ಬೀದರ್‌: ಕೊರೋನಾ ಅಟ್ಟಹಾಸಕ್ಕೆ ಮತ್ತೆ ಇಬ್ಬರು ಬಲಿ, 13 ಜನರಿಗೆ ಪಾಸಿಟಿವ್‌

Kannadaprabha News   | Asianet News
Published : Jun 22, 2020, 10:49 AM ISTUpdated : Jun 22, 2020, 11:05 AM IST
ಬೀದರ್‌: ಕೊರೋನಾ ಅಟ್ಟಹಾಸಕ್ಕೆ ಮತ್ತೆ ಇಬ್ಬರು ಬಲಿ, 13 ಜನರಿಗೆ ಪಾಸಿಟಿವ್‌

ಸಾರಾಂಶ

ಬೀದರ್‌ ಜಿಲ್ಲೆಯಲ್ಲಿ ಇಲ್ಲಿಯವರೆಗೆ 497 ಜನರಿಗೆ ಕೋವಿಡ್‌-19 ಸೋಂಕು ದೃಢ| ಒಟ್ಟು 35167 ಜನರ ಕೋವಿಡ್‌-19 ಪರೀಕ್ಷೆ ನಡೆಸಲಾಗಿದ್ದು 32708 ಜನರಿಗೆ ನೆಗೆಟಿವ್‌| ಜಿಲ್ಲೆಯಲ್ಲಿ ಮೃತರಿಬ್ಬರಿಗೆ ಸೋಂಕು ತಗುಲಿರುವದು ಖಚಿತ|

ಬೀದರ್‌(ಜೂ.22): ಜಿಲ್ಲೆಯಲ್ಲಿ ಭಾನುವಾರ ಮತ್ತಿಬ್ಬರ ಸಾವು ದಾಖಲಾಗಿದ್ದರೆ, ಮತ್ತೇ 13 ಜನರಿಗೆ ಕೋವಿಡ್‌ ಪಾಸಿಟಿವ್‌ ಬಂದಿದ್ದು, ಒಟ್ಟು 497ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 497 ಜನರಿಗೆ ಕೋವಿಡ್‌-19 ಸೋಂಕು ತಗುಲಿದ್ದು, ಒಟ್ಟು 35167 ಜನರ ಕೋವಿಡ್‌-19 ಪರೀಕ್ಷೆ ನಡೆಸಲಾಗಿದ್ದು 32708 ಜನರ ವರದಿ ನೆಗೆಟಿವ್‌ ಬಂದಿದೆ. ಜಿಲ್ಲೆಯಲ್ಲಿ ಮೃತರಿಬ್ಬರಿಗೆ ಸೋಂಕು ತಗುಲಿರುವದು ಖಚಿತವಾಗಿದ್ದು, ಇಲ್ಲಿನ ಓಲ್ಡ್‌ ಸಿಟಿಯ 70 ವರ್ಷದ ವೃದ್ಧ ರೋಗಿ ಸಂ. 9149 ಜೂ.18ರಂದು ಸಾವನ್ನಪ್ಪಿದರೆ, ತಾಲೂಕಿನ ಮಾಳೆಗಾಂವ್‌ ಗ್ರಾಮದ 46 ವರ್ಷದ ರೋಗಿ ಸಂ. 9150 ಜೂ. 17ರಂದು ಚಿಕಿತ್ಸೆಗೆ ದಾಖಲಾಗಿದ್ದು, 18ರಂದು ಮೃತ​ಪ​ಟ್ಟಿ​ದ್ದ​ರು.

ರಸ್ತೆ ಬದಿಯಲ್ಲಿ ಪಿಪಿಇ ಕಿಟ್ ಬಿಸಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ; ಗ್ರಾಮಸ್ಥರಲ್ಲಿ ಆತಂಕ

ಕೋವಿಡ್‌ನಿಂದ 324 ಜನ ಗುಣಮುಖರಾಗಿದ್ದು. 1962 ಜನರ ಪ್ರಯೋಗಾಲಯದ ವರದಿ ಬರುವದು ಬಾಕಿಯಿದೆ. ಇನ್ನು 158 ಜನ ಸೋಂಕನ್ನು ಹೊಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 15 ಜನರ ನಿಧನವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

PREV
click me!

Recommended Stories

Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!
ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!