ಮನೆಯೊಳಗಿದ್ದೇ ಮಕ್ಕಳ ಮೊಬೈಲ್ ಕ್ವಿಜ್ ಈಗ ಜನಪ್ರಿಯ/ ಪುರೋಹಿತ ಸುಧೇಶ್ ಭಟ್ ವಿನೂತನ ಕಾಯಕ | ಸಂಸ್ಕೃತಿ, ಸಂಸ್ಕಾರದ ಪ್ರಶ್ನಾವಳಿ/ ವೈರಲ್ ಆದ ಒಳ್ಳೆಯ ವಿಚಾರ
ಮೂಡುಬಿದಿರೆ(ಮೇ 19) ಅತ್ತ ಶಾಲೆಯೂ ಇಲ್ಲದೇ ಇನ್ನೊಂದೆಡೆ ಹೊರಗೂ ಸುತ್ತಾಡಲಾಗದೇ ಮನೆಯಲ್ಲೇ ಬಾಕಿಯಾದ ಮಕ್ಕಳಿಗೆ ಲಾಕ್‌ಡೌನ್ ಅವಧಿಯುದ್ದಕ್ಕೂ ಮೊಬೈಲ್‌ನಲ್ಲೇ ಸಂಸ್ಕೃತಿ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ಕ್ವಿಜ್ ಸಂಘಟಿಸುವ ಮೂಲಕ ಪುರೋಹಿತರೊರ್ವರು ಗಮನ ಸೆಳೆದಿದ್ದಾಾರೆ.
ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಅರ್ಚಕ ಕೆ.ಪದ್ಮನಾಭ ಭಟ್ ಅವರ ಪುತ್ರ ಕೆ.ಸುಧೇಶ್ ಭಟ್, ಹತ್ತನೇ ತರಗತಿವರೆಗಿನ ಮಕ್ಕಳಿಗಾಗಿ ‘ವಿದ್ಯಾಾಕಲ್ಪತರು’ ಕ್ವಿಜ್ ನಡೆಸಿ ಮಕ್ಕಳ ಜತೆಗೆ ಮನೆಮಂದಿಯನ್ನೂ ಜ್ಞಾನಯಜ್ಞದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ಹಬ್ಬ ಯಕ್ಷಗಾನದ ಸದಲ್ಲಿಲ್ಲ, ಆನ್ ಲೈನ್ ಜಾತ್ರೆ ಇದೆಯಲ್ಲ
ಕ್ವಿಜ್ ನಡೆಸುವ ವಿಧಾನ
ಪ್ರತಿ ದಿನ ಸಂಜೆ4.3.ಕ್ಕೆ ಕಲ್ಪತರು ವಾಟ್ಸಾಪ್ ಬಳಗದಲ್ಲಿ ಸುಧೇಶ್ ಭಟ್ ಕಳಿಸುವ ಪ್ರಶ್ನೆಗಳಿಗೆ ವಾಯ್ಸ್ ಮೆಸೇಜ್ ಮೂಲಕ ಮಕ್ಕಳು ಉತ್ತರಿಸಬೇಕು. ಮೊದಲ ಸರಿ ಉತ್ತರಕ್ಕೆ ಅಂಕವಿದೆ. ಬರೋಬ್ಬರಿ ಒಂದೂವರೆ ಗಂಟೆ ನಡೆಯುವ ಪ್ರಶ್ನೋತ್ತರದಲ್ಲಿ ಉತ್ತರದ ಹುಡುಕಾಟದಲ್ಲಿ ಮಕ್ಕಳ ಸಿದ್ಧತೆ, ಬದ್ಧತೆ ಮತ್ತು ಉತ್ಸಾಹ ಎದ್ದುಕಾಣುತ್ತದೆ. ಸಂಜೆ ವೇಳೆಗೆ ಮತ್ತೆೆ ದೇವರ ಸ್ತೋೋತ್ರ, ವಿಷಯವಾರು ಕಿರು ಭಾಷಣದ ಟಾಸ್ಕ್ ಗಳು, ಕೊರೋನಾ ಸಹಿತ ಸಾಮಾಜಿಕ ಜಾಗೃತಿ ಮೂಡಿಸುವ ವಿಷಯಗಳ ಬಗ್ಗೆ ಒಂದೆರಡು ನಿಮಿಷಗಳಲ್ಲಿ ಮಕ್ಕಳು ತಮ್ಮ ಅನಿಸಿಕೆಯನ್ನು ಚಿತ್ರೀಕರಿಸಿ ಮೊಬೈಲ್‌ನಲ್ಲೇ ರವಾನಿಸಬೇಕು. ಸುಮಾರು 85 ಕುಟುಂಬಗಳ ಪುಟಾಣಿಗಳು ಸಂತೋಷದಿಂದ ಈ ಕ್ವಿಜ್‌ನಲ್ಲಿ ತೊಡಗಿಕೊಂಡಿದ್ದಾಾರೆ. ಪುಟಾಣಿಗಳ ಮನೆ ಮಂದಿಯೂ ಸಕ್ರಿರಾಗಿದ್ದಾರೆ.
1300ಕ್ಕೂ ಅಧಿಕ ಪ್ರಶ್ನೆ
ಲಾಕ್‌ಡೌನ್ ಆರಂಭವಾದಂದಿನಿಂದ ರಸಪ್ರಶ್ನೆ ಮೂಲಕ 1300 ಕ್ಕೂ ಅಧಿಕ ಪ್ರಶ್ನೆಗಳಿಗೆ ಮಕ್ಕಳು ಈಗಾಗಲೇ ಉತ್ತರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗ ಬೇಡಿಕೆ ಹೆಚ್ಚಿದ್ದು, ಗುಜರಾತ್, ಆಂಧ್ರ, ಮಹಾರಾಷ್ಟ್ರದ ಜತೆಗೆ ಕರ್ನಾಟಕದ ಮೂಲೆ ಮೂಲೆಯ ಉತ್ಸಾಹಿಗಳು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಪ್ರತಿ ದಿನ ಕ್ವಿಜ್ ನಡೆಸುತ್ತಾರೆ. ಶ್ರೀ ವಿಷ್ಣು ಸಹಸ್ರನಾಮ, ಶ್ರೀ ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ, ನರಸಿಂಹ ಸ್ತುತಿ ಹೀಗೆ ಸಕಾಲಿಕ ಸ್ತೋತ್ರಗಳನ್ನೆಲ್ಲ ಸುಮಧುರ ಸ್ವರದಲ್ಲಿ ಪತ್ನಿ ಸುರಮ್ಯಾ ಭಟ್ ಜತೆಗೆ ಪಠಿಸಿದ ವಾಯ್ಸ್ ಮೆಸೇಜ್‌ಗಳೂ ಈ ಮಕ್ಕಳ ಮೂಲಕ ಮನೆಮಂದಿಗೆ ದೊರೆತು ವೈರಲ್ ಆಗಿವೆ. ವೈದಿಕ ಹವನ ಮಂಡಲಗಳು, ರಂಗೋಲಿ ಹೀಗೆ ಕಲಾ ನಿಪುಣರೂ ಆಗಿರುವ ಸುಧೇಶ್ ಭಟ್ ದಂಪತಿ ಮಕ್ಕಳಿಗೆ ತಮ್ಮಿಂದಾಗುವುದೆಲ್ಲವನ್ನೂ ವಿದ್ಯಾಕಲ್ಪತರು ಹೆಸರಲ್ಲಿ ಧಾರೆ ಎರೆದಿದ್ದಾಾರೆ.