ಮೆಡಿಕಲ್ ಕಾಲೇಜಿನಲ್ಲಿ‌ ಸರ್ಕಾರದ ಖೋಟಾದಲ್ಲಿ 371(ಜೆ) ಮೀಸಲಾತಿ ಅನ್ವಯ ಸೀಟು ನೀಡಲಾಗಿದೆ. ಪ್ರೈವೇಟ್ ಮ್ಯಾನೇಜ್ಮೆಂಟ್ ನ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೀಟ್ ಅಲಾಟ್ ಆಗಿದೆ.ಅದನ್ನು ಪ್ರಶ್ನಿಸಿ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿದೆ. ಇದು ಸರಿಯಲ್ಲ ಕೂಡಲೇ ಅರ್ಜಿ ಹಿಂಪಡೆಯಬೇಕು.ಇದೇ ಕಾರಣಕ್ಕೆ ಈಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದಿವಿ ಅಂತ ಹೈದರಾಬಾದ್ ಕರ್ನಾಟಕ ಹೋರಾಟ ಸಮೀತಿ ಅಧ್ಯಕ್ಷ ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.

ಈ ಬಗ್ಗೆ ನವೋದಯ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮೊನ್ನೆಯಷ್ಟೇ ಸ್ಪಷ್ಟನೆ ನೀಡಿದೆ. ನಾವು ಆರ್ಟಿಕಲ್ 371(ಜೆ) ವಿರುದ್ಧ ಕೋರ್ಟ್ ಮೊರೆ ಹೋಗಿಲ್ಲ. 371(ಜೆ)ಕಲಂನಲ್ಲಿರೊ ನಿಯಮಗಳ ಬಗ್ಗೆ ಸರ್ಕಾರಕ್ಕೆ ಫಾಲೋ ಮಾಡಲು ಹೇಳಿ ಅಂತ ಕೋರ್ಟ್ ನಲ್ಲಿ ಮನವಿ‌ ಮಾಡಿದ್ದಿವಿ ಅಂತ ನವೋದಯ ಮೆಡಿಕಲ್ ಕಾಲೇಜು ಮುಖ್ಯಸ್ಥ ಎಸ್ ಆರ್ ರೆಡ್ಡಿ ಸ್ಪಷ್ಟನೆ ನೀಡಿದ್ರು. ಆದ್ರೆ ನವೋದಯ ಮೆಡಿಕಲ್ ಕಾಲೇಜು ಮಾತ್ರ ಕೋರ್ಟ್ನಲ್ಲಿರೊ ಅರ್ಜಿ ವಾಪಸ್ ಪಡೆಯದೇ ತಮ್ಮ ಧೋರಣೆ ಮುಂದುವರೆಸಿದ್ದಾರೆ ಅಂತ ಆರೋಪಿಸಿ ನಾಳೆ ರಾಯಚೂರು ನಗರ ಬಂದ್‌ಗೆ ಕರೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕದ 371 ಜೆ ವಿಧಿ ಅನುಷ್ಠಾನ ಹೋರಾಟ ಸಮಿತಿ ಮುಖಂಡ ರಜಾಕ ಉಸ್ತಾದ ಮಾತನಾಡಿ, 371(ಜೆ) ವಿರುದ್ಧ ನಾವು ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ನವೋದಯ ಶಿಕ್ಷಣ ಸಂಸ್ಥೆಯ ಎಸ್‌ಆರ್‌ ರೆಡ್ಡಿ ಹೇಳುತ್ತಿದ್ದಾರೆ. 371 ಜೆ ವಿಧಿ ವಿರುದ್ಧವೇ ನ್ಯಾಯಾಲಯಕ್ಕೆ ಹೋಗಿದ್ದುಎಂಬುದರ ಬಗ್ಗೆ ಯಾವುದೇ ಬಹಿರಂಗ ಚರ್ಚೆಗೆ ಬಂದರು ನಾವು ಉತ್ತರ ಕೊಡಲು ಸಿದ್ಧರಿದ್ದೇವೆ. ಈ ಹಿನ್ನೆಲೆ ದಾವೆ ಹಿಂಪಡೆಯುವಂತೆ ಒತ್ತಾಯಿಸಿ ಸೋಮವಾರ ರಾಯಚೂರು ಬಂದ್ ಮಾಡಲಾಗುತ್ತಿದೆ ಎಂದು ಹೇಳಿದರು 

click me!