ಕೊರೋನಾ ಸೋಂಕಿತ ಖಾಸಗಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ| ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಘಟನೆ| ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ| ಈ ಸಂಬಂಧ ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲು|
ಬಳ್ಳಾರಿ(ಆ.08): ಕೊರೋನಾ ಸೋಂಕಿತ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದಿದೆ.
ಮೃತಳಿಗೆ ಪತಿ ಹಾಗೂ ಐದು ವರ್ಷದ ಮಗನಿದ್ದಾನೆ. ಸಂಡೂರಿನ 14ನೇ ವಾರ್ಡ್‌ನ ಈ ಶಿಕ್ಷಕಿಗೆ ಕಳೆದ ಆ. 2ರಂದು ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮನೆಯ ಕೋಣೆಯೊಂದರಲ್ಲಿ ಐಸೋಲೇಷನ್‌ನಲ್ಲಿದ್ದರು. ಅವರ ಮಾವ (ಗಂಡನ ತಂದೆ) ಹಾಗೂ ಅತ್ತೆಗೂ ಸೋಂಕು ಇರುವುದರಿಂದ ಮತ್ತೊಂದು ಕೋಣೆಯಲ್ಲಿ ಅವರಿದ್ದರು. ಐದು ವರ್ಷದ ಮಗನನ್ನು ಸಂಬಂಧಿಕರ ಮನೆಯಲ್ಲಿರಿಸಿದ್ದರು.
ಪಿಯುಸಿ ಪರೀಕ್ಷೆಯಲ್ಲಿ ಪಡೆದದ್ದು 98 ಅಂಕ, ಅಂಕಪಟ್ಟಿಯಲ್ಲಿ ಬಂದಿದ್ದು 20 ಅಂಕ!
ಶುಕ್ರವಾರ ಬೆಳಗ್ಗೆ ಎಂದಿನಂತೆ ಕೋಣೆಯ ಬಾಗಿಲು ತೆರೆದಾಗ ಮಹಿಳೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯಾವ ಕಾರಣಕ್ಕಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನು ಖಚಿತವಾಗಿಲ್ಲ. ಈ ಸಂಬಂಧ ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.