ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕೋವಿಡ್ ಪಾಸಿಟಿವ್ ರೋಗಿಸಂಖ್ಯೆ-14497 ಪ್ರಾಥಮಿಕ ಸಂಪರ್ಕದಿಂದ 7 ಜನರಿಗೆ ಕೋವಿಡ್ ಸೋಂಕು ದೃಢ| ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ಏಳೂ ರೋಗಿಗಳ ಸೂಕ್ತ ನಿಗಾ ಮತ್ತು ಚಿಕಿತ್ಸೆಗೆ ಕ್ರಮ|
ವಿಜಯಪುರ(ಜು.06): ನಗರದಲ್ಲಿ ಇತ್ತೀಚೆಗೆ ನಿಧನ ಹೊಂದಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕೋವಿಡ್ ಪಾಸಿಟಿವ್ ರೋಗಿಸಂಖ್ಯೆ-14497 ಅವರ ಪ್ರಾಥಮಿಕ ಸಂಪರ್ಕದಿಂದ 7 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿಸಿದರು.
ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಈಗಾಗಲೇ ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ಏಳೂ ರೋಗಿಗಳ ಸೂಕ್ತ ನಿಗಾ ಮತ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿಜಯಪುರ: ಮಹಿಳಾ ವಿವಿ ಸಿಬ್ಬಂದಿ ಕೊರೋನಾಗೆ ಬಲಿ, ಹೆಚ್ಚಿದ ಆತಂಕ
ಮಹಿಳಾ ವಿವಿಯ ಒಟ್ಟು ಏಳು ಜನ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿರುವುದರಿಂದ ಇನ್ನುಳಿದ ಸಿಬ್ಬಂದಿಯಲ್ಲಿಯೂ ಆತಂಕ ಮನೆ ಮಾಡಿದೆ.