ಲೋಕಲ್ ಕ್ಲಿನಿಕ್‌ಗಳಿಗೆ ಎಚ್ಚರ;  ಕೊರೋನಾ ಲಕ್ಷಣವಿರುವವರಿಗೆ ಚಿಕಿತ್ಸೆ ನೀಡಿದ್ರೆ ಕೇಸ್

By Suvarna NewsFirst Published May 20, 2021, 11:59 PM IST
Highlights

* ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ವ್ಯಾಪಕವಾಗುತ್ತಿರುವುದಕ್ಕೆ ಕಾರಣ 
* ಸ್ಥಳೀಯ ವೈದ್ಯರಿಂದ ತಾತ್ಕಾಲಿಕ ಉಪಶಮನ ಪಡೆದುಕೊಳ್ಳುತ್ತಿರುವುದರಿಂದ ಸಮಸ್ಯೆ ಸೃಷ್ಟಿ
* ಪರೀಕ್ಷೆ ಮಾಡಿಸಿಕೊಂಡು ಮೊದಲ ಹಂತದಲ್ಲೆ ಗೊತ್ತಾದರೆ ಚಿಕಿತ್ಸೆ ಸುಲಭ

ಉಡುಪಿ(ಮೇ 20)  ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಕೋವಿಡ್ ಸೋಂಕಿತರು ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾರ್ವಜನಿಕರು ಪ್ರಾರಂಭದಲ್ಲಿ ಸ್ಥಳೀಯ ಕ್ಲಿನಿಕ್/ಡಾಕ್ಟರ್ ಹತ್ತಿರ ಹೋಗಿ ಕೋವಿಡ್ ಸೋಂಕಿನ ಲಕ್ಷಣವಾದ ಜ್ವರ, ಶೀತ,ಕೆಮ್ಮು, ಮುಂತಾದವುಗಳಿಗೆ ಮದ್ದನ್ನು ವೈದ್ಯರಿಂದ ಪಡೆಯುತ್ತಿದ್ದು, ನಂತರ ರೋಗ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.ಅಲ್ಲದೆ ಕೆಲವು ರೋಗಿಗಳು ತುಂಬಾ ಉಲ್ಬಣಗೊಂಡ ನಂತರ ದಾಖಲಾಗುವುದರಿಂದ ಮರಣ ಹೊಂದುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಲಕ್ಷಣವಾದ ಕೆಮ್ಮು, ಜ್ವರ, ಮೈ ಕೈ ನೋವು ಮುಂತಾದವುಗಳು ಕಂಡು ಬಂದತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅವಶ್ಯಕವಾಗಿದ್ದು ದೃಢವಾದರೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.ಆದರೆ ಪ್ರಾರಂಭದಲ್ಲಿ ಸ್ಥಳೀಯ ವೈದ್ಯರಿಂದ ತಾತ್ಕಾಲಿಕ ಉಪಶಮನ ಪಡೆಯುವುದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದರೂ, ದಿನ ಕಳೆದಂತೆ ರೋಗ ಲಕ್ಷಣಗಳು ಉಲ್ಬಣಗೊಂಡು ಕೊನೆಯ ಹಂತದಲ್ಲಿಆಸ್ಪತ್ರೆಗೆ ದಾಖಲಾದಾಗ ಸಮಸ್ಯೆಯಾಗುತ್ತದೆ.

ರಿಯಲ್ ಟೈಮ್ ಡ್ಯಾಶ್ ಬೋರ್ಡ್ ನೋಡುವುದು ಹೇಗೆ? 

ರೋಗಿಗಳಲ್ಲಿ ಕೋರೋನಾ ಸೋಂಕು ಲಕ್ಷಣಕಂಡು ಬಂದಲ್ಲಿ ವೈದ್ಯರು ತಾತ್ಕಾಲಿಕ ಉಪಶಮನ ಚಿಕಿತ್ಸೆ ನೀಡದೆ , ನೇರವಾಗಿ ಕೊರೋನಾ ಸೋಂಕಿನ ಬಗ್ಗೆ ಪರೀಕ್ಷೆ ಮಾಡಿ ವರದಿ ಪಡೆಯಲು ಕಡ್ಡಾಯವಾಗಿ ಸೂಚನೆ ನೀಡಬೇಕು. ಕ್ಲಿನಿಕ್ ನಲ್ಲಿ ಸ್ಥಳೀಯ ಕೋರೋನಾ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗ ಉಲ್ಬಣಗೊಂಡು ರೋಗಿಗಳು ಮೃತಪಟ್ಟ ಪ್ರಕರಣಗಳು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು 2020 ರ ಕಾಯಿದೆರಂತೆ ಕ್ರಮಕೈಗೊಳ್ಳಲಾಗುವುದು ಅಲ್ಲದೆ ಅಂತವರ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲು ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.


ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!