ಬನ್ನೇರುಘಟ್ಟ ಉದ್ಯಾನವನ ಬಂದ್

By Kannadaprabha NewsFirst Published Mar 15, 2020, 9:15 AM IST
Highlights

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. 

ಆನೇಕಲ್ [ಮಾ.15]: ಕರೋನಾ ವೈರಸ್ ಭೀತಿ ಹಿನ್ನೆಲಯಲ್ಲಿ ಮಾ. 15ರಿಂದ 23 ರ ತನಕ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. 

ಈ ಸಂಬಂಧ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉದ್ಯಾನವನದ ಆಡಳಿತ ಅಧಿಕಾರಿ ವನಶ್ರೀ ಪಿನ್‌ಸಿಂಗ್, ಎಲ್ಲೆಡೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಪ್ರಾಣಿಗಳ ಹಿತದೃಷ್ಟಿಯಿಂದಾಗಿ ಮಾ.23ರ ತನಕ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. 

ದೇಶದಲ್ಲಿ 100 ಜನರಿಗೆ ಸೋಂಕು, 10 ಮಂದಿ ಗುಣಮುಖ...

ಆದರೆ, ಕಚೇರಿ ಎಂದಿನಂತೆ ಕೆಲಸ ಮಾಡಲಿದೆ. ಪ್ರಾಣಿಗಳಿಗೆ  ಪೂರೈಸುತ್ತಿರುವ ಆಹಾರವನ್ನು ಎಂದಿಗಿಂತ ಹೆಚ್ಚು ತಪಾಸಣೆಗೊಳಪಡಿಸಿ ನೀಡಲಾಗುವುದು. 

ಆವರಣ ವನ್ನು ಸ್ವಚ್ಛವಾಗಿ ಇಡಲಾಗುವುದು. ಪ್ರಾಣಿಗಳ ಚಲನ ವಲನದ ಮೇಲೆ ಸಹಾ ನಿಗಾ ಇಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು. 

click me!