ಕಲಬುರಗಿ: ಕೆಲ ರೈಲುಗಳ ಸಂಚಾರ ರದ್ದು

Kannadaprabha News   | Asianet News
Published : Mar 15, 2020, 11:26 AM IST
ಕಲಬುರಗಿ: ಕೆಲ ರೈಲುಗಳ ಸಂಚಾರ ರದ್ದು

ಸಾರಾಂಶ

ಮಾ.13 ರಿಂದ ಮಾರ್ಚ್ 31 ರವರೆಗೆ ಕೆಲ ರೈಲುಗಳ ಸಂಚಾರ ರದ್ದು| ರೈಲ್ವೆ ಇಲಾಖೆಯಿಂದ ಆದೇಶ| ವಿಜಯಪುರ-ರಾಯಚೂರು ಪ್ಯಾಸೆಂಜರ್ ರೈಲು ಸೊಲ್ಲಾಪುರದವರೆಗೆ ಮಾತ್ರ ಸಂಚಾರ| 

ಕಲಬುರಗಿ(ಮಾ.15):  ಮಾ.13 ರಿಂದ ಮಾರ್ಚ್ 31 ರವರೆಗೆ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದ ಇಲಾಖೆ ಇನ್ನೂ ಕೆಲ ರೈಲುಗಳ ಮಾರ್ಗ ರದ್ದುಗೊಳಿಸಲಾಗಿದೆ. 

ವಾಡಿ-ಸೊಲ್ಲಾಪುರ (71306) ಪ್ಯಾಸೆಂಜರ್ ರೈಲನ್ನು ಇದೇ 14 ರಿಂದ 31 ರವರೆಗೆ, ಕಲಬುರಗಿ-ಸೊಲ್ಲಾಪುರ (57628) ಪ್ಯಾಸೆಂಜರ್ ರೈಲನ್ನು ಇದೇ 13ರಿಂದ 30ರವರೆಗೆ, ಕಲಬುರಗಿ-ವಾಡಿ ಡೆಮು ರೈಲನ್ನು 13ರಿಂದ 30ರವರೆಗೆ ರದ್ದುಗೊಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಜಯಪುರ-ರಾಯಚೂರು (57133) ಪ್ಯಾಸೆಂಜರ್ ರೈಲು ಸೊಲ್ಲಾಪುರದವರೆಗೆ ಮಾತ್ರ ಸಂಚರಿಸಲಿದೆ. ರಾಯಚೂರು-ವಿಜಯಪುರ ಪ್ಯಾಸೆಂಜರ್ ರೈಲು ಸೊಲ್ಲಾಪುರದಿಂದ ವಿಜಯಪುರದವರೆಗೆ ಮಾತ್ರ ಸಂಚರಿಸಲಿದೆ. ಸೊಲ್ಲಾಪುರ-ಗುಂತಕಲ್ ಡೆಮು ರೈಲು ಮಾರ್ಚ್ 14ರಿಂದ 31ರವರೆಗೆ ಸೊಲ್ಲಾಪುರದ ಬದಲು ಕಲಬುರಗಿ-ಗುಂತಕಲ್ ಮಧ್ಯೆ ಮಾತ್ರ ಸಂಚರಿಸಲಿದೆ. ಸೊಲ್ಲಾಪುರ ಫಲಕನಮಾ ಪ್ಯಾಸೆಂಜರ್ ರೈಲು ಮಾ 13ರಿಂದ 30ರವರೆಗೆ ಕಲಬುರಗಿಯಿಂದ ಫಲಕನಮಾ ಮಧ್ಯೆ ಸಂಚರಿಸಲಿದೆ.
 

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್