ವಿದೇಶದಿಂದ ವಾಪಸ್ಸಾದವರ ಪೈಕಿ ಇಬ್ಬರಿಗೆ ಕೊರೋನಾ ವೈರಸ್ ಶಂಕೆ| ಆಸ್ಪತ್ರೆಯಲ್ಲಿ ಚಿಕಿತ್ಸೆ| 10ಕ್ಕೂ ಹೆಚ್ಚು ಜನರ ಮೇಲೆ ಆರೋಗ್ಯ ಇಲಾಖೆ ನಿಗಾ| ರಕ್ತ, ಗಂಟಲು ದ್ರವ ಮಾದರಿ ವೈರಾಣು ಪ್ರಯೋಗಾಲಯಕ್ಕೆ ರವಾನೆ|
ಬೀದರ್(ಮಾ.15): ಜಿಲ್ಲೆಯ ವಿವಿಧೆಡೆ ವಿದೇಶದಿಂದ ವಾಪಸ್ಸಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲಿಯೇ ಕೊರೋನಾ ವೈರಸ್ ಬಾಧೆಯ ಶಂಕಿತ ರೋಗಿಗಳ ಸಂಖ್ಯೆಯೂ ಏರುತ್ತಿದ್ದು, ಬಸವಕಲ್ಯಾಣ ತಾಲೂಕಿನ ಕಿಟ್ಟಾ ಹಾಗೂ ಮಂಠಾಳ ಗ್ರಾಮಕ್ಕೆ ವಿದೇಶದಿಂದ ವಾಪಸ್ಸಾದವರ ಪೈಕಿ ಇಬ್ಬರ ಆರೋಗ್ಯ ಮೇಲೆ ಅನುಮಾನ ವ್ಯಕ್ತವಾಗಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬಸವಕಲ್ಯಾಣ ತಾಲೂಕಿನ ಕಿಟ್ಟಾ ಹಾಗೂ ಮಂಠಳಾಕ್ಕೆ ಗ್ರಾಮಕ್ಕೆ ಸೌದಿ ಅರೇಬಿಯಾ ಹಾಗೂ ಓಮನ್‌ದಿಂದ ವಾಪಸ್ಸಾದ 15 ಕ್ಕೂ ಹೆಚ್ಚು ಜನರ ಪೈಕಿ ಇಬ್ಬರು ಜ್ವರ ಬಾಧೆಯಿಂದ ಬಳಲುತ್ತಿರುವದು ಕೊರೋನಾ ಶಂಕೆಯನ್ವಯ ಚಿಕಿತ್ಸೆ ಕಲ್ಪಿಸಲಾಗಿದೆ.
undefined
ಮಾಸ್ಕ್ ಧರಿಸಿಯೇ ಪೋಸ್ ಕೊಟ್ಟ ಜೋಡಿ, ಕೊರೋನಾ ಫೋಟೋ ಶೂಟ್ ನೋಡಿ
ಔರಾದ್ ಮೂಲದ ಇಬ್ಬರು ವಿದೇಶದಿಂದ ವಾಪಸ್ಸಾಗುತ್ತಿದ್ದಂತೆ ಅವರ ಕುಟುಂಬದವರು ಸೇರಿ ನಾಲ್ವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ಕಲ್ಪಿಸಿ ಅವರಿಗೆ ಕೊರೋನಾ ಬಾಧೆ ಇಲ್ಲ ಎಂಬುವುದು ಸಾಬೀತಾದ ಬೆನ್ನಲ್ಲಿಯೇ ಈ ಇಬ್ಬರ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದೆ. ಇವರ ರಕ್ತ, ಗಂಟಲು ದ್ರವ ಮಾದರಿಯನ್ನು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
15 ದಿನಗಳ ಹಿಂದೆ ವಿದೇಶದಿಂದ ವಾಪಸ್ಸಾಗಿದ್ದ ಇವರು ಇದೀಗ ಕೊರೋನಾ ಬಾಧಿತರೇ ಎಂಬ ಅನುಮಾನ ವ್ಯಕ್ತವಾಗಿದ್ದು ಅವರುಗಳನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ. ಕಿಟ್ಟಾ ಹಾಗೂ ಮಂಠಾಳ ಗ್ರಾಮದ ನೂರಾರು ಜನರು ವಿದೇಶದಲ್ಲಿ ವಾಸವಾಗಿದ್ದು ಈ ಪೈಕಿ ಒಬ್ಬೊಬ್ಬರಾಗಿ ವಾಪಸ್ಸಾಗುತ್ತಿದ್ದಾರೆ. ಈ ಪೈಕಿ 10ಕ್ಕೂ ಹೆಚ್ಚು ಜನರ ಮೇಲೆ ಆರೋಗ್ಯ ಇಲಾಖೆ ನಿಗಾವಹಿಸಿದೆ.
ತಾಪಮಾನಕ್ಕೂ, ಕೊರೋನಾ ವೈರಸ್ ಹೆಚ್ಚಳಕ್ಕೂ ಸಂಬಂಧವಿದೆಯಾ?
ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿ.ಜಿ ರೆಡ್ಡಿ ಅವರು ಮಾತನಾಡಿ, ಬಸವಕಲ್ಯಾಣ ತಾಲೂಕಿನ ಕಿಟ್ಟಾ ಹಾಗೂ ಮಂಠಾಳ ಗ್ರಾಮದ ಇಬ್ಬರು ಕಳೆದ 10 ದಿನಗಳ ಹಿಂದಷ್ಟೇ ವಿದೇಶದಿಂದ ವಾಪಸ್ಸಾಗಿದ್ದು ಅವರಿಗೆ ಜ್ವರ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ ಇನ್ನು ಈ ಗ್ರಾಮಗಳಿಗೆ ವಿದೇಶದಿಂದ ವಾಪಸ್ಸಾಗಿರುವ ಇನ್ನಿತರ ಹತ್ತು ಹಲವರ ಮೇಲೆ ನಿಗಾವಹಿಸಲಾಗಿದೆ ಎಂದರು.
ತಕ್ಷಣವೇ ಆರೋಗ್ಯಾಧಿಕಾರಿಗಳಿಗೆ ತಲುಪಬೇಕು ಅದಕ್ಕಾಗಿ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.