ಹೆಚ್ಚಿದ ಕೊರೋನಾ, ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಹೆಚ್ಚಳ

By Suvarna NewsFirst Published May 19, 2020, 10:43 PM IST
Highlights

ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳನ್ನು ಹೆಚ್ಚಳ ಮಾಡಲಾಗಿದೆ. 

ಬೆಂಗಳೂರು (ಮೇ 19): ರಾಜ್ಯ ರಾಜಧಾನಿಯಿಂದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಈ ವರೆಗೆ 17 ಇದ್ದ ಕಂಟೈನ್ಮೆಂಟ್ ಜೋನ್ ವಾರ್ಡ್‌ಗೆ ಇದೀಗ ಹೊಸದಾಗಿ 2 ವಾರ್ಡ್ ಸೇರ್ಪಡೆ ಮಾಡಲಾಗಿದೆ.

ವೆಸ್ಟ್ ಝೋನ್‌ನಲ್ಲಿ ವಾರ್ಡ್ 23 ನಾಗವಾರ ಮತ್ತು ಆರ್ ಆರ್ ನಗರ ವಾರ್ಡ್ 129 ಜ್ಞಾನಭಾರತಿ ನಗರ ಹೊಸದಾಗಿ ಕಂಟೈನ್ಮೆಂಟ್‌ ಝೋನ್‌ಗೆ ಸೇರ್ಪಡೆಯಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ರೆಡ್‌ ಝೋನ್‌ಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ರಾಜ್ಯಕ್ಕೆ ಮುಳುವಾದ ಮುಂಬೈ ಸಂಪರ್ಕ; ದಿನೇ ದಿನೇ ಹೆಚ್ಚಾಗುತ್ತಿವೆ ಪಾಸಿಟೀವ್ ಕೇಸ್‌ಗಳು

ಇಂದು (ಮಂಗಳವಾರ) ಈ ಎರಡೂ ವಾರ್ಡ್‌ನಲ್ಲಿ ಹೊಸದಾಗಿ ಎರಡು ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದವು. ಈ ಹಿನ್ನೆಲೆ ಬಿಬಿಎಂಪಿ ಈ ಎರಡೂ ವಾರ್ಡ್‌ಗಳನ್ನು ಕಂಟೈನ್ಮೆಂಟ್ ಝೊನ್ ಲಿಸ್ಟ್‌ಗೆ ಸೇರಿಸಿದೆ.

ಬೆಂಗಳೂರಿನಲ್ಲಿ ಒಟ್ಟು  251 ಕೇಸ್‌ಗಳು ಪತ್ತೆಯಾಗಿದ್ದು, ಈ ಪೈಕಿ 119 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಂದಹಾಗೆ ಪ್ರಸ್ತುತ 123 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನಗರದಲ್ಲಿ ಒಟ್ಟು 9 ಜನರು ಕೊರೋನಾಗೆ ಬಲಿಯಾಗಿದ್ದಾರೆ.  

click me!