ಕಲಬುರಗಿ: MLC ಸುನೀಲ ವಲ್ಯಾಪೂರೆ, ಪುತ್ರನಿಗೆ ಕೊರೋನಾ ಸೋಂಕು

By Kannadaprabha News  |  First Published Sep 10, 2020, 2:35 PM IST

ವಿಧಾನ ಪರಿಷತ್‌ ಸದಸ್ಯ ಸುನೀಲ್‌ ವಲ್ಯಪೂರೆ ಹಾಗೂ ಅವರ ಪುತ್ರ ವಿನಯ್‌ ವಲ್ಯಾಪೂರೆಗೆ ಕೊರೋನಾ| ವೈದ್ಯರ ಸಲಹೆಯಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು| ಬೇಗ ಗುಣಮುಖರಾಗಲಿ ಎಂದು ಮಂದಿರಗಳಲ್ಲಿ ಪೂಜೆ- ಪ್ರಾರ್ಥನೆ ಮಾಡಿದ ವಲ್ಯಾಪೂರೆ ಅಭಿಮಾನಿಗಳು| 


ಕಲಬುರಗಿ(ಸೆ.10): ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಮಂತ್ರಿ ಸುನೀಲ್‌ ವಲ್ಯಪೂರೆ ಹಾಗೂ ಅವರ ಪುತ್ರ ವಿನಯ್‌ ವಲ್ಯಾಪೂರೆ ಇವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಇಬ್ಬರೂ ವೈದ್ಯರ ಸಲಹೆಯಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕು ಪತ್ತೆಯಾಗಿದ್ದರೂ ಸೋಂಕಿನ ಹೆಚ್ಚಿನ ಲಕ್ಷಣಗಲಿಲ್ಲ. ಆದಾಗ್ಯೂ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ, ತಂದೆ- ಮಗನ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬದ ಮೂಲಗಲು ತಿಳಿಸಿವೆ. 

Tap to resize

Latest Videos

ಕಲಬುರಗಿ: ದಾರಿ ಹೋಕನಿಗೆ ಚಾಕುವಿನಿಂದ ಮನಬಂದಂತೆ ಇರಿದ ರೌಡಿಶೀಟರ್‌

ಸುನೀಲ್‌ ವಲ್ಯಪೂರೆ ಹಾಗೂ ಅವರ ಪುತ್ರ ವಿನಯ್‌ ವಲ್ಯಾಪೂರೆ ಅವರುಗಳು ಬೇಗ ಗುಣಮುಖರಾಗಲಿ ಎಂದು ವಲ್ಯಾಪೂರೆ ಅಭಿಮಾನಿಗಳು ಮಂದಿರಗಳಲ್ಲಿ ಪೂಜೆ- ಪ್ರಾರ್ಥನೆ ಮಾಡಿದ್ದಾರೆ. 
 

click me!