ನರಗುಂದ: 8 ತಿಂಗಳ ಮಗು ಚಿಕಿತ್ಸೆಗೆ 8 ಕಿಮೀ ಚಕ್ಕಡಿಯಲ್ಲೇ ತೆರಳಿದ ದಂಪತಿ!

By Kannadaprabha NewsFirst Published May 30, 2021, 1:03 PM IST
Highlights

* ಅಮರಗೋಳದಿಂದ ನರಗುಂದಕ್ಕೆ ಆಗಮಿಸಿ ಮಗಳಿಗೆ ಚಿಕಿತ್ಸೆ ಕೊಡಿಸಿದರು
* ಗದಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಬಂದ್‌ 
* ಸ್ವಂತ, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಬರಲು ಅವಕಾಶ

ನರಗುಂದ(ಮೇ.30): ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಬಂದ್‌ ಆಗಿದ್ದು, ವಾಂತಿ-ಭೇದಿಯಿಂದ ಬಳಲುತ್ತಿದ್ದ 8 ತಿಂಗಳ ಮಗುವಿಗೆ ಚಿಕಿತ್ಸೆ ಕೊಡಿಸಲು ಅಮರಗೋಳದ ದಂಪತಿ 8 ಕಿಮೀ ದೂರದ ನರಗುಂದ ಪಟ್ಟಣಕ್ಕೆ ಚಕ್ಕಡಿಯಲ್ಲಿ ಆಗಮಿಸಿದ ಘಟನೆ ನಡೆದಿದೆ.

ಬೀರಪ್ಪ ಪೂಜಾರ ಹಾಗೂ ಸರಸ್ವತಿ ಎಂಬುವರ 8 ತಿಂಗಳ ಮಗಳು ರೇಣುಕಮ್ಮನಿಗೆ 2 ದಿನಗಳಿಂದ ನೆಗಡಿ, ವಾಂತಿ, ಭೇದಿ ಆಗಿದ್ದರಿಂದ ಶನಿವಾರ ಗ್ರಾಮದಿಂದ ಒಳ ಮಾರ್ಗವಾದ ಮೂಗನೂರ, ಬನಹಟ್ಟಿರಸ್ತೆ ಮೂಲಕ ನರಗುಂದ ಪಟ್ಟಣಕ್ಕೆ ಆಗಮಿಸಿ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ.

ಎರಡು ದಿನಗಳಿಂದ ಮಗಳಿಗೆ ನೆಗಡಿ, ವಾಂತಿ ಭೇದಿ ಬಂದಿದ್ದರಿಂದ ನರಗುಂದಕ್ಕೆ ಚಕ್ಕಡಿಯಲ್ಲಿ ಬಂದು ನಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಮಗವಿನ ತಾಯಿ ಸರಸ್ವತಿ ಹೇಳಿದರು.

ಗದಗ: ಮಾತೃ ಜಿಲ್ಲೆಗೆ ತೆಲಂಗಾಣ ಪೊಲೀಸ್‌ ಆಯುಕ್ತ ವಿಶ್ವನಾಥ ಸಜ್ಜನರ್‌ ನೆರವು

ಲಾಕ್‌ಡೌನ್‌ ಆಗಿದ್ದರಿಂದ ನಾವು ವಾಹನ ತಂದರೆ ತೊಂದರೆಯಾಗುತ್ತದೆ ಎಂದು ಚಕ್ಕಡಿಯಲ್ಲಿ ನರಗುಂದ ಪಟ್ಟಣಕ್ಕೆ ಬಂದು ಮಗುವಿಗೆ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಮಗುವಿನ ತಂದೆ ಬೀರಪ್ಪ ಹೇಳಿದರು.

ಗ್ರಾಮೀಣ ಭಾಗದ ಜನತೆಗೆ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಆಯಾ ಜಿಲ್ಲಾಡಳಿತವು ಸರ್ಕಾರಿ ವಾಹನಗಳ ಸೌಲಭ್ಯಗಳ ವ್ಯವಸ್ಥೆ ಮಾಡಬೇಕೆಂದು ಸರ್ಕಾರ ನಿರ್ದೇಶನ ನೀಡಿದೆ. ಅದೇ ರೀತಿ ಜಿಲ್ಲಾಡಳಿತವು ಕೂಡ ಗ್ರಾಮೀಣರಿಗೆ ವಾಹನಗಳ ಸೌಲಭ್ಯದ ವ್ಯವಸ್ಥೆ ಮಾಡಿ ಕೆಲವು ತಾಲೂಕು ಆಡಳಿತ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕ ಮಾಡಲು ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಆದರೆ ಗ್ರಾಮೀಣ ಭಾಗದ ಜನರು ಅನಕ್ಷರಸ್ಥರಾಗಿದ್ದರಿಂದ ಇಂಥ ಸೌಲಭ್ಯಗಳನ್ನು ಪಡೆದುಕೊಳ್ಳಲು ತೊಂದರೆಯಾಗಿದೆ. ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ಗ್ರಾಮಸ್ಥರು ಸ್ವಂತ, ಖಾಸಗಿ ವಾಹನಗಳಲ್ಲಿ ಪಟ್ಟಣಗಳ ಆಸ್ಪತ್ರೆಗೆ ಬರಲು ಅವಕಾಶವಿದೆ. ಪೊಲೀಸರು ಸಹ ತಡೆಯುವುದಿಲ್ಲ.
 

click me!