ಬಾದಾಮಿಗೂ ವಕ್ಕರಿಸಿದ ಮಹಾಮಾರಿ ಕೊರೋನಾ: ಆತಂಕದಲ್ಲಿ ಜನತೆ

By Kannadaprabha NewsFirst Published May 4, 2020, 11:47 AM IST
Highlights

ಬಾಗಲಕೋಟೆ ಜಿಲ್ಲೆಯಲ್ಲಿ ಭಾನುವಾರ ಒಟ್ಟು 3 ಕೋವಿಡ್‌-19 ದೃಢ| ಬಾದಾಮಿ ತಾಲೂಕಿನ ಡಾನಕ ಶಿರೂರ ಗ್ರಾಮದ 23 ವಯಸ್ಸಿನ ಮಹಿಳೆಯಲ್ಲಿ ಸೋಂಕು| ಧಾರವಾಡದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ|

ಬಾಗಲಕೋಟೆ(ಮೇ.04): ಜಿಲ್ಲೆಯಲ್ಲಿ ಭಾನುವಾರ ಒಟ್ಟು 3 ಕೋವಿಡ್‌-19 ದೃಢ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮುಧೋಳದ ದಂಪತಿಗಳಲ್ಲಿ ಕಾಣಿಸಿಕೊಂಡ ಕೊರೋನಾ ಇದೀಗ ಜಿಲ್ಲೆಯ ಮತ್ತೊಂದು ತಾಲೂಕಿಗೂ ಕೊರೋನಾ ಸೋಂಕು ಆವರಿಸಿಕೊಂಡಿದೆ.

ಬಾದಾಮಿ ತಾಲೂಕಿನ 23 ವಯಸ್ಸಿನ ಮಹಿಳೆಯಲ್ಲಿ ಸೋಂಕು ದೃಢ ಪಟ್ಟಿದ್ದು ಸದ್ಯ ಧಾರವಾಡದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾದಾಮಿ ತಾಲೂಕಿನ ಕೊನೆಯ ಗ್ರಾಮ ಡಾನಕ ಶಿರೂರ ಗ್ರಾಮದ ಮಹಿಳೆಗೆ ಸೋಂಕು ಕಂಡು ಬಂದಿದೆ. ಭಾನುವಾರ ಸಂಜೆ ಬಿಡುಗಡೆ ಮಾಡಲಾದ ಮಾಧ್ಯಮ ಬುಲೆಟಿನ್‌ನಲ್ಲಿ ಉಸಿರಾಟದ ತೊಂದರೆ ಎಂದು ಹಾಗೂ ಇನ್ನೂ ವೈದ್ಯ​ಕೀಯ ತನಿಖೆ ಮುಂದುವರೆದಿದೆ ಎಂದು ತಿಳಿಸಲಾಗಿದೆ.

ಕೊರೋನಾ ಭೀತಿ: 'ಬೇರೆ ಕಡೆಯಿಂದ ಮರ​ಳಿದ ಕಾರ್ಮಿ​ಕ​ರಿಗೆ ಕ್ವಾರಂಟೈನ್‌ ಕಡ್ಡಾಯ'

ಸದ್ಯ ಧಾರವಾಡದ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆ ಇದ್ದು ಆದರೆ ಬಾದಾಮಿ ತಾಲೂಕಿಗೆ ಹೊಂದಿಕೊಂಡಿರುವ ರೋಣ ನಗರ ಸೇರಿದಂತೆ ಹಲವೆಡೆ ಸಂಚರಿಸಿದ ಸಾಧ್ಯತೆಗಳು ಸಹ ಇವೆ ಎಂದು ಹೇಳಲಾಗುತ್ತಿದೆ.
 

click me!