ಕ್ವಾರಂಟೈನ್‌ನಲ್ಲಿರುವ ಹಲವರು ಚಿತ್ರವಿಚಿತ್ರ ಬೇಡಿಕೆಗಳಿಗೆ ಸುಸ್ತಾದ ಅಧಿಕಾರಿಗಳು|ನನ್ನ ಫ್ರೆಂಡ್ ಬರ್ತ್ ಡೇ ಇದೆ ಕೇಕ್ ತಂದು ಕೊಡಿ|ಇನ್ನು ಕೆಲವರು ತಮಗೆ ತಿನ್ನಲು ಕೇವಲ ಅನ್ನ ಸಾಂಬಾರ್ ಕೊಡುತ್ತಿದ್ದಾರೆ, ಬಿರಿಯಾನಿ ಬೇಕು ಎನ್ನುತ್ತಿದ್ದಾರೆ|
ಬೆಳಗಾವಿ(ಮೇ.04): ದಿನೇ ದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚುವುದು, ಅವರಿಗೆ ಚಿಕಿತ್ಸೆ ಕೊಡುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇದರ ನಡುವೆ ಕ್ವಾರಂಟೈನ್‌ನಲ್ಲಿರುವ ಹಲವರು ಚಿತ್ರವಿಚಿತ್ರ ಬೇಡಿಕೆಗಳನ್ನಿಟ್ಟು ಅಧಿಕಾರಿಗಳಿಗೆ ತಲೆನೋವು ತಂದಿಡುತ್ತಿದ್ದಾರೆ.
ಗುಜರಾತ್‌ನ ಕೋಟಾಗೆ ಶಿಕ್ಷಣಕ್ಕೆಂದು ಹೋಗಿದ್ದ ಶ್ರೀಮಂತರ ಮಕ್ಕಳು ಬೆಳಗಾವಿಗೆ ವಾಪಸಾಗಿದ್ದು, ಅವರನ್ನು ಇಲ್ಲಿನ ವಿವಿಧ ಲಾಡ್ಜ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ತಲ್ವಾರ್‌ನಿಂದ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡವನ ಹೆಡೆಮುರಿ ಕಟ್ಟಿದ ಪೊಲೀಸರು..!
ಇವರಲ್ಲೊಬ್ಬಾತ ನನ್ನ ಫ್ರೆಂಡ್ ಬರ್ತ್ ಡೇ ಇದೆ ಕೇಕ್ ತಂದು ಕೊಡಿ ಎಂದರೆ, ಇನ್ನು ಕೆಲವರು ತಮಗೆ ತಿನ್ನಲು ಕೇವಲ ಅನ್ನ ಸಾಂಬಾರ್ ಕೊಡುತ್ತಿದ್ದಾರೆ, ಬಿರಿಯಾನಿ ಬೇಕು ಎನ್ನುತ್ತಿದ್ದಾರೆ. ಇವರ ಬೇಡಿಕೆಗಳಿಂದ ಅಧಿಕಾರಿಗಳು ಅಕ್ಷರಶಃ ಸುಸ್ತು ಹೊಡೆದಿದ್ದಾರೆ.