BBMP: ದಾಖಲೆ ತೆರಿಗೆ ಸಂಗ್ರಹದತ್ತ ಪಾಲಿಕೆ ದಾಪುಗಲು!

Kannadaprabha News   | Asianet News
Published : Mar 07, 2022, 09:01 AM IST
BBMP: ದಾಖಲೆ ತೆರಿಗೆ ಸಂಗ್ರಹದತ್ತ ಪಾಲಿಕೆ ದಾಪುಗಲು!

ಸಾರಾಂಶ

ಕೊರೋನಾ ಆರ್ಥಿಕ ಸಂಕಷ್ಟ, ಲಾಕ್‌ಡೌನ್‌ ನಡುವೆಯೂ ಬಿಬಿಎಂಪಿಗೆ ಕಳೆದ ಬಾರಿಗಿಂತ ಅಧಿಕ ಮತ್ತು ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ದಟ್ಟವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಮಾ.7): ಕೊರೋನಾ (Coronavirus) ಆರ್ಥಿಕ ಸಂಕಷ್ಟ, ಲಾಕ್‌ಡೌನ್‌ (Lockdown) ನಡುವೆಯೂ ಬಿಬಿಎಂಪಿಗೆ (BBMP) ಕಳೆದ ಬಾರಿಗಿಂತ ಅಧಿಕ ಮತ್ತು ದಾಖಲೆ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹವಾಗುವ (Tax Collection) ಸಾಧ್ಯತೆ ದಟ್ಟವಾಗಿದೆ.

ಲಾಕ್‌ಡೌನ್‌, ವಾರಾಂತ್ಯ ಮತ್ತು ನೈಟ್‌ ಕರ್ಫ್ಯೂ (Night Curfew) ಹೀಗೆ ಸಾಕಷ್ಟು ನಿರ್ಬಂಧಗಳು ಎದುರಾದರೂ ಬಿಬಿಎಂಪಿಗೆ ಹರಿದು ಬರುತ್ತಿರುವ ಆಸ್ತಿ ತೆರಿಗೆ ಸಂಗ್ರಹಕ್ಕೆ ಮಾತ್ರ ಯಾವುದೇ ಕೊರತೆ ಆಗಿಲ್ಲ. ಮಾ.5ಕ್ಕೆ .2,838 ಕೋಟಿ ಸಂಗ್ರಹವಾಗಿದೆ. ತಿಂಗಳಾಂತ್ಯದ ವೇಳೆ 3 ಸಾವಿರ ಕೋಟಿಗೂ ಅಧಿಕ ಮೊತ್ತ ಪಾಲಿಕೆ ಖಜಾನೆ ಸೇರುವ ಲೆಕ್ಕಾಚಾರ ಅಧಿಕಾರಿಗಳಿಗಿದೆ. ಕಳೆದ ವರ್ಷ .2,860 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. 

ಇನ್ನೂ ಕಳೆದ 2021-22ನೇ ಸಾಲಿನ ಮಾರ್ಚ್ ಅಂತ್ಯಕ್ಕೆ .2,860 ಕೋಟಿ ಸಂಗ್ರಹವಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಇನ್ನೂ 25 ದಿನ ಬಾಕಿದ್ದು, ಈಗಾಗಲೇ .2,838 ಕೋಟಿ (ಮಾ.5) ಸಂಗ್ರಹವಾಗಿದೆ.  ಕಳೆದ ವರ್ಷ ದಾಖಲೆ ಮುರಿಯಲು ಕೇವಲ .22 ಕೋಟಿ ಸಂಗ್ರಹವಾಗಬೇಕಿದೆ. ಮಾ.10ರ ವೇಳೆಗೆ ಈ ಮೊತ್ತ ಸಂಗ್ರಹವಾಗಲಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Bengaluru: ಬಿಜೆಪಿ ಶಾಸಕರು, ಸಚಿವರಿಗೆ ಬಂಪರ್‌ ಅನುದಾನ

ಗುರಿ ಸಾಧನೆ ಅಸಾಧ್ಯ?: ಬಿಬಿಎಂಪಿ 2021-22ನೇ ಸಾಲಿನ ಆಯವ್ಯಯದಲ್ಲಿ .4 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆರ್ಥಿಕ ವರ್ಷ ಮುಕ್ತಾಯಕ್ಕೆ ಕೇವಲ 25 ದಿನ ಬಾಕಿ ಇದ್ದು, ಈ ಅವಧಿಯಲ್ಲಿ ಅಷ್ಟೊಂದು ಮೊತ್ತ ವಸೂಲಿ ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಧಿಕ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿತಯಾರಿಸಿ ವಸೂಲಿ ಮಾಡುವುದು. ಕಂದಾಯ ವಸೂಲಿ ಅಧಿಕಾರಿಗಳಿಗೆ ನಿರ್ದಿಷ್ಟಗುರಿ ನೀಡುವುದು ಸೇರಿದಂತೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಹಲವು ಸರ್ಕಸ್‌ ನಡೆಸುತ್ತಿದ್ದಾರೆ.

