'ಕೊರೋನಾ ರೋಗಿಗಳಿಗಾಗಿ ಕಾಂಗ್ರೆಸ್‌ನಿಂದ ಆ್ಯಂಬುಲೆನ್ಸ್‌'

By Kannadaprabha News  |  First Published May 30, 2021, 12:00 PM IST

* ಕೊರೋನಾ ರೋಗಿಗಳು ಆಸ್ಪತ್ರೆಗೆ ಸಕಾಲಕ್ಕೆ ಬರಲು ಆ್ಯಂಬುಲೆನ್ಸ್‌ ನೆರವು
* ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ ಕಾಂಗ್ರೆಸ್‌
* ಬಡ ರೋಗಿಗಳ ನೆರವಿಗೂ ಆ್ಯಂಬುಲೆನ್ಸ್‌ ಸೇವೆ ಲಭ್ಯ


ಹಾವೇರಿ(ಮೇ.30): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೂಚನೆಯ ಮೇರೆಗೆ ಜಿಲ್ಲಾ ಕಾಂಗ್ರೆಸ್‌ನಿಂದ ಕೊರೋನಾ ರೋಗಿಗಳ ಸೇವೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಉಚಿತವಾಗಿ ಎರಡು ಆ್ಯಂಬುಲೆನ್ಸ್‌ಗಳನ್ನು ಶನಿವಾರ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಸವರಾಜ ಶಿವಣ್ಣವರ ಅವರು ಜಿಲ್ಲಾ ಆಸ್ಪತ್ರೆಯ ಮುಖ್ಯ ಸರ್ಜನ್‌ ಡಾ. ಪಿ.ಆರ್‌. ಹಾವನೂರು ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ ಮಾತನಾಡಿ, ಕೋವಿಡ್‌ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಅನೇಕ ಸಾವು- ನೋವುಗಳಾಗುತ್ತಿವೆ. ಬಡಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆ್ಯಂಬುಲೆನ್ಸ್‌ಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಸೇವೆಗೆ ನೀಡಲಾಗಿದೆ ಎಂದರು.

Tap to resize

Latest Videos

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಆ್ಯಂಬುಲೆನ್ಸ್‌ಗಳು ಸೋಂಕಿನಿಂದ ನರಳುವ ಜನರನ್ನು ಆಸ್ಪತ್ರೆಗೆ ಕರೆತರಲು ಹಾಗೂ ಇತರೇ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗಲಿ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಜಿಲ್ಲಾಡಳಿತದೊಂದಿಗೆ ಕಾಂಗ್ರೆಸ್‌ ಪಕ್ಷವು ಕೈಜೋಡಿಸಿದೆ. ಅನೇಕ ಸಲಹೆ- ಸೂಚನೆಗಳನ್ನು ನೀಡಿದೆ ಎಂದರು.

ಬ್ಯಾಡಗಿ: ಕೊರೋನಾದಿಂದ ಒಂದೇ ದಿನ ತಾಯಿ- ಮಗ ಇಬ್ಬರೂ ದರ್ಮರಣ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕಮಾರ ಅವರ ಸೂಚನೆ ಮೇರೆಗೆ ಆ್ಯಂಬುಲೆನ್ಸ್‌ಗಳನ್ನು ನೀಡಲಾಗಿದೆ. ಸಕಾಲದಲ್ಲಿ ಬಡರೋಗಿಗಳಿಗೆ ಇವು ನೆರವಾಗಲಿ ಎಂದು ಆಶಿಸಿದರು.
ಜಿಲ್ಲಾ ಕಾಂಗ್ರೆಸ್‌ ವಕ್ತಾರ ಡಾ. ಸಂಜಯ ಡಾಂಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಸೂಚನೆಯ ಮೇರೆಗೆ ಜಿಲ್ಲೆ ಕಾಂಗ್ರೆಸ್‌ ಮುಖಂಡರಾಗಿರುವ ಮಾಜಿ ಸಚಿವ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಂ. ಹಿರೇಮಠ ಸೇರಿದಂತೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಡಾ. ಡಾಂಗೆ ನರ್ಸಿಂಗ್‌ ಹೋಂ ಮತ್ತು ಡಿ.ಕೆ. ಶಿವಕುಮಾರ ಅಭಿಮಾನಿ ಬಳಗದ ವತಿಯಿಂದ ಈ ಎರಡು ಆ್ಯಂಬುಲೆನ್ಸ್‌ಗಳನ್ನು ಕೋವಿಡ್‌ ಸೋಂಕಿತರ ಸೇವೆಗಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ನೀಡಲಾಗಿದೆ. ಸೋಂಕಿತರು ಲಾಕ್‌ಡೌನ್‌ ಈ ಸಂದರ್ಭದಲ್ಲಿ ಸಕಾಲಕ್ಕೆ ವಾಹನಗಳು ಸಿಗದೇ ಆಸ್ಪತ್ರೆಗಳಿಗೆ ಬರಲು ಪರದಾಡುತ್ತಾರೆ. ಅವರಿಗೆ ಆಸ್ಪತ್ರೆಗೆ ಸಕಾಲಕ್ಕೆ ಬರಲು ಈ ವಾಹನಗಳು ನೆರವಾಗಲಿದೆ. ಇತರೆ ಬಡ ರೋಗಿಗಳ ನೆರವಿಗೂ ಈ ಆ್ಯಂಬುಲೆನ್ಸ್‌ ಸೇವೆ ಲಭ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ. ಪಿ.ಆರ್‌. ಹಾವನೂರು, ಡಾ. ಪರಸಪ್ಪ ಚುರ್ಚಿಹಾಳ, ಡಾ. ನಿರಂಜನ ಬಣಕಾರ, ಡಾ. ಷಣ್ಮುಖಪ್ಪ, ನಗರಸಭೆಯ ಮಾಜಿ ಅಧ್ಯಕ್ಷ ಪರಶುರಾಮ ಅಡಕಿ, ಶಹರ ಕಾಂಗ್ರೆಸ್‌ ಅಧ್ಯಕ್ಷ ಪಿ.ಎಸ್‌. ಬಿಷ್ಟನಗೌಡ್ರ, ಯುವ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ ಹಿರೇಮಠ, ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷ ಅಲ್ಪಾಪ ಜಮಾದಾರ, ಐ.ಎ. ಜಮಾದಾರ, ಉಮೇಶ ವಾಗ, ಅಲ್ತಾಫ ನದಾಫ, ಇಂಬ್ರಾಹಿಂ ದಾವಣಗೆರೆ ಇತರರು ಇದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!