ಸೋಂಕಿತೆ ಜೊತೆ ಪರೀಕ್ಷೆ ಬರೆದವರಿಗೆ ಕೊರೋನಾ ಟೆಸ್ಟ್: ವಿದ್ಯಾರ್ಥಿಗಳಲ್ಲಿ ಆತಂಕ

By Suvarna News  |  First Published Jul 2, 2020, 3:28 PM IST

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.


ಮಂಡ್ಯ(ಜು.02): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಮಂಡ್ಯದಲ್ಲಿ ವಿದ್ಯಾರ್ಥಿಗಳಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ SSLC ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ವಿದ್ಯಾರ್ಥಿನಿಯ ಜೊತೆ ಪರೀಕ್ಷೆ ಬರೆದ ಅಷ್ಟೂ ವಿದ್ಯಾರ್ಥಿಗಳ ಟೆಸ್ಟ್ ನಡೆಸಲಾಗಿದೆ.

Tap to resize

Latest Videos

3 ಪರೀಕ್ಷೆ ಬರೆದು, ನಾಲ್ಕನೇ ಪರೀಕ್ಷೆ ತಯಾರಿಯಲ್ಲಿದ್ದ SSLC ವಿದ್ಯಾರ್ಥಿನಿಗೆ ಕೊರೋನಾ..!

ಸೋಂಕಿತೆ ಜೊತೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸ್ಪ್ಯಾಬ್ ಟೆಸ್ಟ್ ನಡೆಸಲಾಗಿದ್ದು, ಪಾಂಡವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿ ಪರೀಕ್ಷಾ ಕೊಠಡಿಯಲ್ಲಿದ್ದ ಎಲ್ಲರಿಗೂ ಪರೀಕ್ಷೆ ನಡೆಸಲಾಗುತ್ತಿದೆ.

ನಿನ್ನೆ ಈ ವಿದ್ಯಾರ್ಥಿನಿಯ ತಂದೆಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯಿಂದ ಕರೆದು ಹೋಗಲಾಗಿತ್ತು. ಇಂದು ವಿದ್ಯಾರ್ಥಿನಿಗೆ ಪಾಸಿಟಿವ್ ಇರುವುದು ದೃಢವಾಗಿದೆ. ಪಾಂಡವಪುರದ SSLC ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!