ಯಲಹಂಕ ಮೊದಲು: ಬಿಬಿಎಂಪಿಯ ಎಂಟು ವಲಯಗಳ ಪೈಕಿ ಆಸ್ತಿ ತೆರಿಗೆ ಸಂಗ್ರಹದ ಯಲಹಂಕ ವಲಯದಲ್ಲಿ ಈವರೆಗೆ ಶೇ.83ರಷ್ಟುಗುರಿ ಸಾಧನೆ ಆಗಿದೆ. ಉಳಿದಂತೆ ಮಹದೇವಪುರ ಶೇ.74, ಆರ್‌ಆರ್‌ ನಗರ ಶೇ.73, ಉತ್ತರ ವಲಯ ಶೇ.72, ಬೊಮ್ಮನಹಳ್ಳಿ ಶೇ.71, ದಕ್ಷಿಣ ವಲಯ ಶೇ.68, ಪಶ್ಚಿಮ ವಲಯ ಶೇ.67 ಹಾಗೂ ದಾಸರಹಳ್ಳಿ ವಲಯದಲ್ಲಿ ಶೇ.65ರಷ್ಟುಆಸ್ತಿ ತೆರಿಗೆ ಸಂಗ್ರಹವಾಗಿದೆ.

ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ವಸೂಲಿ ಮಾಡುವ ಉದ್ದೇಶದಿಂದ ಸಹಾಯಕ ಕಂದಾಯ ಅಧಿಕಾರಿಗಳಿಗೆ ನಿರ್ದಿಷ್ಟಗುರಿ ನೀಡಲಾಗಿದ್ದು, ಪ್ರತಿ ವಾರ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ತೆರಿಗೆ ಸಂಗ್ರಹ ಆಧಾರದ ಮೇಲೆ ಅಧಿಕಾರಿಗಳಿಗೆ ಗೌರವಿಸಲಾಗುವುದು. ಪ್ರಸಕ್ತ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ತೆರಿಗೆ ವಸೂಲಿ ಆಗಲಿದೆ.
-ದೀಪಕ್‌ ಕುಮಾರ್‌, ವಿಶೇಷ ಆಯುಕ್ತ, ಬಿಬಿಎಂಪಿ ಕಂದಾಯ.

BBMP Corruption: ತ್ಯಾಜ್ಯದ ಹಣವನ್ನೂ ತಿಂದು ತೇಗಿದ ಪಾಲಿಕೆ ಭ್ರಷ್ಟರು!

ಹೈಕೋರ್ಟ್‌ಗೆ ಕ್ಷಮೆ ಕೇಳಿದ ಬಿಬಿಎಂಪಿ: ನ್ಯಾಯಾಲಯದ ನಿರ್ಬಂಧದ ಹೊರತಾಗಿಯೂ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಿರುವ ಸಂಬಂಧ ಬಿಬಿಎಂಪಿ(BBMP) ಮುಖ್ಯ ಆಯುಕ್ತ ಗೌರವ್‌ ಗುಪ್ತಾ (Gaurav Gupta) ಹೈಕೋರ್ಟ್‌ಗೆ ಬೇಷರತ್‌ ಕ್ಷಮೆ ಯಾಚಿಸಿದರು. 

ಬೆಂಗಳೂರಿನಲ್ಲಿ (Bengaluru) ಘನ ತ್ಯಾಜ್ಯ ವಿಲೇವಾರಿಗೆ(Solid Waste Disposal) ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಶನಿವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರಿದ್ದ ಪೀಠ, ಪದೇ ಪದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿರುವ ಪಾಲಿಕೆಯ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸಿತು.

ಶನಿವಾರ ವಿಚಾರಣೆ ವೇಳೆ ಹಾಜರಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಹಾಗೂ ಪಾಲಿಕೆ ಪರ ವಕೀಲರು, ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಕೆಲ ತಪ್ಪುಗಳು ನಡೆದಿವೆ. ಆದ್ದರಿಂದ, ಈ ಬಾರಿ ಕರುಣೆ ತೋರಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿ, ಬೇಷರತ್‌ ಕ್ಷಮೆಯಾಚಿಸುತ್ತಿರುವುದಾಗಿ ಹೇಳಿದರು.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್