ದಾವಣಗೆರೆ : 500ಕ್ಕೂ ಹೆಚ್ಚು ಗ್ರಾಮಗಳಿಗೆ ವ್ಯಾಪಿಸಿದ ಕೊರೋನಾ ಮಹಾಮಾರಿ

By Kannadaprabha News  |  First Published May 26, 2021, 3:59 PM IST
  • ಮಹಾಮಾರಿ ಕೊರೊನಾ ಅಬ್ಬರಕ್ಕೆ ಮಧ್ಯ ಕರ್ನಾಟಕದ ದಾವಣಗೆರೆ  ಜಿಲ್ಲೆ ತತ್ತರ
  •  500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಪಾಸಿಟಿವ್ ಕೇಸ್ ಹತ್ತಾರು ಸಾವು
  • ವೈರಸ್ ರಣಕೇಕೆಯನ್ನೇ ಹಾಕುತ್ತಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ

ವರದಿ : ನಾಗರಾಜ ಎಸ್. ಬಡಿದಾಳ್

ದಾವಣಗೆರೆ (ಮೇ.26): ಮಹಾಮಾರಿ ಕೊರೋನಾ ಅಬ್ಬರಕ್ಕೆ ಮಧ್ಯ ಕರ್ನಾಟಕದ ದಾವಣಗೆರೆ  ಜಿಲ್ಲೆ ತತ್ತರಿಸಿದೆ. ನಗರ , ಪಟ್ಟಣ ಮಾತ್ರವಲ್ಲದೇ  500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಪಾಸಿಟಿವ್ ಕೇಸ್ ಹತ್ತಾರು ಸಾವುಗಳ ಮೂಲಕ ವೈರಸ್ ರಣಕೇಕೆಯನ್ನೇ ಹಾಕುತ್ತಿರುವುದು ಜನರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. 

Tap to resize

Latest Videos

ಕೆಲ ದಿನಗಳಿಂದ ಗ್ರಾಮೀಣ ಪ್ರದೇಶಕ್ಕೂ ಮಹಾಮಾರಿ ಕೊರೋನಾ ಲಗ್ಗೆ ಇಟ್ಟಿದ್ದು ಮನೆ ಮಂದಿ ನೆರೆ ಹೊರೆಯವರು, ಗ್ರಾಮಗಳು ಸೋಂಕಿಗೆ ತುತ್ತಾಗುತ್ತಿವೆ. 

'ವೈದ್ಯರ ನಡೆ ಹಳ್ಳಿಗಳ ಕಡೆ' ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್ .

ಒಂದೇ ಮನೆಯಲ್ಲಿ ಮಕ್ಕಳಿಂದ ವಯೊವೃದ್ಧರವರೆಗೆ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅನೇಕರು ಸೋಂಕಿದ್ದರೂ ಅಸಡ್ಡೆ ತೋರಿ ಮನೆ ಮಂದಿಗೆ ತಗುಲಲು ಕಾರಣರಾದರೆ ಮತ್ತೆ ಕೆಲವರು ತಮ್ಮ ಜೊತೆಗೆ ನೆರೆ ಹೊರೆಯವರಿಗೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಸೋಂಕು ಹರಡಲು ಕಾರಣರಾಗುತ್ತಿದ್ದಾರೆ. 

ಜಿಲ್ಲೆಯಲ್ಲಿ 196 ಗ್ರಾಪಂಗಳಿದ್ದು 823ಕ್ಕು ಹೆಚ್ಚು ಗ್ರಾಮಗಳಿಗೆ ಈ ಪೈಕಿ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. 43 ಗ್ರಾಮಗಳಲ್ಲಿ 10ಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು  ಬರುತ್ತಿವೆ. ದಾವಣಗೆರೆ ತಾ. ಮುದಹದಡಿ  ಗ್ರಾಮದಲ್ಲಿ 13, ಹರಿಹರ ತಾ.ಕಡರ ನಾಯಕನಹಳ್ಲಿ ಗ್ರಾಮದಲ್ಲಿ 22 ಜನರ ನಿಗೂಢ ಸಾವು ಈಗ ಗ್ರಾಮೀಣರಲ್ಲಿ ಭಯ ಹುಟ್ಟುಹಾಕಿದೆ. 

ಕೆಲ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳ ಅಂತರದಲ್ಲಿ 2- 3 ಸಾವುಗಳು ಮೇಲಿಂದ ಮೇಲೆ ಸಂಭವಿಸಿರುವುದು ಮತ್ತಷ್ಟು ಆತಂಕ ಹುಟ್ಟು ಹಾಕಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

ಕೆಮ್ಮು ಶೀತ, ಜ್ವರ, ಮೈ ಕೈ ನೋವು, ಸುಸ್ತು, ತಲೆಸುತ್ತು  ತಲೆನೋವು, ಕಣ್ಣು ಮಂಜಾಗುವುದು ಇಂತಹ ಸೋಂಕಿನ ಲಕ್ಷಣಗಳಿದ್ದರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮಾತ್ರ ಮುಂದಾಗುತ್ತಿಲ್ಲ.

ಕೆಲವರು ಸೋಂಕಿನ ಲಕ್ಷಣ ಇದ್ದರೂ ಮುಚ್ಚಿಟ್ಟುಕೊಂಡು ಬೇರೆಯವರಿಗೆ ಹರಡಲು ಕಾರಣರಾಗುತ್ತಿದ್ದಾರೆ. ಇದರಿಂದ ಇಡೀ ಊರಿನವರಿಗೂ ಸೋಂಕು ಹಬ್ಬುತ್ತಿದೆ. ಆರೋಗ್ಯ ಇಲಾಖೆ ತೆರಳಿ ಬಲವಂತವಾಗಿ ತಪಾಸಣೆ ಮಾಡಿ ಕೋವಿಡ್ ಕೇರೆ ಸೆಂಟರ್‌ ಸೇರಲು ಬೇಡಿಕೊಳ್ಳುತ್ತಿದ್ದಾರೆ. 

click me!